ಜಗತ್ತಿನ ಹಲವು ದೇಶಗಳು ಈಗಷ್ಟೇ ಕೊರೊನಾ ಎರಡನೇ ಅಲೆಯಿಂದ ಹೊರಬಂದಿವೆ. 2ನೇ ಅಲೆಯನ್ನ ಈಜಿ ಈಗತಾನೇ ನೆಮ್ಮದಿಯಿಂದ ನಿಟ್ಟುಸಿರು ಬಿಡ್ತಿವೆ. ಆದ್ರೆ ಅಷ್ಟರೊಳಗೇ ಈಗಾಗಲೇ ಜಗತ್ತಿನಾದ್ಯಂತ ಕೊರೊನಾ ಪ್ರಕರಣಗಳು ಮತ್ತೆ ಏರಿಕೆಯಾಗತೊಡಗಿವೆ. ಈ ಮಧ್ಯೆ ಲಸಿಕೆಯ ಕೊರತೆ ಶರುವಾಗಿದೆ.

ಕೊರೊನಾ 2ನೇ ಅಲೆಯ ಬಲೆಗೆ ಬೀಳದೇ ಇರೋ ದೇಶಗಳಿಲ್ಲ. ಏಲ್ಲೋ ಒಂದೆರಡು ದೇಶಗಳು 2ನೇ ಅಲೆಯಿಂದ ಪಾರಾಗಿದ್ರೆ, ಉಳಿದಂತೆ ಜಗತ್ತಿನಾದ್ಯಂತ ಎಲ್ಲಾ ದೇಶಗಳಿಗೂ ಎರಡನೇ ಅಲೆ ವ್ಯಾಪಿಸಿಬಿಟ್ಟಿತ್ತು. ಸದ್ಯ ಕಠಿಣ ಕ್ರಮಗಳಿಂದಾಗಿ ಜಗತ್ತಿನ ಹಲವು ದೇಶಗಳು 2ನೇ ಅಲೆಯನ್ನ ಜಯಸಿ ಮತ್ತೆ ಯಥಾಸ್ಥಿತಿಗೆ ಮರಳಿವೆ. ಇದರ ಬೆನ್ನಲ್ಲೇ ಮೂರನೇ ಅಲೆಯ ಚರ್ಚೆ ಶುರುವಾಗಿದ್ದು, ಈ ಬಗ್ಗೆ ತಜ್ಞರು ಕೂಡ ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಜಗತ್ತಿನ ಹಲವೆಡೆ ಕೊರೊನಾ ಪ್ರಕರಣಗಳು ಏರಿಕೆಯಾಗೋಕೆ ಶುರುವಾಗಿದೆ.

ಮತ್ತೆ ಏರಿಕೆಯಾದ ಸೋಂಕು!

  • ರಷ್ಯಾದಲ್ಲಿ ಕೊರೊನಾ ಏರಿಕೆ, ಮೂರನೇ ಅಲೆಯ ಭೀತಿ
  • ಪ್ರತಿದಿನದ ಸೋಂಕಿತರ ಪಟ್ಟಿಯಲ್ಲಿ ರಷ್ಯಾ ವಿಶ್ವದಲ್ಲೇ 2ನೇ ಸ್ಥಾನ
  • ಬ್ರೆಜಿಲ್​ನಲ್ಲಿ ಹೆಚ್ಚಿದ ಸೋಂಕು, ವಿಶ್ವದಲ್ಲೇ ಅತಿಹೆಚ್ಚು ಪ್ರಕರಣ ಪತ್ತೆ
  • ಬ್ರೆಜಿಲ್​ನಲ್ಲಿ ಗುಂಪು ಗೂಡುವಿಕೆ, ಸಭೆ ಸಮಾರಂಭಗಳಿಗೆ ನಿರ್ಬಂಧ
  • ಬ್ರಿಟನ್​ನಲ್ಲಿ ಡೆಲ್ಟಾ ತಳಿಯಿಂದಾಗಿ ಕೊರೊನಾ ಸೋಂಕು ಮತ್ತೆ ಏರಿಕೆ
  • ಲಾಕ್​ಡೌನ್​ ಜಾರಿ.. ವಿಮಾನ ಸಂಚಾರ, ಹಡಗು ಪ್ರಯಾಣಕ್ಕೆ ನಿರ್ಬಂಧ
  • ಆಫ್ರಿಕಾ ಖಂಡದ ದೇಶಗಳಲ್ಲಿ ಆಲ್ಫಾ, ಡೆಲ್ಟಾ, ಡೆಲ್ಟಾ ಪ್ಲಸ್ ತಳಿ ಹಾವಳಿ
  • ದಕ್ಷಿಣ ಅಮೇರಿಕಾ, ಬಾಂಗ್ಲಾದೇಶ, ಮ್ಯಾನ್ಮಾರ್​ನಲ್ಲಿ ಹೆಚ್ಚಾದ ಸೋಂಕು

