ಬೆಂಗಳೂರು: ದೇಶಾದ್ಯಂತ ಆಕ್ಸಿಜನ್ ಕೊರತೆ ಬಗ್ಗೆ ಸಾಕಷ್ಟು ವರದಿಯಾಗುತ್ತಲೇ ಇದೆ. ಕೆಲವೆಡೆ ಆಕ್ಸಿಜನ್ ಇಲ್ಲದೆ ರೋಗಿಗಳು ಸಾವನ್ನಪ್ಪುತ್ತಿದ್ದಾರೆ, ಇನ್ನೂ ಕೆಲವೆಡೆ ಆಕ್ಸಿಜನ್ ಸಿಲಿಂಡರ್​ಗಳ ಪೂರೈಕೆಯಲ್ಲಿ ವಿಳಂಬವಾಗಿ ಕೊನೆಯುಸಿರೆಳೆಯುತ್ತಿದ್ದಾರೆ. ಇದರ ಜೊತೆಗೆ ಆಕ್ಸಿಜನ್ ಸಮಸ್ಯೆಗೆ ಮತ್ತೊಂದು ಕಾರಣವನ್ನ ತಜ್ಞರು ಬಿಚ್ಚಿಟ್ಟಿದ್ದಾರೆ.

ಆ್ಯಕ್ಸಿಜನ್ ಕೊರತೆ ಬಗ್ಗೆ ಐಸಿಯು ತಜ್ಞ , ಕೋವಿಡ್​ ವಿಭಾಗದ ಮುಖ್ಯಸ್ಥರಾಗಿ ಕೆಲಸ ಮಾಡ್ತಿರೋ ಜಗದೀಶ್ ಹಿರೇಮರ್ ಅವರು ಮಾತನಾಡಿದ್ದು, ಜಂಬೋ ಸಿಲಿಂಡರ್​ಗಳನ್ನ ಮನೆಯಲ್ಲಿ ಇಟ್ಟುಕೊಳ್ಳೋರು ಅಪರಾಧ ಹಾಗೂ ಅದರಿಂದ ಅಪಾಯ ಕೂಡ ಇದೆ. ಹೀಗಾಗಿ ಜನರು ಮನೆಗಳಲ್ಲಿ ಜಂಬೋ ಆಕ್ಸಿಜನ್​ ಸಿಲಿಂಡರ್​ಗಳನ್ನ ಶೇಖರಿಸಿಟ್ಟುಕೊಳ್ಳಬೇಡಿ ಅಂತ ಕಿವಿಮಾತು ಹೇಳಿದ್ದಾರೆ.

ಜನರಲ್ಲಿ ಭೀತಿ ಹೆಚ್ಚಾಗ್ತಿದೆ. ವಾಟ್ಸ್​​ಆ್ಯಪ್​​ ಮೇಸೆಜ್​​​ಗಳನ್ನು ನೋಡಿ ಸ್ವತಃ ಅವರೇ ಟ್ರೀಟ್​ಮೆಂಟ್​ ತೆಗೆದುಕೊಳ್ಳುತ್ತಿದ್ದಾರೆ. ಆಕ್ಸಿಜನ್ ಸಿಲಿಂಡರ್​ಗಳನ್ನು ತೆಗೆದುಕೊಂಡು ಮನೆಗಳಲ್ಲಿ ಇಟ್ಟುಕೊಂಡಿದ್ದಾರೆ. ಈ ಮೂಲಕ‌ ಜನ ತಪ್ಪು ಕೆಲಸ ಮಾಡ್ತಿದ್ದಾರೆ.  ಕೊರೊನಾ‌ ಸೋಂಕಿತರಿಗೆ ಆಕ್ಸಿಜನ್ ಟ್ರೀಟ್ಮೆಂಟ್​ ನಂಬರ್ 1 ಚಿಕಿತ್ಸೆ ಆಗಿದೆ. ಆದ್ರೆ ಜನ ಆಕ್ಸಿಜನ್​ ಮಿಸ್ಯ್ಯೂಸ್ ಮಾಡ್ಕೋಬಾರ್ದು. ಜನರು ಮನೆಯಲ್ಲಿ ಆಕ್ಸಿಜನ್ ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧ. ಜಂಬೋ ಸಿಲಿಂಡರ್​ಗಳನ್ನು ಮನೆಯಲ್ಲಿ ಇಟ್ಟುಕೊಂಡಿರೋದು ಸಹ ತಪ್ಪು.

1800-2000 ಪಿಎಸ್ಐ ಪ್ರೆಶರ್​​ನಲ್ಲಿ ಆಕ್ಸಿಜನ್ ಸ್ಟೋರ್ ಮಾಡಿರುತ್ತಾರೆ. ಈ ಒತ್ತಡದಲ್ಲಿ ಆಕ್ಸಿಜನ್ ಹೊರಬಿಟ್ಟಾಗ ತೊಂದರೆ ಆಗುತ್ತೆ ಜಂಬೋ ಸಿಲಿಂಡರ್ಗಳನ್ನ ಮನೆಯಲ್ಲಿ ಬಳಸುವಹಾಗಿಲ್ಲ. ಇದ್ರಿಂದ ಆಸ್ಪತ್ರೆಗಳಿಗೆ ಬೇಕಾದ ಜಂಬೋ ಸಿಲಿಂಡರ್​ಗಳ ಸಂಖ್ಯೆಯಲ್ಲಿ ಕೊರತೆಯಾಗ್ತಿದೆ. ಆಸ್ಪತ್ರೆಗಳಲ್ಲಿರೋ ರೋಗಿಗಳಿಗೆ ತೊಂದರೆ ಆಗ್ತಿದೆ. ಹೀಗಾಗಿ ಆಕ್ಸಿಜನ್ ಕ್ಯಾನ್ಸಂಟ್ರೇಟರ್ ತೆಗೆದುಕೊಳ್ಳಿ. ಎ ಅಥವಾ ಬಿ ಸೈಜ್ ಸಿಲಿಂಡರ್ ತೆಗೆದುಕೊಳ್ಳಿ. ಚಿಕ್ಕ ರೆಗ್ಯುಲೇಟರ್ ಇರೋ ಸಿಲಿಂಡರ್ ಬಳಸಿ. ಆದ್ರೆ ಜಂಬೂ ಸಿಲಿಂಡರ್ ಗಳನ್ನು ತೆಗೆದುಕೊಂಡು ಹೋಗಬಾರದು
ಜಗದೀಶ್ ಹಿರೇಮರ್

The post ಜಂಬೋ ಆಕ್ಸಿಜನ್​ ಸಿಲಿಂಡರ್​​ ಮನೆಯಲ್ಲಿಟ್ಟುಕೊಳ್ಬೇಡಿ.. ಅದು ಅಪರಾಧ ಜೊತೆಗೆ ಅಪಾಯ -ತಜ್ಞರ ಕಿವಿಮಾತು appeared first on News First Kannada.

Source: newsfirstlive.com

Source link