ಹಫ್ತಾ ವಸೂಲಿ ಪ್ರಕರಣವೊಂದರಲ್ಲಿ ಮುಂಬೈ ಮಾಜಿ ಪೊಲೀಸ್ ಕಮೀಷನರ್ ಪರಮ್ ಬೀರ್ ಸಿಂಗ್ ವಿರುದ್ಧ ಕೋರ್ಟ್ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸಿದೆ. ಹಲವು ಬಾರಿ ನೋಟಿಸ್ ನೀಡಿದರೂ ಕೋರ್ಟ್ಗೆ ಹಾಜರಾಗದೆ ಪರಮ್ ಬೀರ್ ಸಿಂಗ್ ತಲೆಮರೆಸಿಕೊಂಡಿದ್ದಾರೆ. ಇವರ ವಿರುದ್ಧ ಜಾರಿಗೊಳಿಸುತ್ತಿರುವ ಮೂರನೇ ಬಂಧನ ವಾರಂಟ್ ಇದಾಗಿದೆ. ನ್ಯಾಯಾಲಯಕ್ಕೆ ನಿರಂತರವಾಗಿ ಹಾಜರಾಗದ ಪರಮ್ ಬೀರ್ ಸಿಂಗ್ ಒಬ್ಬ ಪಲಾಯನಗಾರ ಎಂದು ಕೋರ್ಟ್ ಘೋಷಿಸಿದೆ. ಸದ್ಯದಲ್ಲೇ ಇವರಿಗೆ ರೆಡ್ ಕಾರ್ನರ್ ನೋಟಿಸ್ ಕೂಡ ನೀಡುವ ಸಾಧ್ಯತೆ ಇದೆ. ಒಂದು ವೇಳೆ ಹೀಗಾದರೆ, ದೇಶದಲ್ಲೇ ಮೊದಲ ಬಾರಿಗೆ ರೆಡ್ ಕಾರ್ನರ್ ನೋಟಿಸ್ ಜಾರಿಗೆ ಒಳಗಾದ ಐಪಿಎಸ್ ಅಧಿಕಾರಿ ಇವರಾಗಲಿದ್ದಾರೆ.
ಇನ್ನು, ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ 100 ಕೋಟಿ ಹಫ್ತಾ ವಸೂಲಿ ಮಾಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದರು. ಹೀಗಾಗಿ ಹಫ್ತಾ ವಸೂಲಿಗೆ ಮುಂದಾಗಿದ್ದೆ ಎಂದಿದ್ದರು ಪರಮ್ ಬೀರ್ ಸಿಂಗ್. ಈ ಸಂಬಂಧ ಜುಲೈ 23 ರಂದು ಪರಮ್ ಬೀರ್ ಸಿಂಗ್ ವಿರುದ್ಧ ಗೋರೆಗಾಂವ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯನ್ನು ಮುಂಬೈ ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ: ಸೆಮಿಫೈನಲ್ ಕದನ: ಆಸ್ಟ್ರೇಲಿಯಾಗೆ 177 ರನ್ ಟಾರ್ಗೆಟ್ ನೀಡಿದ ಪಾಕ್