ಬೋಟ್ಸ್ವಾನಾ: ಈ ಭೂಮಿಯ ಆಳದಲ್ಲಿ ಎಂತೆಂಥಾ ಅದ್ಭುತಗಳು ಅಡಗಿವೆ ಎನ್ನುವುದು ಊಹೆಗೂ ನಿಲುಕದ್ದು.. ಬಗೆದಂತೆಲ್ಲಾ ಹೊಸ ಹೊಸ ಅಚ್ಚರಿಗಳು, ಅದ್ಭುತಗಳು ಕಣ್ಮುಂದೆ ತೆರೆದುಕೊಳ್ಳುತ್ತಾ ನಮ್ಮನ್ನು ಆಶ್ಚರ್ಯಚಕಿತರನ್ನಾಗಿಸುತ್ತವೆ. ಅಂಥದ್ದೇ ಒಂದು ಘಟನೆ ಇತ್ತೀಚೆಗೆ ನಡೆದಿದೆ. 1,098 ಕ್ಯಾರೆಟ್​ನ ಜಗತ್ತಿನ ಮೂರನೇ ಅತೀದೊಡ್ಡ ಗಾತ್ರದ ಡೈಮಂಡ್​ ಸ್ಟೋನ್​ ಪತ್ತೆಯಾಗಿದೆ.

ಹೌದು, ಸೌತ್​ ಆಫ್ರಿಕಾದ ಬೋಟ್ಸ್​ವಾನದಲ್ಲಿ ಜಗತ್ತಿನ ಮೂರನೇ ಅತ್ಯಂತ ದೊಡ್ಡ ವಜ್ರದ ಕಲ್ಲು ಪತ್ತೆಯಾಗಿದೆ. ಜಾಯಿಂಟ್​ ವೆಂಚರ್​ನ ಪ್ರಕಾರ, ಡೆಬ್ಸ್​ವಾನ ಕಂಪನಿಯ ಕಡೆಯಿಂದ ಈ ವಜ್ರದ ಕಲ್ಲನ್ನ ರಾಷ್ಟ್ರಪತಿ ಮೊಕ್ವೇಟ್ಸಿ ಮಸಿಸಿಯವರಿಗೆ ಗಿಫ್ಟ್​ ಆಗಿ ನೀಡಲಾಗಿದೆ. ಇದು ಜಗತ್ತಿನ ಮೂರನೇ ಅತಿ ದೊಡ್ಡ ವಜ್ರದ ಕಲ್ಲಾಗಿದೆ. ಮಿಕ್ಕ ಎರಡು ಕಲ್ಲುಗಳು ಕೂಡ ಬೊಟ್ಸ್​ವಾನದಲ್ಲೇ ಪತ್ತೆಯಾಗಿದ್ದು, ಮೂರನೇಯದ್ದು ಕೂಡ ಅಲ್ಲೇ ಸಿಕ್ಕಿದೆ.

ಸೌತ್​ ಆಫ್ರಿಕಾದಲ್ಲಿ 1905ರಲ್ಲಿ 3,106 ಕ್ಯಾರೆಟ್​​ ಡೈಮಂಡ್​ ಸಿಕ್ಕಿತ್ತು, ನಂತರ 2015ರಲ್ಲಿ 1,109 ಕಾರೆಟ್​ನ ಡೈಮಂಡ್​ ಪತ್ತೆಯಾಗಿತ್ತು. ಇದೀಗ ಮತ್ತೆ 1,098 ಕ್ಯಾರೆಟ್​ನ ಡೈಮಂಡ್​ ಪತ್ತೆಯಾಗಿದ್ದು ಸುಮಾರು 50 ವರ್ಷದ ನಂತರ ದೊಡ್ಡ ವಜ್ರ ಸಿಕ್ಕಿದೆ ಅಂತಾರೆ ಡೆಬ್ಸವಾನಿ ಕಂಪನಿಯವರು ಹೇಳಿದ್ದಾರೆ.

The post ಜಗತ್ತಿನ 3ನೇ ಅತಿದೊಡ್ಡ ಡೈಮಂಡ್ ಪತ್ತೆ.. 1,098 ಕ್ಯಾರೆಟ್​ನ ಈ ವಜ್ರದ ವಿಶೇಷತೆ ಏನು ಗೊತ್ತಾ? appeared first on News First Kannada.

Source: newsfirstlive.com

Source link