ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದು ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತದಲ್ಲಿ ಸಾವನ್ನಪ್ಪಿದವ್ರ ಕುಟುಂಬದವ್ರನ್ನ ಭೇಟಿಯಾಗಿ, ಸಾಂತ್ವನ ಹೇಳಲಿದ್ದಾರೆ. ಸಿದ್ದರಾಮಯ್ಯರ ಜೊತೆ ಜಂಟಿಯಾಗಿ ಚಾಮರಾಜನಗರಕ್ಕೆ ಹೋಗೋದಾಗಿ ಹೇಳಿದ್ದ ಡಿ.ಕೆ ಶಿವಕುಮಾರ್ ಈಗ ಒಂಟಿಯಾಗಿ ಹೊರಟಿದ್ದಾರೆ. ಇದು ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.

ಹೌದು.. ನಿನ್ನೆ ನಡೆದ ವಿಡಿಯೋ ಕಾನ್ಫರೆನ್ಸ್​ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಹೇಳಿದ್ದೇ ಒಂದು, ಸಭೆಯ ನಂತರ ಮಾತನಾಡಿದ್ದೇ ಇನ್ನೊಂದು. ಸಭೆಯಲ್ಲಿ ನಾನು ಮತ್ತು ಸಿದ್ದರಾಮಯ್ಯ ಜಂಟಿ ಪ್ರವಾಸ ಮಾಡ್ತಿರೋದಾಗಿ ಘೋಷಣೆ ಮಾಡಿದ್ದರು. ಆದರೆ ಸಭೆ ಮುಗಿಯುತ್ತಿದ್ದಂತೆ ನಾನು ಚಾಮರಾಜನಗರಕ್ಕೆ ಹೋಗ್ತಿದ್ದೇನೆ, ನನ್ನಿಂದಲೇ ಈ ಕಾರ್ಯಕ್ರಮ ಆರಂಭ ಅಂತಾ ಹೇಳಿದರು. ಈ ಹೇಳಿಕೆ ಬೆನ್ನಲ್ಲೇ ಶಿವಕುಮಾರ್ ಅವರ ಒಂಟಿ ಪ್ರವಾಸದ ವೇಳಾಪಟ್ಟಿ ಪ್ರಕಟಣೆಯಾಗಿದೆ!

ಇನ್ನು ಶಿವಕುಮಾರ್ ಅವರ ಜಂಟಿ ಪ್ರವಾಸದ ಸ್ಟೇಟ್​​ಮೆಂಟ್​ಗೆ ಯಾವುದೇ ಹೇಳಿಕೆಯನ್ನ ನೀಡದೇ ಸಿದ್ದರಾಮಯ್ಯ ಮೌನವಾಗಿದ್ದರು. ಮೂಲಗಳ ಪ್ರಕಾರ ಚಾಮರಾಜನಗರದ ಪ್ರವಾಸಕ್ಕೆ ಯಾವುದೇ ರೀತಿಯಲ್ಲೂ ಸಿದ್ದರಾಮಯ್ಯ ಸಿದ್ಧತೆ ಮಾಡಿಕೊಂಡಿರಲಿಲ್ಲ ಎನ್ನಲಾಗಿದೆ.

ಮಾತ್ರವಲ್ಲ, ‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ’ ಎಂದು ತಮ್ಮ ಬೆಂಬಲಿಗರೆಲ್ಲ ಡಿಕೆ ಶಿವಕುಮಾರ್ ವಿರುದ್ಧ ನಿಂತು ಹೇಳಿಕೆ ನೀಡುತ್ತಿದ್ದಾರೆ. ಈ ಮಧ್ಯೆ ಡಿಕೆ ಶಿವಕುಮಾರ್ ಜೊತೆ ತಾವು ಪ್ರವಾಸ ಕೈಗೊಂಡರೆ ಆಪ್ತರಿಗೆ ತಪ್ಪು ಸಂದೇಶ ರವಾನೆಯಾಗೋ ಸಾಧ್ಯತೆ. ಅವಕಾಶವಾದಿತನ ತೋರದೆ, ಪ್ರವಾಸದ ಜೊತೆಗೂಡದೇ ಇಂದು ಮನೆಯಲ್ಲೇ ಇರಲು ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ ಅಂತಾ ಹೇಳಲಾಗಿದೆ.

ವಿಶೇಷ ವರದಿ: ವೀರೇಂದ್ರ ಉಪ್ಪುಂದ, ಪೊಲಿಟಿಕಲ್ ಬ್ಯೂರೋ.

The post ‘ಜಂಟಿ ಪ್ರವಾಸ’ ಎಂದಿದ್ದ ಡಿಕೆಎಸ್​ ಈಗ ‘ಒಂಟಿ ಟೂರ್’ -ಮೌನವೇ ಜಾಣ್ಮೆ ಎಂದ ಸಿದ್ದರಾಮಯ್ಯ appeared first on News First Kannada.

Source: newsfirstlive.com

Source link