ವಿಶ್ವದ ದೊಡ್ಡಣ್ಣ ಅಂದ್ರೆ ಅಮೆರಿಕಾ. ಇವತ್ತಿಗೂ ಅದೆಷ್ಟೋ ವಿಚಾರಗಳು ಅಮೆರಿಕಾದಲ್ಲಿ ಅಡಗಿ ಕೂತಿದೆ. ಯಾವುದೇ ಕಾರಣಕ್ಕು ಅದು ಹೊರ ಜಗತ್ತಿಗೆ ಗೊತ್ತೇ ಆಗೋದಿಲ್ಲಾ. ಆದ್ರೆ ಈಗ ವಿಶ್ವವೇ ಬೆರಗಾಗುವಂತಾ ಸುದ್ದಿಯೊಂದು ಹೊರ ಬಿದ್ದಿದೆ. ಅದನ್ನ ತಿಳಿದ ಇನ್ನಿತರ ರಾಷ್ಟ್ರಗಳಿಗೆ ಈಗ ನಡುಕು ಶುರುವಾಗಿದೆ.

ಅಮೆರಿಕಾದ ಕೆಲ ಸಿಕ್ರೇಟ್​​ಗಳು ಇವತ್ತಿಗೂ ಯಾರಿಗೂ ಗೊತ್ತಾಗೋದಿಲ್ಲ. ಅದರಲ್ಲೂ ವೈಟ್ ಹೌಸ್​ ನ ಹೊರಭಾಗದಲ್ಲಿ ಹೇಗೆ ಕಾಣುತ್ತೋ ಅದರ ಒಳಗಡೆ ಹಾಗೆ ಇರುತ್ತೇ ಅಂತಾ ಎಲ್ಲರೂ ಅಂದುಕೊಂಡಿದ್ದಾರೆ. ಅಲ್ಲಿ ಒಂದೊಂದು ಪಿಲ್ಲರ್​ಗಳ ಮಧ್ಯೆನೂ ಒಂದೊಂದು ಸಿಕ್ರೇಟ್ ಅಡಗಿ ಕೂತಿದೆ. ಆದ್ರೆ ಇವತ್ತು ಅಂಥಾ ಒಂದು ಸಿಕ್ರೇಟ್​ಗಳಲ್ಲಿ ಒಂದು ರಹಸ್ಯ ಸುದ್ದಿಯೊಂದು ಜಗಜ್ಜಾಹೀರವಾಗಿದೆ.

ಆತಂಕ ಸೃಷ್ಟಿ ಮಾಡುವಂಥ ಸುದ್ದಿ ಬಯಲು
ಹೌದು. ಯುನೈಟೆಡ್​​ ಸ್ಟೇಟ್ಸ್​ ವಿಶ್ವದ ಅತ್ಯಂತ ಶಕ್ತಿಶಾಲಿ ಮಿಲಿಟರಿಯನ್ನ ಹೊಂದಿದೆ. ಅದಕ್ಕು ಒಂದು ಹೆಜ್ಜೆ ಮುಂದೆ ಇರೋ ಚೀನಾ ಕೂಡ ಅಮೆರಿಕಾ ಮಾತಿಗೆ ತಲೆ ಬಾಗಲೇಬೇಕು. ಯಾಕಂದ್ರೆ ಅಮೆರಿಕಾ ಮಿಲಿಟರಿ ಪಡೆಯೇ ಹಾಗಿರುತ್ತೆ. ಅಮೆರಿಕನ್ ಮಿಲಿಟರಿ ಪವರ್ ಎಷ್ಟಿದೆ ಅಂದ್ರೆ ಭೂಮಿ ಆಗಿರಲಿ, ಆಕಾಶ ಆಗಿರಲಿ ಎಲ್ಲದರೂ ಭಯಂಕರವಾಗಿ ಸೆಣಸುವ ಶಕ್ತಿ ಹೊಂದಿದೆ. ಜೊತೆಗೆ ವಿಶ್ವದ ಯಾವುದೇ ಭಾಗದಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸುವಷ್ಟು ಅಮೆರಿಕಾ ಬಲಶಾಲಿಯಾಗಿದೆ. ಕೇವಲ ತನ್ನ ಸಾಮಾರ್ಥ್ಯವನ್ನಷ್ಟೇ ಅಲ್ಲ, ತನ್ನ ಅಧಿಕಾರವನ್ನ ಬೇಕಾದ್ರು ಪ್ರದರ್ಶಿಸಬಹುದು. ಹೀಗಿದ್ದರು ಕೂಡ ಅಮೆರಿಕಾದ ಒಂದು ನಡೆ ಜಗಜ್ಜಾಹಿರವಾಗಿ ಇನ್ನಿತರ ದೇಶಗಳಿಗೆ ನಡುಕ ಉಂಟು ಮಾಡಿದೆ. ಅದಕ್ಕೆಲ್ಲಾ ಕಾರಣವೇ ಅರವತ್ತು ಸಾವಿರ.

