ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತಿದೆ ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯನವರ ಧೋರಣೆ! | After High Court’s rap, Congress leaders try to put onus on the government


ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನ ಅಗ್ರಹಿಸಿ ಕರ್ನಾಟಕ ಕಾಂಗ್ರೆಸ್ ಆರಂಭಿಸಿದ್ದ ಪಾದಯಾತ್ರೆ ಹೈಕೋರ್ಟ್ ಛೀಮಾರಿ ಹಾಕಿದ ನಂತರ ಸ್ಥಗಿತಗೊಂಡಿದೆ. ಸಹಜವಾಗೇ ಕಾಂಗ್ರೆಸ್ ನಾಯಕರಿಗೆ ಅದರಲ್ಲೂ ಮುಖ್ಯವಾಗಿ ಪಾದಯಾತ್ರೆಯ ರೂವಾರಿ ಡಿಕೆ ಶಿವಕುಮಾರ್ ಮತ್ತು ಪಕ್ಷದ ಹಿರಿಯ ನಾಯಕ ಸಿದ್ದರಾಮಯ್ಯನವರಿಗೆ ಭಾರಿ ಮುಖಭಂಗವಾಗಿದೆ. ಕಾಂಗ್ರೆಸ್ ಪಕ್ಷವು ಪಾದಯಾತ್ರೆಯನ್ನು ನಿಲ್ಲಿಸುವ ನಿರ್ಧಾರ ತೆಗೆದುಕೊಳ್ಳುವ ಮೊದಲು ಅಂದರೆ ಗುರುವಾರ ಬೆಳಗ್ಗೆ ಸಿದ್ದರಾಮಯ್ಯನವರು ಬೆಂಗಳೂರಿನಿಂದ ರಾಮನಗರಕ್ಕೆ ಹೊರಡುವ ಸಂದರ್ಭದಲ್ಲಿ ಮಾಧ್ಯಮದವರು ಕೆಲ ಮುಜುಗುರ ಹುಟ್ಟುವ ಪ್ರಶ್ನೆಗಳನ್ನು ಅವರಿಗೆ ಕೇಳಿದರು.

ಪಾದಯಾತ್ರೆ ಮುಂದುವರಿಸುತ್ತೀರಾ ಅಥವಾ ನಿಲ್ಲಿಸುತ್ತೀರಾ ಅಂತ ಮಾಧ್ಯಮದವರು ಕೇಳಿದಾಗ ಪಕ್ಷದ ಎಲ್ಲ ಶಾಸಕರು ಮತ್ತು ನಾಯಕರನ್ನು ಸಭೆಗೆ ಕರೆಯಲಾಗಿದೆ. ಸಭೆಯಲ್ಲಿ ಚರ್ಚೆ ನಡೆಸಿದ ನಂತರ ಒಂದು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

ರಾಮನಗರದಲ್ಲಿ ಪಾದಯಾತ್ರೆಯನ್ನು ನಿಲ್ಲಿಸಲು ಸರ್ಕಾರ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಮಾಧ್ಯಮದವರು ಹೇಳಿದಾಗ, ತಮ್ಮ ಎಂದಿನ ಉಡಾಫೆ ಮನೋಭಾವ ಪ್ರದರ್ಶಿಸಿದ ಮಾಜಿ ಮುಖ್ಯಮಂತ್ರಿಗಳು ಇಷ್ಟು ದಿನ ಯಾಕೆ ತಡೆಯಲಿಲ್ಲ, ಹೈಕೋರ್ಟ್ ತರಾಟೆಗೆ ತೆಗೆದುಕೊಂಡ ಮೇಲೆ ನಿಲ್ಲಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.

ಇದನ್ನು ಧಾಡಸೀ ಪ್ರವೃತ್ತಿ ಅಂತ ಹೇಳುತ್ತಾರೆ. ಹೈಕೋರ್ಟ್ ಕಾಂಗ್ರೆಸ್ ಪಕ್ಷಕ್ಕೂ ಛೀಮಾರಿ ಹಾಕಿದೆ. ಅದನ್ನು ನೆನೆಪಿಸಿಕೊಳ್ಳುವ ಪ್ರಯತ್ನ ಸಹ ಸಿದ್ದರಾಮಯ್ಯ ಮಾಡುವುದಿಲ್ಲ.

ತಾವು ಮಾಡಿದ್ದು ಸರಿ, ಸರ್ಕಾರ ಮಾಡುತ್ತಿರುವುದು ಸರಿ ಅನ್ನುವಂತಿದೆ ಅವರ ಮಾತಿನ ಧೋರಣೆ.

TV9 Kannada


Leave a Reply

Your email address will not be published. Required fields are marked *