
ಚೇತನಾ ರಾಜ್, ರಮ್ಯಾ
Chetana Raj Death: ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ರಮ್ಯಾ ಅವರು ಹಲವು ವಿಷಯಗಳ ಕುರಿತು ಪ್ರತಿಕ್ರಿಯಿಸುತ್ತಾರೆ. ಚೇತನಾ ರಾಜ್ ನಿಧನದ ವಿಚಾರ ಅವರನ್ನು ಬಹುವಾಗಿ ಕಾಡಿದೆ.
ಚಿತ್ರರಂಗದಲ್ಲಿ ಮಿಂಚಬೇಕು ಎಂದು ಕನಸು ಕಂಡಿದ್ದ 22ರ ಪ್ರಾಯದ ನಟಿ ಚೇತನಾ ರಾಜ್ (Chetana Raj) ಅವರು ನಿಧನರಾಗಿದ್ದು ನೋವಿನ ಸಂಗತಿ. ಮೇ 17ರಂದು ಅವರು ಫ್ಯಾಟ್ ಸರ್ಜರಿ ವೈಫಲ್ಯದಿಂದ ಕೊನೆಯುಸಿರೆಳೆದರು. ಈ ಘಟನೆ ಕುರಿತು ನಟಿ ರಮ್ಯಾ (Ramya Divya Spandana) ಅವರು ಪ್ರತಿಕ್ರಿಯೆ ನೀಡಿದ್ದಾರೆ. ಚಿತ್ರರಂಗದಲ್ಲಿ ಸೌಂದರ್ಯದ ಕುರಿತಂತೆ ನಟಿಯರ ಮೇಲೆ ಯಾವ ರೀತಿ ಒತ್ತಡ ಹೇರಲಾಗುತ್ತದೆ ಎಂಬುದನ್ನು ಅವರು ವಿವರಿಸಿದ್ದಾರೆ. ಅಲ್ಲದೇ, ಈ ರೀತಿಯ ಒತ್ತಡಗಳನ್ನು ತೆಗೆದುಹಾಕಬೇಕು ಎಂದು ರಮ್ಯಾ ಹೇಳಿದ್ದಾರೆ. ಒಟ್ಟಾರೆ ಘಟನೆಯ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ರಮ್ಯಾ ಹೇಳಿದ ಮಾತಿಗೆ ಅನೇಕರು ಸಹಮತ ಸೂಚಿಸಿದ್ದಾರೆ. ಅವರು ಕನ್ನಡದಲ್ಲಿ ಟ್ವೀಟ್ ಮಾಡಿಲ್ಲ ಎಂದು ಕೆಲವರು ತಕರಾರು ತೆಗೆದಿದ್ದಾರೆ. ಅದೇನೇ ಇರಲಿ, ಒಂದು ಮುಖ್ಯ ವಿಚಾರದ ಬಗ್ಗೆ ರಮ್ಯಾ (Ramya) ಧ್ವನಿ ಎತ್ತಿರುವುದು ಚರ್ಚೆಗೆ ಕಾರಣ ಆಗಿರುವುದಂತೂ ನಿಜ. ನಟನೆಯಿಂದ ದೂರ ಉಳಿದುಕೊಂಡಿದ್ದರೂ ಕೂಡ ಅವರು ಚಿತ್ರರಂಗದ ಆಗುಹೋಗುಗಳನ್ನು ಗಮನಿಸುತ್ತಾ ಇರುತ್ತಾರೆ. ಈಗ ಚೇತನಾ ರಾಜ್ ಸಾವಿಗೆ ಮರುಕ ವ್ಯಕ್ತಪಡಿಸುವುದರ ಜೊತೆಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ರಮ್ಯಾ ಅವರು ಹಲವು ವಿಷಯಗಳ ಕುರಿತು ಪ್ರತಿಕ್ರಿಯಿಸುತ್ತಾರೆ. ಚೇತನಾ ರಾಜ್ ನಿಧನದ ವಿಚಾರ ಅವರನ್ನು ಬಹುವಾಗಿ ಕಾಡಿದೆ. ‘ಪ್ಲಾಸ್ಟಿಕ್ ಸರ್ಜರಿ ಬಳಿಕ ಮೃತರಾದ ಯುವ ನಟಿಯ ಬಗ್ಗೆ ಸುದ್ದಿ ಓದಿ ತಿಳಿದುಕೊಂಡೆ. ಮಹಿಳೆಯರ ಮೇಲೆ ಅಸಹಜವಾದ ಬ್ಯೂಟಿ ಸ್ಟ್ಯಾಂಡರ್ಡ್ಗಳನ್ನು ಹೇರಲಾಗುತ್ತದೆ. ಯಾವ ರೀತಿ ಕಾಣಬೇಕು ಎಂಬ ಬಗ್ಗೆ ಮಹಿಳೆಯರ ಮೇಲೆ ತೀವ್ರ ಒತ್ತಡ ಇದೆ. 2018ರಲ್ಲಿ ಕಾಲಿನ ಟ್ಯೂಮರ್ ರಿಮೂವಲ್ ಬಳಿಕ ನಾನು ಕೂಡ ದೇಹದ ತೂಕದ ಸಮಸ್ಯೆಯಿಂದ ಕಷ್ಟ ಅನುಭವಿಸಿದೆ. ನಾನು ನನ್ನದೇ ಆದಂತಹ ಮಾರ್ಗದ ಮೂಲಕ ತೂಕ ಕಡಿಮೆ ಮಾಡಿಕೊಂಡೆ. ಅನೇಕ ಶೀಘ್ರ ಪರಿಹಾರಗಳಿಗೆ ಆಕರ್ಷಿತರಾಗುವುದು ಸುಲಭ’ ಎಂದು ರಮ್ಯಾ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.