ಏನಿದು ಅಮೆರಿಕಾದ ರಹಸ್ಯ?
ಹೌದು. ಈ 60 ಸಾವಿರದ ಅಂಕಿ ಅಂಶ ಈಗ ವಿಶ್ವವನ್ನೆ ಅಚ್ಚರಿಗೊಳಿಸುವಂತೆ ಮಾಡಿದೆ.  ಅದೇ ಅಂಡರ್​ ಕವರ್​ ಏಜೆಂಟ್​​ ಪಡೆ. ಹೌದು 60 ಸಾವಿರ ಸಿಕ್ರೆಟ್ ಆರ್ಮಿ ಜಗತ್ತಿನಾದ್ಯಂತ ಅಂಡರ್​​​ಕವರ್​ ಕಾರ್ಯಚರಣೆಯಲ್ಲಿ ತೊಡಗಿಕೊಂಡಿದೆ. ಇದೇ ವಿಚಾರ ಈಗ ಇನ್ನಿತರ ರಾಷ್ಟ್ರಗಳಿಗೆ ನಡುಕು ಉಂಟು ಮಾಡಿದೆ. ಅಯ್ಯೋ ಅದರಲ್ಲಿ ಏನಿದೆ? ರಹಸ್ಯ ಪಡೆ ಅಂದ ಮೇಲೆ ಎಲ್ಲಾ ಕಡೆ ಇದ್ದೇ ಇರ್ತಾರೆ. ಪ್ರತಿಯೊಂದು ದೇಶದದಲ್ಲಿಯೂ ಕೂಡ ರಾ ಏಜೆಂಟ್​​ಗಳು ಇರ್ತಾರೆ. ಅದ್ರಲ್ಲಿ ಏನಿದೆ ವಿಶೇಷ ಅಂತಾ ನೀವು ಅಂದುಕೊಳ್ಳುತ್ತಿರಬಹುದು. ಇಲ್ಲೆ ಇರೋದು ಇಂಟರೆಸ್ಟಿಂಗ್ ವಿಷಯ. ಬೇರೆ ದೇಶಗಳಲ್ಲಿ ಇರುವಂತೆ ಸಿಕ್ರೆಟ್ ಆರ್ಮಿ ರೀತಿಯ ಟೀಮ್ ಇದಲ್ಲ ಅನ್ನುತ್ತಿದೆ ಅಂತರಾಷ್ಟ್ರೀಯ ವರದಿ.

ಪ್ರಪಂಚಾದ್ಯಂತ ಕಾರ್ಯ ನಿರ್ವಹಿಸುತ್ತಿದೆ ಈ ಪಡೆ
ಹೌದು. ಸುಮಾರು 60 ಸಾವಿರ ಅಂಡರ್​ ಕವರ್​ ಪಡೆ ಈಗ ಪ್ರಪಂಚದಾದ್ಯಂತ ಗೂಢಚಾರಿಕೆಯಲ್ಲಿ ತೊಡಗಿದೆ. ಅದು ಮುಖ್ಯವಾಗಿ ಪಾಕಿಸ್ತಾನದಿಂದ ಹಿಡಿದು ಪಶ್ಚಿಮ ಆಫ್ರಿಕಾದವರೆಗೆ ಈ ಟೀಮ್ ವಿಸ್ತರಣೆಗೊಂಡಿದೆ. ಮುಖ್ಯವಾಗಿ ಈ ಪಡೆ ಇನ್ನಿತರ ದೇಶಗಳ ಸುಳ್ಳು ವಿವಾರಗಳನ್ನ, ಇನ್ನಿತರ ವೇಷಗಳನ್ನ ಪತ್ತೆ ಹಚ್ಚಿ ತನ್ನ ಮೇಲಾಧಿಕಾರಿಗಳಿಗೆ ಕ್ಷಣ ಕ್ಷಣದ ಮಾಹಿತಿಯನ್ನ ರವಾನೆ ಮಾಡುತ್ತಿದ್ಯಂತೆ.

