ಜಗತ್ತಿನ ಶ್ರೀಮಂತ​ ಕ್ರಿಕೆಟ್​ ಮಂಡಳಿ​ ಯಾವ್ದು? ಹುಬ್ಬೇರಿಸಿದ ಬಾಂಗ್ಲಾದೇಶದ ವಾರ್ಷಿಕ ಆದಾಯ

ಜಗತ್ತಿನ ಶ್ರೀಮಂತ​ ಕ್ರಿಕೆಟ್​ ಮಂಡಳಿ​ ಯಾವ್ದು? ಹುಬ್ಬೇರಿಸಿದ ಬಾಂಗ್ಲಾದೇಶದ ವಾರ್ಷಿಕ ಆದಾಯ

ವಿಶ್ವದ ಕ್ರಿಕೆಟ್​ ಲೋಕದ ಶ್ರೀಮಂತ​ ಕ್ರಿಕೆಟ್​ ಮಂಡಳಿ​ ಯಾವುದು? ಯಾವ ಬೋರ್ಡ್​ನ​ ವರ್ಷದ ವಹಿವಾಟು ಹೆಚ್ಚಿದೆ? ಕ್ರಿಕೆಟ್​ ಎಂಬ ಜಂಟಲ್​ಮೆನ್​ ಗೇಮ್​ನಲ್ಲಿ ಯಾವ ಕ್ರಿಕೆಟ್​ ಬೋರ್ಡ್​ ಹೆಚ್ಚು ಆದಾಯ ಗಳಿಸ್ತಿದೆ? ಹೀಗೆ ಸಾಕಷ್ಟು ಪ್ರಶ್ನೆಗಳು ಕ್ರಿಕೆಟ್ ಅಭಿಮಾನಿಗಳನ್ನ​ ಕಾಡೋದು ಸಹಜ. ಆ ಇಂಟರೆಸ್ಟಿಂಗ್​ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ.

World’s Most Followed ಕ್ರೀಡೆಗಳಲ್ಲಿ ಕ್ರಿಕೆಟ್​ ಕೂಡ ಒಂದು. ಫುಟ್ಬಾಲ್, ರಗ್ಬಿ, ಟೆನಿಸ್, ಬ್ಯಾಡ್ಮಿಂಟನ್ ನಡುವೆಯೇ ಈ ಜಂಟಲ್​ಮೆನ್​ ಗೇಮ್​ ವಿಶ್ವದಾದ್ಯಂತ​ ತನ್ನ ಸ್ಥಾನಮಾನ ವಿಸ್ತರಿಸಿಕೊಂಡಿದೆ. ಕ್ರಿಕೆಟ್​ ಇಷ್ಟರ ಮಟ್ಟಿಗೆ ಫೇಮಸ್​ ಆಗೋದಕ್ಕೆ ಕಾರಣ, ಕ್ರಿಕೆಟ್​ ಮಂಡಳಿಗಳು ಹೂಡುವ ಬಂಡವಾಳ. ಹೀಗಾಗಿ ಪಂದ್ಯ-ಪಂದ್ಯಕ್ಕೂ, ಸರಣಿ-ಸರಣಿಗೂ ಕೋಟಿ ಕೋಟಿ ಸಂಪಾದಿಸುವ ಮಂಡಳಿಗಳು, ಹಣದ ಹೊಳೆಯನ್ನೇ ತನ್ನ ಖಜಾನೆಗೆ ತುಂಬಿಕೊಳ್ತಿವೆ. ಜಾಹೀರಾತು-ಪ್ರಾಯೋಜಕತ್ವ ಸೇರಿದಂತೆ ವಿವಿಧ ಮೂಲಗಳಿಂದ ಮಂಡಳಿಗಳು ವಾರ್ಷಿಕವಾಗಿ ಸಾವಿರಾರು ಕೋಟಿ ಗಳಿಸುತ್ತಿವೆ.

