ಮೈಸೂರು: ಮೈಸೂರು, ಚಾಮರಾಜನಗರ, ಮಂಡ್ಯದಲ್ಲಿ ಜಗಳವಾಗುತ್ತದೆ ಎನ್ನುವ ಕಾರಣಕ್ಕಾಗಿ ನಾನು ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ದುರಂತದದ ಸಂದರ್ಭದಲ್ಲಿ ರೋಹಿಣಿ ಸಿಂಧೂರಿ ಅವರನ್ನು ಸಮರ್ಥನೆ ಮಾಡಿಕೊ0ಡಿದ್ದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳುವ ಮೂಲಕ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ್ದಾರೆ.

ನಮ್ಮ ಸರ್ಕಾರ ಆಡಳಿತದಲ್ಲಿದೆ. ಎಲ್ಲಾ ಅಧಿಕಾರಿಗಳು ನಮ್ಮ ಸರ್ಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಹಾಗಾಗಿ ನಾವು ಕೆಲವು ವಿಚಾರಗಳನ್ನು ಹೇಳಲು ಸಾಧ್ಯವಾಗುವುದಿಲ್ಲ. ಸುರೇಶ್ ಕುಮಾರ್ ಅವರು ನಮ್ಮ ಜಿಲ್ಲೆಯ ಡಿಸಿ ಮೇಲೆ ದೂರಿದರು. ಆದರೆ ಅವತ್ತು ಮೈಸೂರನ್ನು ಕಟಕಟೆಗೆ ತಂದು ನಿಲ್ಲಿಸಬಾರದು, ಮೈಸೂರು, ಚಾಮರಾಜನಗರ, ಮಂಡ್ಯದಲ್ಲಿ ಜಗಳವಾಗುತ್ತದೆ ಎನ್ನುವ ಕಾರಣಕ್ಕಾಗಿ ನಾನು ಅಂದು ಚಾಮರಾಜನಗರದಲ್ಲಿ ನಡೆದ ಆಕ್ಸಿಜನ್ ದುರಂತದ ಕುರಿತಾಗಿ ಸಮರ್ಥನೆ ಮಾಡಿಕೊ0ಡಿದ್ದೆ. ಆದರೆ ನನಗೆ ಅದರ ಕುರಿತಾದ ಸತ್ಯಾಸತ್ಯತೆ ಏನು ಎಂದು ನನಗೆ ಗೊತ್ತಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಜಾಗತಿಕವಾಗಿ ಅಮೆಜಾನ್ ಕ್ಷಮೆ ಕೋರಬೇಕು, ಕನ್ನಡ ಮನಸ್ಸುಗಳಿಗೆ ಅಭಿನಂದನೆ – ಎಚ್‍ಡಿಕೆ

ಏನ್ ಸೂಚನೆ ಇತ್ತು. ಯಾಕೆ ಚಾಮರಾಜನಗರಕ್ಕೆ ಆಕ್ಸಿಜನ್ ತಲುಪಿಸಲಿಲ್ಲ ಎಂದು ಈವಾಗ ನೀಡಿರುವ ರಿಪೋರ್ಟ್ ತನಿಖೆ ಶುರುವಾಗಿದೆ. ತದನಂತರ ಸತ್ಯ ಗೊತ್ತಾಗಲಿದೆ. ಟೆಕ್ನಿಕಲ್ ಆಗಿ ಸಿಗದೇ ಇದ್ದರೂ ಈ ವಿಚಾರದಲ್ಲಿ ಏನು ನಡೆದಿದೆ ಎನ್ನುವುದು ಮೈಸೂರಿನವರಾದ ನಮಗೆ ಗೊತ್ತಿದೆ. ಯಾವ ಏಜೆನ್ಸಿಯವರು, ಚಾಮರಾಜನಗರದವರಿಗೆ ಆಕ್ಸಿಜನ್ ಸಿಲಿಂಡರ್ ಯಾಕೆ ನೀಡಲಿಲ್ಲ ಎನ್ನವುದನ್ನು ಕೇಳಿ ಗೊತ್ತಾಗುತ್ತದೆ ಎಂದು ಹೇಳುವ ಮೂಲಕವಾಗಿ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟಿದ್ದಾರೆ. ಇದನ್ನೂ ಓದಿ: ಯೋಗಿಗೆ ಮೋದಿ ಶುಭ ಹಾರೈಸಿಲ್ಲ ಯಾಕೆ? – ನೆಟ್ಟಿಗರಲ್ಲಿ ಬಿಸಿ ಬಿಸಿ ಚರ್ಚೆ

ಪ್ರಕರಣದ ಹಿನ್ನೆಲೆ ಏನು?
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ರೋಗಿಗಳು ಸಾವನ್ನಪ್ಪಿದ್ದರು. ಮೇ 2ರ ರಾತ್ರಿ 11ರಿಂದ ಮೇ 3ರ ಬೆಳಗ್ಗಿನ ಜಾವದವರೆಗೆ ಆಕ್ಸಿಜನ್ ಇರಲಿಲ್ಲ. ಮೈಸೂರು ಜಿಲ್ಲಾಡಳಿತ ಆಕ್ಸಿಜನ್ ನೀಡಲಿಲ್ಲ ಎಂದು ಚಾಮರಾಜನಗರ ಜಿಲ್ಲಾಧಿಕಾರಿ ದೂರಿದ್ದರೆ ಇತ್ತ ರೋಹಿಣಿ ಸಿಂಧೂರಿ ಚಾಮರಾಜನಗರ ಜಿಲ್ಲಾಡಳಿತ ಸರಿಯಾಗಿ ಸಂವಹನ ಮಾಡಿರಲಿಲ್ಲ ಎಂದು ಆರೋಪಿಸಿದ್ದರು.

The post ಜಗಳ ನಡೆಯದೇ ಇರಲು ಅಂದು ಸಿಂಧೂರಿಯನ್ನು ಸಮರ್ಥಿಸಿಕೊಂಡಿದ್ದೆ – ಪ್ರತಾಪ್ ಸಿಂಹ appeared first on Public TV.

Source: publictv.in

Source link