ಶತ್ರುಗಳ ಜೊತೆಯಲ್ಲಿದ್ದುಕೊಂಡೇ ಗೂಢಚಾರಿಕೆ
ಅಂಡರ್ ಕವರ್ ಏಜೆಂಟ್ ಅಂದ ಮೇಲೆ ಇದೆಲ್ಲಾ ಸರ್ವೆ ಸಾಮಾನ್ಯ. ಯಾಕಂದ್ರೆ ನಮ್ಮ ದೇಶದಲ್ಲೂ ಕೂಡ ರಾ(ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್) ಅನ್ನೋದು ಇದೆ. ಅದು ಇನ್ನಿತರ ಶತ್ರು ರಾಷ್ಟ್ರಗಳಲ್ಲಿ ನಾನಾ ವೇಷಗಳನ್ನ ಧರಿಸಿ ಅಲ್ಲಿನ ಜನ ಸಾಮಾನ್ಯರಂತೆ ಬದುಕುತ್ತಾ ಅಲ್ಲಿನ ಇನ್​ಸೈಡ್ ಮಾಹಿತಿಗಳನ್ನ ರವಾನೆ ಮಾಡುತ್ತಿರುತ್ತೆ. ಅದೇ ರೀತಿ ಅಮೆರಿಕಾದ ಅಂಡರ್​ಕವರ್ ಏಜೆಂಟ್​ಗಳು ಶತ್ರುಗಳ ಜೊತೆಗೆ ಇದ್ದುಕೊಂದು ಮಾಹಿತಿ ರವಾನೆ ಮಾಡುತ್ತಿದ್ದಾರೆ.

ಬೇರೆ ರಹಸ್ಯ ಪಡೆಗಿಂತ ಹತ್ತು ಪಟ್ಟು ಶಕ್ತಿಶಾಲಿ
ನಮ್ಮ ದೇಶದಲ್ಲಿ ರಾ ಇರೋ ಹಾಗೆ ಬೇರೆ ಬೇರೆ ದೇಶಗಳಲ್ಲಿಯೂ ಕೂಡ ಅಂಡರ್ ಕವರ್ ಏಜೆಂಟ್​ಗಳು ಇದ್ದಾರೆ. ವಿಶ್ವದಲ್ಲೇ ಸಿಐಎ ಅನ್ನೋ ಟೀಮ್ ಅತ್ಯಂತ ಬಲಿಷ್ಟ ಅಂತಾ ಹೇಳಲಾಗುತ್ತಿತ್ತು. ಆದ್ರೆ ಅದಕ್ಕಿಂತ ಹತ್ತು ಪಟ್ಟು ಹೆಚ್ಚು ಬಲಶಾಲಿ ಆಗಿದ್ಯಂತೆ ಈ 60 ಸಾವಿರ ಅಂಡರ್​ ಕವರ್ ಏಜೆಂಟ್​​ಗಳ ಟೀಂ. ಯಾಕಂದ್ರೆ ಅವರಿಗೆ ಅದೇ ರೀತಿ ತರಬೇತಿಯನ್ನ ನೀಡಲಾಗಿದೆ ಅನ್ನೋ ಮಾಹಿತಿ ಈಗ ಸೋರಿಕೆ ಆಗಿದೆ.

