ಕೋವಿಡ್ ಸಾಂಕ್ರಾಮಿಕ ರೋಗದ ಕಾರಣದಿಂದ 12 ನೇ ತರಗತಿಯ CGBSE ಪರೀಕ್ಷೆಗಳನ್ನು ಮನೆಯಿಂದಲೇ ನಡೆಸಲು ಛತ್ತೀಸ್​ ಗಢ ಪ್ರೌಢ ಶಿಕ್ಷಣ ಮಂಡಳಿ ತೀರ್ಮಾನಿಸಿದೆ.

ಈ ಹೊಸ ಮಾದರಿಯ ಅಡಿಯಲ್ಲಿ ವಿದ್ಯಾರ್ಥಿಗಳು ನಿಗದಿತ ಕೇಂದ್ರಗಳಿಂದ ಪ್ರಶ್ನೆ ಪತ್ರಿಕೆಗಳು ಮತ್ತು ಖಾಲಿ ಉತ್ತರ ಪತ್ರಿಕೆಗಳನ್ನು ಸಂಗ್ರಹಿಸಬಹುದು. ಪ್ರಶ್ನೆ ಪತ್ರಿಕೆ ಮತ್ತು ಖಾಲಿ ಉತ್ತರ ಪತ್ರಿಕೆಗಳನ್ನು ಮನೆಗೆ ತೆಗೆದುಕೊಂಡು ಹೋಗಿ ಐದು ದಿನದಲ್ಲಿ ಉತ್ತರ ಬರೆದು ಸಲ್ಲಿಸಲು ತಿಳಿಸಲಾಗಿದೆ. ಜೂನ್ 1 ರಿಂದ 5 ರವರೆಗೆ 5 ದಿನಗಳ ಕಾಲ ಕಾಲಾವಕಾಶ ನೀಡಲಾಗುತ್ತದೆ. 2.86 ಲಕ್ಷ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಛತ್ತೀಸ್​ ಗಢ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಕಾರ್ಯದರ್ಶಿ ವಿ.ಕೆ. ಗೋಯಲ್ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದಾರೆ.

The post ಛತ್ತೀಸ್​ಗಢದಲ್ಲಿ 12ನೇ ತರಗತಿಯ ಮಕ್ಕಳಿಗೆ ಮನೆಯಲ್ಲೇ ನಡೆಯುತ್ತೆ ಪರೀಕ್ಷೆ appeared first on News First Kannada.

Source: newsfirstlive.com

Source link