ನವದೆಹಲಿ:  ಭಾರತದಲ್ಲಿ ಆರ್ಥಿಕ ವಂಚನೆ ಆರೋಪಿಯಾಗಿರುವ ವ್ರಜ ಉದ್ಯಮಿ ಮೆಹುಲ್​ ಚೋಕ್ಸಿಯನ್ನು ಡೊಮಿನಿಕಾದಲ್ಲಿ ಅರೆಸ್ಟ್​ ಮಾಡಲಾಗಿದ್ದು, ಆತನನ್ನು ದೇಶಕ್ಕೆ ಕರೆತರುವ ಪ್ರಯತ್ನ ನಡೀತಿದೆ. ದೇಶದ ವಿವಿಧ ತನಿಖಾ ಸಂಸ್ಥೆಗಳು ಡೊಮಿನಿಕಾ ಸರ್ಕಾರದೊಂದಿಗೆ ಸಂಪರ್ಕದಲ್ಲಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಚೋಕ್ಸಿ ಭಾರತೀಯ ನಾಗರೀಕನಾಗಿದ್ದು, ದೇಶದಲ್ಲಿ ಬರೋಬ್ಬರಿ 2 ಬಿಲಿಯನ್ ಯುಸ್​ ಡಾಲರ್​​(ಸುಮಾರು 14 ಸಾವಿರ ಕೋಟಿ ರೂಪಾಯಿ) ಮೊತ್ತದ​​ ವಂಚನೆ ಎಸಗಿದ್ದಾನೆ. ಆದ್ದರಿಂದ ತಪ್ಪಿಸಿಕೊಳ್ಳಲು ಹೊಸ ಪೌರತ್ವ ಪಡೆದಿದ್ದಾನೆ. ಹೀಗಾಗಿ ಆತನನ್ನು ನಮಗೆ ಹಸ್ತಾಂತರ ಮಾಡಿ ಎಂದು ಕೇಂದ್ರ ಸರ್ಕಾರ ಡೊಮಿನಿಕಾಗೆ ಹೇಳಿದೆ ಎಂದು ವರದಿಯಾಗಿದೆ.

ಚೋಕ್ಸಿಯನ್ನು ಪರಾರಿಯಾಗಿರೋ ಭಾರತೀಯ ಪ್ರಜೆಯೆಂದು ಪರಿಗಣಿಸಬೇಕು. ಆತನ ವಿರುದ್ಧ ಇಂಟರ್ಪೋಲ್​​ ರೆಡ್​​ ಕಾರ್ನರ್​​​​ ನೋಟಿಸ್​ ಹೊರಡಿಸಿದೆ. ಆತನನ್ನು ಗಡಿಪಾರು ಮಾಡಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಬೇಕು ಎಂದು ಭಾರತ ರಾಜತಾಂತ್ರೀಕ ಮಾರ್ಗದ ಮೂಲಕ ಡೊಮಿನಿಕಾಗೆ ಸ್ಪಷ್ಟ ಸಂದೇಶ ರವಾನಿಸಿದೆ ಎಂಬ ಮಾಹಿತಿ ಲಭಿಸಿದೆ.

ನೆರೆರಾಷ್ಟ್ರ ಆಂಟಿಗುವಾ ಕೂಡ ಚೋಕ್ಸಿಯನ್ನು ನೇರವಾಗಿ ಭಾರತಕ್ಕೆ ಹಸ್ತಾಂತರ ಮಾಡುವಂತೆ ಡೊಮಿನಿಕಾಗೆ ಒತ್ತಾಯಿಸಿದೆ. ಆದರೆ ಇದುವರೆಗೂ ಚೋಕ್ಸಿಯನ್ನು ಹಸ್ತಾಂತರ ಮಾಡುವ ಬಗ್ಗೆ ಡೊಮಿನಿಕಾ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ ಎನ್ನಲಾಗಿದೆ.

The post ಚೋಕ್ಸಿ ದೊಡ್ಡ ಅಪರಾಧ ಮಾಡಿದ್ದಾನೆ, ನಮಗೆ ಒಪ್ಪಿಸಿ; ಡೊಮಿನಿಕಾಗೆ ಭಾರತದ ಒತ್ತಾಯ appeared first on News First Kannada.

Source: newsfirstlive.com

Source link