ಗೂಢಚರ್ಯೆ ಮಾಡುವ ಪೆಂಟಗನ್ ಟೀಂ 
ಈ 60 ಸಾವಿರ ಅಂಡರ್ ಕವರ್ ಎಜೆಂಟ್​ಗಳಿಗೆ ಪೆಂಟಗನ್ ಸಿಕ್ರೆಟ್ ಆರ್ಮಿ ಅನ್ನೋ ಹಸರಿನಿಂದಲೇ ಕರೆಯಲಾಗುತ್ತಿದೆ. ಈ ಟೀಮ್ ಎಲ್ಲದಕ್ಕು ಸದಾ ಸಿದ್ದವಾಗಿರುತ್ತೆ. ಆದ್ರೆ 60 ಸಾವಿರ ಪೆಂಟಗನ್ ಸಿಕ್ರಿಟ್​ ಆರ್ಮಿಗೆ ಇರೋ ಸಾಮರ್ಥ್ಯ ಇನ್ನಿತರ ಅಂಡರ್​ಕವರ್​ ಏಜೆಂಟ್​ಗಳಿಗೆ ಇಲ್ಲ ಅನ್ನುತ್ತೆ ವರದಿ.

ಅತಿ ಹೆಚ್ಚು ಏಜೆಂಟ್​ಗಳಿರೋದು ಅಮೆರಿಕಾದಲ್ಲಿ
ಈಗ ಸೋರಿಕೆ ಆಗಿರೋ ಮಾಹಿತಿ ಪ್ರಕಾರ ಅಮೆರಿಕಾದ ಪರ ಕೆಲಸ ಮಾಡುತ್ತಿರೋ ಈ ಪೆಂಟಗನ್​​ ಸಿಕ್ರೆಟ್ ಆರ್ಮಿಯ ಒಟ್ಟು ಸಂಖ್ಯೆ 60 ಸಾವಿರ. ಇನ್ನಿತರ ದೇಶಗಳಲ್ಲೂ ಅಂಡರ್ ಕವರ್ ಏಜೆಂಟ್​ಗಳು ಇದ್ದಾರೆ. ಆದ್ರೆ ಇಷ್ಟು ದೊಡ್ಡ ಮಟ್ಟದಲ್ಲಿ ಯಾವ ದೇಶದಲ್ಲಿಯೂ ಇಲ್ಲಾ ಅಂತಾ ಹೇಳಲಾಗ್ತಾ ಇದೆ. ಅಂದ್ರೆ ಅತ್ಯಂತ ಹೆಚ್ಚು ಅಂಡರ್ ಕವರ್​ ಏಜೆಂಟ್​ಗಳನ್ನ ಹೊಂದಿರೋ ರಾಷ್ಟ್ರ ಅಮೆರಿಕಾ. ನೋಡಿ ಇದೇ ಕಾರಣಕ್ಕೀಗ ಇನ್ನಿತರ ರಾಷ್ಟ್ರಗಳಿಗೆ ನಡುಕ ಶುರು ಆಗಿರೋದು. ಯಾಕಂದ್ರೆ ಏನೆ ವಿಚಾರಗಳನ್ನ ಮುಚ್ಚಿ ಹಾಕಿ ಜಗತ್ತಿನ ಮುಂದೆ ತಪ್ಪು ಮಾಹಿತಿಯನ್ನ ತೋರಿಸುತ್ತಿದ್ರೆ, ಅದರ ಹಿಂದಿರೋ ಅಸಲಿ ವಿಚಾರವನ್ನ ಈ ಪೆಂಟಗನ್ ಸೀಕ್ರೆಟ್ ಆರ್ಮಿ ಪತ್ತೆ ಹಚ್ಚಿ ಮಾಹಿತಿಯನ್ನ ರವಾನೆ ಮಾಡಿಬಿಡುತ್ತೆ. ಸುಮ್ಮನೇ ಅಮೆರಿಕಾ ಸೂಪರ್ ಪವರ್ ಅನಿಸಿಕೊಂಡಿಲ್ಲ. ವಿಶ್ವದಾದ್ಯಂತ ತನ್ನ ಪ್ರಭಾವ ಹೊಂದಿಲ್ಲ. ಇಂತದ್ದನ್ನೆಲ್ಲಾ ಮಾಡೋಕೆ ಬಹುಶಃ ಅಮೆರಿಕಾಗೆ ಮಾತ್ರವೇ ಸಾಧ್ಯವೇನೋ.