ಜಂಟಲ್​​ಮೆನ್​ ಗೇಮ್​ನಲ್ಲಿ ಬಿಸಿಸಿಐ ಬಿಗ್​​ಬಾಸ್​
BCCI ವಾರ್ಷಿಕ ವರಮಾನ ಬರೋಬ್ಬರಿ 3,730 ಕೋಟಿ

ಭಾರತ ಕ್ರಿಕೆಟ್​ ನಿಯಂತ್ರಣ ಮಂಡಳಿ ಅಂದರೆ ಬಿಸಿಸಿಐ ವಿಶ್ವದ ಕ್ರಿಕೆಟ್​ ಲೋಕದ ಶ್ರೀಮಂತ ಮಂಡಳಿ. ಅತ್ಯಂತ ಶ್ರೀಮಂತ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವ ಬಿಸಿಸಿಐನ ​ವಾರ್ಷಿಕ ವರಮಾನ, 3,730 ಕೋಟಿ ರೂಪಾಯಿ ಅಂದರೆ ನಂಬಲೇಬೇಕು. ಗಳಿಕೆಯ ವಿಚಾರದಲ್ಲಿ ಯಾವ ಬೋರ್ಡನ್ನೂ ತನ್ನ ಮುಂದಕ್ಕೆ ಬಿಟ್ಟುಕೊಂಡಿರದ BCCI, ರಾಷ್ಟ್ರೀಯ ಸರಣಿಗಳನ್ನಷ್ಟೇ ಅಲ್ಲ, ವಿಶ್ವದ ಶ್ರೀಮಂತ ಲೀಗ್​​ IPL ಅನ್ನು ಆಯೋಜಿಸುವ ಖ್ಯಾತಿ ಕೂಡ ಪಡೆದಿದೆ.

ಹಣಕಾಸು ಗಳಿಕೆಯಲ್ಲಿ ಕ್ರಿಕೆಟ್​ ಆಸ್ಟ್ರೇಲಿಯಾಗೆ 2ನೇ ಸ್ಥಾನ
ಕ್ರಿಕೆಟ್​ ಆಸ್ಟ್ರೇಲಿಯಾದ ವಾರ್ಷಿಕ ವರಮಾನ, ಬಿಸಿಸಿಐಗಿಂತ 887 ಕೋಟಿ ಕಡಿಮೆ. ಕ್ರಿಕೆಟ್​ ಹುಟ್ಟಿದಾಗಿನಿಂದ ಆಸ್ಟ್ರೇಲಿಯಾ ಅದರ ಭಾಗವಾಗಿದೆ. ಅಂದಿನಿಂದ ಈವರೆಗೂ ಕ್ರಿಕೆಟ್​ ಲೋಕದಲ್ಲಿ ದರ್ಬಾರ್​ ನಡೆಸಿದ ಆಸಿಸ್​​ ಬೋರ್ಡ್​​ನ ವಾರ್ಷಿಕ ಆದಾಯ 2,843 ಕೋಟಿ ರೂಪಾಯಿ. ಆಸಿಸ್​ ಮಂಡಳಿ ಕೂಡ ಬಿಬಿಎಲ್​ ಆಯೋಜಿಸಿ, ವರ್ಷದಿಂದ ವರ್ಷಕ್ಕೆ ಇನ್​ಕಮ್​ ಜಾಸ್ತಿ ಮಾಡಿಕೊಳ್ತಿದೆ.

