ಆಸ್ಪತ್ರೆಯ ಬದಲಿಗೆ ಗೆಸ್ಟ್​​ಹೌಸ್​​ನಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಟೀಮ್​ ಇಂಡಿಯಾ ಸ್ಪಿನ್ನರ್​​ ಕುಲ್ದೀಪ್​ ಯಾದವ್​ ವಿರುದ್ಧ ತನಿಖೆ ಕೈಗೊಳ್ಳಲಾಗಿದೆ. ಉತ್ತರ ಪ್ರದೇಶ ಕಾನ್ಪುರದ ಗೋವಿಂದ ನಗರದಲ್ಲಿ ಜಗೇಶ್ವರ್​​ ಆಸ್ಪತ್ರೆಯಲ್ಲಿ ಮೊದಲ ಡೋಸ್​​ಗಾಗಿ ಹೆಸರು ನೋಂದಾಯಿಸಿಕೊಂಡಿದ್ದ ಕುಲ್ದೀಪ್​, ಆಸ್ಪತ್ರೆಯ ಬದಲಿಗೆ ಕಾನ್ಪುರದ ನಿಗಮ್​ ಗೆಸ್ಟ್​​ಹೌಸ್​ ಎಂಬಲ್ಲಿ ಲಸಿಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

ಈ ಕುರಿತು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಕಾನ್ಪುರ ಆಡಳಿತಾಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಶೀಘ್ರ ವರದಿ ಸಲ್ಲಿಸುವಂತೆ ಎಡಿಎಂ ಅತುಲ್ ಕುಮಾರ್ ಅವರಿಗೆ ಕಾನ್ಪುರ ಜಿಲ್ಲಾಧಿಕಾರಿ ಅಲೋಕ್ ತಿವಾರಿ ಸೂಚಿಸಿದ್ದಾರೆ. ಮೇ 15ರಂದು ಮೊದಲ ವ್ಯಾಕ್ಸಿನ್ ಪಡೆದುಕೊಂಡಿದ್ದ ಕುಲ್ದೀಪ್, ಅದರ ಫೋಟೋವನ್ನು ಟ್ವಿಟರ್​​ನಲ್ಲಿ ಪೋಸ್ಟ್​​ ಮಾಡಿ, ಎಲ್ಲರೂ ವಾಕ್ಸಿನ್ ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದ್ದರು.

The post ಚೈನಾಮೆನ್​ ಸ್ಪಿನ್ನರ್​ ಕುಲ್​ದೀಪ್ ಯಾದವ್ ವಿರುದ್ಧ ತನಿಖೆಗೆ ಆಗ್ರಹ..! appeared first on News First Kannada.

Source: newsfirstlive.com

Source link