ಅಮೆರಿಕಾ ಡಿಫೆನ್ಸ್ ಬಗ್ಗೆ ಇಡೀ ಜಗತ್ತಿಗೆ ಗೊತ್ತಿರೋ ವಿಚಾರ ಏನಂದ್ರೆ ಅದು ಟೆಕ್ನಿಕಲ್ ಆಗಿಯೂ, ಫಿಸಿಕಲ್ ಆಗಿಯೂ, ಮಾನಸಿಕವಾಗಿಯೂ ಹೆಚ್ಚು ಪರಿಣಿತಿ ಹೊಂದಿದೆ ಅನ್ನೋದು. ಇದೇ ಯುಎಸ್​​ ಡಿಪಾರ್ಟ್​​ಮೆಂಟ್ ಆಫ್ ಡಿಫೆನ್ಸ್​​​ ಈಗ ಈ ಪೆಂಟಗನ್​ ಸಿಕ್ರೆಟ್ ಆರ್ಮಿಯನ್ನ ರೆಡಿ ಮಾಡಿದೆ. ಮೊದಲೇ ಯುಎಸ್​ ಡಿಫೆನ್ಸ್ ಅಂದ್ರೆ ಅವರಿಗೆ ನೀಡೋ ತರಬೇತಿಯನ್ನ ನಾವೆಲ್ಲರೂ ನೋಡಿದ್ದೀವಿ. ಇನ್ನು ಈ ಸೀಕ್ರೆಟ್ ಆರ್ಮಿಗೆ ಅದ್ಯಾವ ರೀತಿ ತರಬೇತಿ ಕೊಟ್ಟು ಸಜ್ಜುಗೊಳಿಸಿದೆ ಅನ್ನೋದನ್ನ ನಾವೇ ಊಹೆ ಮಾಡಿಕೊಳ್ಳಬೇಕು.

ಇನ್ನು ಈ ಪೆಂಟಗನ್​ ಸೀಕ್ರೆಟ್​ ಆರ್ಮಿ ಅಧಿಕಾರಿಗಳು ಇಲ್ಲಿಯವರೆಗೂ ಯಾರು, ಅವರು ಹೇಗಿರುತ್ತಾರೆ ಅನ್ನೋ ನಿಖರವಾದ ಮಾಹಿತಿ ಯಾರಿಗೂ ತಿಳಿದುಕೊಳ್ಳೋದಕ್ಕೆ ಸಾಧ್ಯವಾಗಿಲ್ಲ. ಅಮೆರಿಕದ ಉಳಿದ ಗುಪ್ತಚರ ಶಾಖೆಗಳಂತೆ, ಈ ರಹಸ್ಯ ಸೈನ್ಯವನ್ನು ಯುಎಸ್ ಕಾಂಗ್ರೆಸ್ ಚರ್ಚಿಸಿಲ್ಲ. ಯುಎಸ್ ಸರ್ಕಾರವು ಅದನ್ನು ಹಾಗೆಯೇ ಉಳಿಸಿಕೊಳ್ಳಲು ಬಯಸುತ್ತಿದೆ.

ಭಯೋತ್ಪಾದಕರನ್ನ ಹಿಂಬಾಲಿಸುತ್ತಿದ್ಯಂತೆ ದಿ ಪೆಂಟಗನ್
ಪೆಂಟಗನ್ ಸಿಕ್ರೆಟ್ ಆರ್ಮಿ ಸದಾ ತನ್ನ ದೇಶಕ್ಕೆ ಮಾಹಿತಿ ರವಾನೆ ಮಾಡುತ್ತಿದೆ. ಅದ್ರಲ್ಲಿ ಮುಖ್ಯವಾದುದಂದ್ರೆ ಪಾಕಿಸ್ತಾನ ಮತ್ತು ಪಶ್ಚಿಮ ಆಫ್ರಿಕಾದಂತಹ ದೇಶಗಳಲ್ಲಿನ ಭಯೋತ್ಪಾದಕರನ್ನ ಹಿಂಬಾಲಿಸಿ ಅವರ ಚಲನವಲನಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದೆ. ಇನ್ನು ಅಮೆರಿಕಾದ ಶತ್ರ ರಾಷ್ಟ್ರಗಳಲ್ಲಿ ಎರಡು ಮುಖ್ಯ ರಾಷ್ಟ್ರಗಳಾದ ಉತ್ತರ ಕೊರಿಯಾ ಮತ್ತು ಇರಾನ್​​ನ್ ಗಡಿಯ ಹಿಂದೆ ಅವರ ದೇಶದವರಾಗಿ ಈ ಸಿಕ್ರೇಟ್ ಆರ್ಮಿ ತನ್ನ ದೇಶದ ಪರವಾಗಿ ಕಲಸ ಮಾಡುತ್ತಿದೆ ಅಂತಾ ಹೇಳಲಾಗುತ್ತಿದೆ.