ಸೋಂಕು ಹೆಚ್ಚಾಗುತ್ತಿರುವಾಗ್ಲೇ ಜಗತ್ತಿನಾದ್ಯಂತ ಲಸಿಕೆಯ ಕೊರತೆಯೂ ಉದ್ಭವಿಸಿದೆ. ಬಡ ರಾಷ್ಟ್ರಗಳಲ್ಲಿ ಲಸಿಕೆ ಕೊರತೆ ತೀವ್ರವಾಗಿ ಕಾಡಲಾರಂಭಿಸಿದ್ರೆ, ಲಸಿಕೆ ತಯಾರಿಸುವ ಅಮೇರಿಕಾ, ಬ್ರಿಟನ್​, ಚೀನಾ, ಮತ್ತು ರಷ್ಯಾದಲ್ಲೇ ಲಸಿಕೆ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

ಲಸಿಕೆ ಲೆಕ್ಕ
ಚೀನಾದಲ್ಲಿ ಪ್ರತಿ ನೂರು ಮಂದಿಯಲ್ಲಿ ಶೇಕಡಾ 50ರಷ್ಟು ಮಂದಿ ಒಂದು ಡೋಸ್​ ಲಸಿಕೆ ಪಡೆದಿದ್ದಾರೆ. ಅಮೇರಿಕಾದಲ್ಲಿಯೂ ಪ್ರತಿ ನೂರು ಮಂದಿಯಲ್ಲಿ ಶೇಕಡಾ 50ರಷ್ಟು ಜನರು ಒಂದು ಡೋಸ್​ ಲಸಿಕೆ ಪಡೆಡುಕೊಂಡಿದ್ದಾರೆ. ಇನ್ನು ಕೆನಡಾ ಹಾಗೂ ಐರೋಪ್ಯ ದೇಶಗಳಲ್ಲಯೂ ಪ್ರತಿ ನೂರು ಮಂದಿಯಲ್ಲಿ ಶೇಕಡಾ 50ರಷ್ಟು ಜನರಿಗಷ್ಟೇ ಮೊದಲ ಡೋಸ್​​ನ​ ವ್ಯಾಕ್ಸಿನೇಷನ್​ ಆಗಿದೆ. ಇನ್ನು ದಕ್ಷಿಣ ಅಮೇರಿಕಾ ದೇಶಗಳಲ್ಲಿ ಪ್ರತಿ ನೂರು ಜನರಯಲ್ಲಿ ಶೇಕಡಾ 40 ರಿಂದ 50 ಜನರಿಗೆ ಒಂದು ಡೋಸ್​ನ ವ್ಯಾಕ್ಸಿನೇಷನ್​ ಆಗಿದೆ.