ವಿಶ್ವಕ್ಕೆ ಕ್ರಿಕೆಟ್​ ಪರಿಚಯಿಸಿದ ಸೃಷ್ಟಿಕರ್ತರಿಗೆ ಮೂರನೇ ಸ್ಥಾನ
ಜಗತ್ತಿಗೆ ಕ್ರಿಕೆಟ್​ ಎಂಬ ಜಂಟಲ್​ಮೆನ್​ ಗೇಮ್​ ಪರಿಚಯಿಸಿದ ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್​​, 3ನೇ ಸ್ಥಾನದಲ್ಲಿರೋದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಕ್ರಿಕೆಟ್​ ಅನ್ನೋ ಕ್ರೀಡೆಯನ್ನ ಸೃಷ್ಟಿಸಿ ಜಗತ್ತನ್ನ ಆಳ್ತಿದ್ದ ಇಂಗ್ಲೆಂಡ್ ಕ್ರಿಕೆಟ್​ ಮಂಡಳಿಯ ವಾರ್ಷಿಕ ಆದಾಯ​ 2,135 ಕೋಟಿ ರೂಪಾಯಿ. ಇದು ಆಸಿಸ್​ ಮಂಡಳಿಗಿಂತಲೂ ₹708 ಕೋಟಿ ಕಡಿಮೆ. ಸದ್ಯ ತನ್ನ ಆದಾಯವನ್ನ ಡಬಲ್​ ಮಾಡ್ಕೊಳ್ಳೋದಕ್ಕೆ ಮುಂದಾಗಿರೋ ಇಂಗ್ಲೆಂಡ್, ಹಂಡ್ರೆಡ್​ ಲೀಗ್ ಟೂರ್ನಿ ಆಯೋಜನೆಗೆ ಮುಂದಾಗಿದೆ.

ಪಾಕ್​ಗೆ ನಾಲ್ಕನೇ ಸ್ಥಾನ​​, ಐದರಲ್ಲಿ ಜಾಗ ಪಡೆದ ಬಾಂಗ್ಲಾ
ಕ್ರಿಕೆಟ್​ನಲ್ಲಿ ಬೆಸ್ಟ್​ ಪರ್ಫಾಮೆನ್ಸ್ ನೀಡ್ತಿರೋ ನ್ಯೂಜಿಲೆಂಡ್-ಸೌತ್​ ಆಫ್ರಿಕಾ ತಂಡಗಳು, ನಂತರದಲ್ಲಿ ಸ್ಥಾನದಲ್ಲಿರುತ್ತವೆ ಅಂದುಕೊಂಡಿದ್ರೆ, ನಿಮ್ಮ ಊಹೆ ತಪ್ಪು.​ ಮುಂದಿನ ಸ್ಥಾನದಲ್ಲಿರೋದು ಪಾಕಿಸ್ತಾನ ಮತ್ತು ಬಾಂಗ್ಲಾದೇಶ. ಭಾರತ, ಆಸಿಸ್​, ಇಂಗ್ಲೆಂಡ್​ ನಾಲ್ಕಂಕಿ ವರಮಾನ ಪಡೀತಿದ್ರೆ, ಈ ಎರಡು ಕ್ರಿಕೆಟ್​ ಮಂಡಳಿಗಳು ಮೂರಂಕಿ ಆದಾಯ ಪಡೀತಿವೆ. 4ನೇ ಸ್ಥಾನದಲ್ಲಿರೋ ಪಾಕ್​​ 811 ಕೋಟಿ ಮತ್ತು 5ನೇ ಸ್ಥಾನದಲ್ಲಿ ಇರುವ ಬಾಂಗ್ಲಾ 802 ಕೋಟಿ ಸಂಪಾದನೆ ಮಾಡ್ತಿವೆ. ಕಿವೀಸ್​, ಹರಿಣಗಳು, ಕೆರಿಬಿಯನ್ನರನ್ನೇ ಹಿಂದಿಕ್ಕಿರುವ ಬಾಂಗ್ಲಾದೇಶ ಕ್ರಿಕೆಟ್​ ಮಂಡಳಿ, ನಿಜಕ್ಕೂ ಆಶ್ಚರ್ಯ ಹುಟ್ಟಿಸಿದೆ.