ಇದ್ರಲ್ಲಿ ಮತ್ತೊಂದು ವಿಭಾಗಗಳು ಇದೆ ಅಂತಾ ಹೇಳಲಾಗ್ತಾ ಇದೆ. ಆ ವಿಭಾಗ ಬಹಳ ಮುಖ್ಯವಾಗಿ ಇವತ್ತಿನ ಜಗತ್ತಲ್ಲಿ ತಲೆದೋರಿರೋ ಸೈಬರ್​​​​ ಅಫೆನ್ಸ್​​ಗಳ ವಿಚಾರದಲ್ಲಿಯೂ ಕೂಡ ಬಹಳ ಪರಿಣಿತಿಯನ್ನ ಹೊಂದಿದ್ದಾರಂತೆ. ಇವರ ಕೆಲಸ ಏನಂದ್ರೆ ಬಹಳ ಮುಖ್ಯವಾಗಿ ಕಂಪ್ಯೂಟರ್​ ಗಳ ಮುಂದೆ ಕೂತುಕೊಂಡೇ ಸಾರ್ವಜನಿಕ ಡೋಮೇನ್​​ನಲ್ಲಿ ಮಾಹಿತಿಗಳನ್ನ ಬಳಸಿಕೊಂಡು ಸೈಬರ್ ಗುಪ್ತಚರದಂತೆ ಕೆಲಸವನ್ನ ಮಾಡುತ್ತಿದೆ. ಇದು ಕೂಡ ಸೈಬರ್​ ವಂಚಕರಿಗೆ ಭಯ ಹುಟ್ಟಿಸಿದೆ. ಯಾಕಂದ್ರೆ ಇಂದು ಅದೆಷ್ಟೋ ಸೈಬರ್ ಖದೀಮರು ಬೇರೆ ಬೇರೆ ದೇಶಗಳ ಆಂತರಿಕ ಮಾಹಿತಿಯನ್ನ ಕದ್ದು ಅದನ್ನ ತಮ್ಮ ದೇಶಕ್ಕೆ ರವಾನೆ ಮಾಡುತ್ತಿದ್ದಾರೆ. ಹಾಗಾಗಿ ಈಗ ಈ ಪೆಂಟಗನ್ ಟೀಮ್ ಇದರ ಹಿಂದೆ ಬಿದ್ದಿದ್ದು, ಇಲ್ಲಿಯವರೆಗೆ ಯಾವ ಯಾವ ದೇಶ ಸೈಬರ್​ ಖದೀಮರನ್ನ ಬಳಸಿಕೊಂಡು ಮಾಹಿತಿಯನ್ನ ಕದ್ದಾಲಿಕೆ ಮಾಡುತ್ತಿದ್ಯೋ ಅದೆಲ್ಲವೂ ಬಹಿರಂಗಗೊಳ್ಳೋ ಸಾಧ್ಯತೆ ಕೂಡ ಇದೆ.
ಈ ಎಲ್ಲದರ ಮೂಲಕ ಅಮೆರಿಕಾ ವಿಶ್ವದ ಅತ್ಯಂತ ವ್ಯಾಪಕ ಮತ್ತು ಅತ್ಯಾಧುನಿಕ ಗುಪ್ತಚರ ಜಾಲವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಅಲ್ಲದೇ ಅಮೆರಿಕಾದ ಕಾರ್ಯ ಮಿಲಿಟರಿ ನೀತಿ ಸಂಹಿತಿಗೆ ವಿರುದ್ದವಾಗಿದೆ ಮತ್ತು ಜಿನೇವಾ ಮಾನವ ಹಕ್ಕುಗಳ ಸಮಾವೇಶಕ್ಕೆ ವಿರುದ್ದವಾಗಿದೆ ಎಂದು ಈಗ ವರದಿಗಳು ಕೂಡ ಹೇಳೋದಕ್ಕೆ ಮುಂದಾಗಿದೆ. ಆದ್ರೆ ಈ ಬಗ್ಗೆ ಅಮೆರಿಕಾ ಮಾತ್ರ ತುಟಿ ಬಿಚ್ಚಿಲ್ಲ. ಮುಂದಿನ ದಿನಗಳಲ್ಲಿ ಇದು ಯಾವ ತಿರುವುಗಳನ್ನ ಪಡೆದುಕೊಳ್ಳುತ್ತೋ ಕಾದು ನೋಡಬೇಕಿದೆ.