ಇತರೆ ದೇಶಗಳಿಗೆ ಲಸಿಕೆ ಪೂರೈಸುತ್ತಿರುವ ರಷ್ಯಾದಲ್ಲಿಯೂ ಈವರೆಗೂ ಪ್ರತಿ ನೂರು ಜನರಲ್ಲಿ ಕೇವಲಾ 35 ಮಂದಿಗೆ ಮಾತ್ರ ಒಂದು ಡೋಸ್​ನ ಲಸಿಕೆ ನೀಡಲು ಸಾಧ್ಯವಾಗಿದೆ. ಇನ್ನು ಭಾರತದಲ್ಲಿ ಮೂರ್ನಾಲ್ಕು ಲಸಿಕೆಗಳನ್ನು ವಿತರಿಸಲಾಗ್ತಿದ್ದರೂ, ಇಲ್ಲಿಯವರೆಗೂ ಪ್ರತಿ ನೂರು ಮಂದಿಯಲ್ಲಿ ಕೇವಲ 28ರಷ್ಟು ಜನರಿಗೆ ಮಾತ್ರ ಒಂದು ಡೋಸ್​ ಲಸಿಕೆ ನೀಡಲಾಗಿದೆ.ಮಧ್ಯಪ್ರಾಚ್ಯ ದೇಶಗಳಲ್ಲಿ ಈವರೆಗೂ ಪ್ರತಿ ನೂರು ಮಂದಿಯಲ್ಲಿ ಕೇವಲಾ 4 ರಿಂದ 8 ಮಂದಿ ಒಂದು ಡೋಸ್​ ಲಸಿಕೆ ಪಡೆದುಕೊಂಡಿದ್ದಾರೆ. ಆಫ್ರಿಕಾ ಖಂಡ ದೇಶಗಳಲ್ಲಿ ಅತೀ ಕಡಿಮೆ ಲಸಿಕೆ ವಿತರಣೆಯಾಗಿದ್ದು, ನೂರು ಜನರಲ್ಲಿ ಕೇವಲ ಇಬ್ಬರು ಮಾತ್ರ ಒಂದು ಡೋಸ್​ನ​ ಲಸಿಕೆ ಪಡೆದುಕೊಂಡಿದ್ದಾರೆ.

2ನೇ ಅಲೆ ತಗ್ಗಿದ ಬೆನ್ನಲ್ಲೇ ಜಗತ್ತಿನಾದ್ಯಂತ ಕೊರೊನಾ ಸೋಂಕು ಏರಿಕೆಯಾಗ್ತಿರೋದು ಆತಂಕವನ್ನ ಹೆಚ್ಚಿಸಿದೆ. ಈ ಮಧ್ಯೆ ಹಲವೆಡೆ ಲಸಿಕೆ ಕೊರತೆ ಎದುರಾಗಿರೋದು ತಲೇನೋವಾಗಿ ಪರಿಣಮಿಸಿದೆ. ಸದ್ಯ ಕೊರೊನಾ ಸೋಂಕಿನಿಂದ ಪಾರಾಗೋಕೆ ಈಗಿರೋ ಏಕೈಕ ದಾರಿ ಅಂದ್ರೆ ಲಸಿಕೆ. ಆದ್ರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಲಸಿಕೆ ಕೊರತೆ ಎದುರಾಗಿರೋದು ಭೀತಿ ಹೆಚ್ಚಿಸಿದೆ.

ಇದನ್ನೂ ಓದಿ: ಕೊರೊನಾ 3ನೇ ಅಲೆ; ಮುಂದಿನ 100-120 ದಿನಗಳು ಭಾರೀ ಡೇಂಜರ್

The post ಜಗತ್ತಿನ ವಿವಿಧ ದೇಶಗಳಲ್ಲಿ ಮತ್ತೆ ಹಾವಳಿ ಇಟ್ಟ ಕೊರೊನಾ; ಭಯ ಹುಟ್ಟಿಸಿದ ಲಸಿಕೆ ಲೆಕ್ಕ appeared first on News First Kannada.

Source: newsfirstlive.com

Source link