ನವರಸ ನಾಯಕ ಜಗ್ಗೇಶ್ ಮತ್ತು ನಿರ್ದೇಶಕ ವಿಜಯ ಪ್ರಸಾದ್. ಈ ಇಬ್ಬರು ಸೇರಿದ್ರೆ ಚೇಷ್ಟೆಯ ಹಾಸ್ಯದ ಜೊತೆಗೆ ಜೀವನದ ರಹಸ್ಯವನ್ನ ಸೊಗಸಾಗಿ ಸಿನಿಮಾದ ಮೂಲಕ ಹೇಳುತ್ತಾರೆ. ಈಗ ಜಗ್ಗಣ್ಣ ಮತ್ತು ವಿಜಯಣ್ಣನ ಕಾಂಬೋ ತೋತಾಪುರಿ ಸಿನಿಮಾವನ್ನ ತೋರಿಸೋಕೆ ನಿಂತಿದೆ.. ಇಷ್ಟು ದಿನ ಶೂಟಿಂಗ್ ಸೆಟ್ನಲ್ಲಿ ಮಾತ್ರ ಇದ್ಕೊಂಡು ಸದ್ದು ಮಾಡ್ತಿದ್ದವರು ಈಗ ಅಧಿಕೃತವಾಗಿ ಪ್ರಚಾರದ ಪಡಸಾಲಗೆ ಬರೋ ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಮತ್ತೆ ಆನ್ ಆಗಿದೆ ಪ್ರಚಾರದ ಮೈಕ್ ಸೆಟ್. ಆ ಪ್ರಚಾರದ ಮೈಕ್ ಸೆಟ್ನಲ್ಲಿ ಬೇರೆ ಬೇರೆ ಸಿನಿಮಾಗಳ ಅನೌನ್ಸ್ಮೆಂಟ್ ಅಡ್ವಟೈಸ್ಮೆಂಟ್ ಕೇಳ್ತಾ ಇದ್ವು.. ಆದ್ರೆ ಈಗ ಜನವರಿ 24ರಿಂದ ನವರಸ ನಾಯಕ ಜಗ್ಗೇಶ್ ಅವರ ತೋತಾಪುರಿ ಸಿನಿಮಾದ ಸದ್ದು ಕೇಳಲಿದೆ.
2016ರಲ್ಲಿ ಸಿರಿಗನ್ನಡ ಸಿನಿ ಪ್ರೇಕ್ಷಕರಿಗೆ ನೀರ್ದೋಸೆಯನ್ನ ಊಣಬಡಿಸಿದ ಜಗ್ಗೇಶ್ ಮತ್ತು ವಿಜಯ ಪ್ರಸಾದ್ ಸಿನಿ ಕಾಂಬೋ ಈ ಬಾರಿ ತೋತಾಪುರಿ ಸಿನಿಮಾದ ರುಚಿ ರಂಜನೆಯನ್ನ ನೀಡಲು ಮುಂದಾಗಿದೆ..ಇಷ್ಟು ದಿನ ಶೂಟಿಂಗ್ ಸೆಟ್ನಲ್ಲಿ ಭಾಗ ಒಂದು ಭಾಗ ಎರಡು ಅಂತ ಬ್ಯುಸಿ ಯಾಗಿದ್ದ ತೋತಾಪುರಿ ಫಿಲ್ಮ್ ಟೀಮ್ ಸಖತ್ ಪ್ರಚಾರದ ಸೌಂಡ್ ಮಾಡಕೊಂಡು ಸಿನಿಮಾ ರಿಲೀಸ್ಗೆ ಅಣಿಯಾಗಿದೆ.
‘ತೋತಾಪುರಿ’ ಆಡಿಯೋ ಟೀಸರ್ ಮೂಲಕ ಜನವರಿ 24ರಂದು ಪ್ರಚಾರದ ಮೈಕ್ ಸೆಟ್ ಅನ್ನ ಆನ್ ಮಾಡಲಿದೆ ಫಿಲ್ಮ್ ಟೀಮ್. ಇದೇ ಮಾದಲ ಬಾರಿಗೆ ಕನ್ನಡ ಕಾಮಿಡಿ ಸಿನಿಮಾವೊಂದು ಐದು ಭಾಷೆಗಳಲ್ಲಿ ಬಿಡುಗಡೆಯಾಗುವ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಸಿದ್ದವಾಗಿದೆ.
ತೋತಾಪುರಿ ಸಿನಿಮಾ ಅಂಗಳದಲ್ಲಿ ನವರಸ ನಾಯಕ ಜಗ್ಗೇಶ್ ಜೊತೆ ಫಸ್ಟ್ ಟೈಮ್ ‘ಡಾಲಿ’ ಧನಂಜಯ್, ಸುಮನ್ ರಂಗನಾಥ್, ಅದಿತಿ ಪ್ರಭುದೇವ, ದತ್ತಣ್ಣ, ವೀಣಾ ಸುಂದರ್, ಹೇಮಾ ದತ್, ರೋಹಿತ್ ಪದಕಿ ಸೇರಿದಂತೆ ಹಲವಾರು ಪ್ರತಿಭವಂತರಿದ್ದಾರೆ.
ಈ ಹಿಂದೆ ಎರಡನೇ ಮದುವೆ, ಗೋವಿಂದಾಯ ನಮಃ, ಆರ್ ಎಕ್ಸ್ ಸೂರಿ, ಶಿವಲಿಂಗ ಮೊದಲಾದ ಸಿನಿಮಾಗಳನ್ನು ನಿರ್ಮಿಸಿರುವ ಕೆ.ಎ.ಸುರೇಶ್ ‘ಮೋನಿಫ್ಲಿಕ್ಸ್ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ‘ತೋತಾಪುರಿ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ತೋತಾಪುರಿ ಸಿನಿಮಾದ ಬಗ್ಗೆ ನಾವು ಬಹಳ ಹೇಳೋದು ನೀವು ತುಂಬಾ ತಿಳ್ಕೋದು ಬಾಕಿ ಇದೆ ನೋಡ್ತಾ ಇರಿ ಚಿತ್ರಪ್ರೇಮಿಗಳೇ ಕಾರ್ಯಕ್ರಮವನ್ನ.