ದೊಡ್ಡಣ್ಣನ ಹಲವು ಸಿಕ್ರೆಟ್​ಗಳಲ್ಲಿ ಸದ್ಯ ಒಂದು ಸೀಕ್ರೆಟ್​ ಸೋರಿಕೆ ಆಗಿದೆ. ಜಗತ್ತಿನಾದ್ಯಂತ ಪೆಂಟಗನ್ ಸಿಕ್ರೆಟ್​ ಆರ್ಮಿ ಇರೋದು ಗೊತ್ತಾಗಿ ಬಿಟ್ಟಿದೆ. 60 ಸಾವಿರ ಅಧಿಕಾರಿಗಳು ನಮ್ಮಲ್ಲೂ ಇರಬೋದು ಅಂತಾ ಬೇರೆ ಬೇರೆ ರಾಷ್ಟ್ರಗಳು ಫುಲ್ ಅಲರ್ಟ್​ ಆಗಿವೆ. ಮುಂದೆ ಇದಕ್ಕೆ ಅಮೆರಿಕಾ ಅದೇನ್ ಉತ್ತರ ಕೊಡುತ್ತೋ ಕಾದು ನೋಡಬೇಕು.

ವಿಶ್ವದಲ್ಲೆಲ್ಲ ಇದೆಯಂತೆ ಅಮೆರಿಕದ ರಹಸ್ಯ ಸೇನೆ!
ಅಮೆರಿಕದ ರಹಸ್ಯ ಸೇನಾಪಡೆಯ ರಹಸ್ಯ ಸೋರಿಕೆ
ಅಮೆರಿಕ ರೆಡಿ ಮಾಡಿದ್ದು ಸಿಗ್ನೆಚರ್ ರಿಡಕ್ಷನ್ ಆರ್ಮಿ
ಭಯೋತ್ಪಾದಕರು,ದೇಶದ್ರೋಹಿಗಳ ಮೇಲೆ ಕಣ್ಣು
ವಿಶ್ವದ ಯಾವ ಮೂಲೆಯಲ್ಲಿ ಏನೇ ಆದ್ರೂ ಮಾಹಿತಿ
ಈ ರಹಸ್ಯ ಪಡೆಯಿಂದಲೇ ಅಮೆರಿಕಕ್ಕೆ ಹೆಚ್ಚಿನ ಬಲ
ಏನೇ ಸಂಚು ರೂಪಿಸಿದ್ದರೂ ಮೊದಲೇ ಗೊತ್ತಾಗುತ್ತೆ
ಅಮೆರಿಕದ ಈ ಪಡೆಯಿಲ್ಲಿ 60 ಸಾವಿರ ಅಧಿಕಾರಿಗಳು
ಶತ್ರುಗಳ ಜೊತೆಯಲ್ಲೇ ಇದ್ದು ಮಾಹಿತಿ ಕೊಡುವ ಪ್ಲಾನ್
————————————————————–

The post ಜಗತ್ತನ್ನೇ ಅಚ್ಚರಿಗೊಳಿಸಿದ ಅಮೆರಿಕಾ ರಹಸ್ಯ: ವಿಶ್ವದಾದ್ಯಂತ ಇದ್ಯಂತೆ 60,000 ಏಜೆಂಟ್​ಗಳ ರಹಸ್ಯ ಸೇನೆ appeared first on News First Kannada.

Source: newsfirstlive.com

Source link