ಛತ್ತೀಸ್​ಘಡ್​ನಲ್ಲಿ ಭರ್ಜರಿ ಕಾರ್ಯಾಚರಣೆ; 8 ನಕ್ಸಲೈಟ್​ ಅರೆಸ್ಟ್


ನವದೆಹಲಿ: ಛತ್ತೀಸ್​ಘಡದ ಮಾರ್​​​ಪಳ್ಳಿಯಲ್ಲಿ 8 ನಕ್ಸಲರನ್ನ ಬಂಧಿಸಲಾಗಿದೆ. ಸುಕ್ಮಾ ಪೊಲೀಸರು ಮತ್ತು CRPF ಪಡೆ ಜಂಟಿ ಕಾರ್ಯಾಚರಣೆ ನಡೆಸಿ ಇವರನ್ನ ಬಂಧಿಸಲಾಗಿದೆ.

ಬಂಧಿತ 8 ನಕ್ಸಲರಲ್ಲಿ ಇಬ್ಬರು ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಬಂಧಿತರಿಂದ ಭಾರೀ ಪ್ರಮಾಣದ IED ಸ್ಫೋಟಕಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಎಸ್​ಪಿ ಸುನೀಲ್ ಶರ್ಮಾ, ನಕ್ಸಲರು ಅಡಗಿರುವ ಬಗ್ಗೆ ಗುಪ್ತಚರ ಇಲಾಖೆಯಿಂದ ನವೆಂಬರ್ 2 ರಂದು ಮಾಹಿತಿ ಸಿಕ್ಕಿತ್ತು. ಅದರಂತೆ ಕಾರ್ಯಾಚರಣೆ ಮಾಡಲಾಯಿತು.

ಕವಾಸಿ ರಾಜು ಅಲಿಯಾಸ್ ಸಂತು ಎಂಬ ನಕ್ಸಲನನ್ನೂ ಬಂಧಿಸಲಾಗಿದೆ. ಈತ militia company ಕಂಮಾಂಡರ್​ ಆಗಿದ್ದಾನೆ. ಹೇಯ ಕೃತ್ಯಗಳಲ್ಲಿ ಭಾಗಿಯಾಗಿದ್ದ ಇಬ್ಬರು ನಕ್ಸಲರನ್ನ ಬಂಧಿಸಲು 8 ಲಕ್ಷ ರೂಪಾಯಿ ಘೋಷಣೆ ಮಾಡಲಾಗಿತ್ತು ಎಂದು ಸುನೀಲ್ ತಿಳಿಸಿದ್ದಾರೆ. ಇನ್ನು ಅಕ್ಟೋಬರ್ 31ರಂದು ನಡೆದ ಕಾರ್ಯಾಚರಣೆಯಲ್ಲಿ ಮೂವರು ಮಹಿಳಾ ನಕ್ಸಲೆಟ್​ಗಳನ್ನ ಎನ್​​ಕೌಂಟರ್ ಮಾಡಲಾಗಿತ್ತು.

The post ಛತ್ತೀಸ್​ಘಡ್​ನಲ್ಲಿ ಭರ್ಜರಿ ಕಾರ್ಯಾಚರಣೆ; 8 ನಕ್ಸಲೈಟ್​ ಅರೆಸ್ಟ್ appeared first on News First Kannada.

News First Live Kannada


Leave a Reply

Your email address will not be published. Required fields are marked *