       ಮಂಡಳಿಗಳ ವಾರ್ಷಿಕ ವರಮಾನ               ಮಂಡಳಿ ಆದಾಯ

  • ಸೌತ್​ ಆಫ್ರಿಕಾ                                      485 ಕೋಟಿ ರೂಪಾಯಿ
  • ನ್ಯೂಜಿಲೆಂಡ್​                                       201 ಕೋಟಿ ರೂಪಾಯಿ
  • ವೆಸ್ಟ್​ ಇಂಡೀಸ್​​​​                                    116 ಕೋಟಿ ರೂಪಾಯಿ
  • ಜಿಂಬಾಬ್ವೆ​                                            113 ಕೋಟಿ ರೂಪಾಯಿ
  • ಶ್ರೀಲಂಕಾ                                            100 ಕೋಟಿ ರೂಪಾಯಿ

ವಾರ್ಷಿಕ ವರಮಾನದಲ್ಲಿ ₹485 ಕೋಟಿ ಪಡೆಯುವ ಸೌತ್​ ಆಫ್ರಿಕಾ ಮಂಡಳಿ 6ನೇ ಸ್ಥಾನದಲ್ಲಿದ್ರೆ, ₹201 ಕೋಟಿ ಆದಾಯ ಸಂಗ್ರಹಿಸುವ ನ್ಯೂಜಿಲೆಂಡ್​​ ಕ್ರಿಕೆಟ್​ ಮಂಡಳಿಗೆ 7ನೇ ಸ್ಥಾನ. ಇನ್ನು ₹116 ಕೋಟಿ ಸಂಪಾದಿಸುವ ವಿಂಡೀಸ್​ ಕ್ರಿಕೆಟ್​ ಮಂಡಳಿಗೆ 8ನೇ ಸ್ಥಾನ ಸಿಕ್ಕಿದ್ರೆ, ವರ್ಷಕ್ಕೆ ₹113 ಕೋಟಿ ದುಡೀತಿರೋ ಜಿಂಬಾಬ್ವೆಗೆ 9ನೇ ಜಾಗ ದಕ್ಕಿದೆ. ಒಂದು ಕಾಲದಲ್ಲಿ ಕ್ರಿಕೆಟ್​ನಲ್ಲಿ ರಾರಾಜಿಸ್ತಿದ್ದ ಶ್ರೀಲಂಕಾ ₹100 ಕೋಟಿಯೊಂದಿಗೆ 10ನೇ ಸ್ಥಾನ ಪಡೆದುಕೊಂಡಿದೆ.

ಇದಿಷ್ಟು ಕ್ರಿಕೆಟ್​ ಮಂಡಳಿಗಳು ವಾರ್ಷಿಕವಾಗಿ ದುಡಿಯುತ್ತಿರೋ ವರಮಾನ. ಸದ್ಯ ಕೋವಿಡ್​ ಎಫೆಕ್ಟ್​ ಕ್ರಿಕೆಟ್​ ಮೇಲೂ ಬಿದ್ದಿದ್ದು ತಕ್ಕಮಟ್ಟಿಗೆ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿವೆ. ಹಾಗಾಗಿ ಈಗಾಗಿರುವ ನಷ್ಟವನ್ನ ತುಂಬಿಕೊಳ್ಳಲು ಎಲ್ಲಾ ಕ್ರಿಕೆಟ್ ಮಂಡಳಿಗಳು, ಕೊರೊನಾ ಮಧ್ಯೆಯೇ ಸುರಕ್ಷತತೆಯಿಂದ ಸರಣಿ ಮತ್ತು ಟೂರ್ನಿಗಳ ಆಯೋಜನೆಗೆ ಮುಂದಾಗಿವೆ.

ವಿಶೇಷ ವರದಿ: ಪ್ರಸನ್ನಕುಮಾರ್​ ಪಿಎನ್​, ಸ್ಪೋರ್ಟ್ಸ್​ಬ್ಯೂರೋ

The post ಜಗತ್ತಿನ ಶ್ರೀಮಂತ​ ಕ್ರಿಕೆಟ್​ ಮಂಡಳಿ​ ಯಾವ್ದು? ಹುಬ್ಬೇರಿಸಿದ ಬಾಂಗ್ಲಾದೇಶದ ವಾರ್ಷಿಕ ಆದಾಯ appeared first on News First Kannada.

Source: newsfirstlive.com

Source link