ಟೀಮ್ ಇಂಡಿಯಾದ‌ ಆಲ್‌ರೌಂಡರ್‌ ರವೀಂದ್ರ ಜಡೇಜಾರಂಥ ಆಟಗಾರನ ಅಗತ್ಯತೆ, ಇಂಗ್ಲೆಂಡ್‌ ತಂಡಕ್ಕಿರುವುದಾಗಿ ಮಾಜಿ ಆಟಗಾರ ಕೆವಿನ್‌ ಪೀಟರ್ಸನ್‌, ವೇಲ್ಸ್​ ಕ್ರಿಕೆಟ್ ಬೋರ್ಡ್​ಗೆ ಸಲಹೆ ನೀಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಇಂಗ್ಲೆಂಡ್ ಮಾಜಿ ಆಟಗಾರ ಕೆವಿನ್, ಇಂಗ್ಲಿಷ್ ಎಡಗೈ ಸ್ಪಿನ್‌ ಆಲ್‌ರೌಂಡರ್‌ಗಳು, ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿಲ್ಲ. ಇದು ನನಗೆ ನಿರಾಸೆ ಉಂಟು ಮಾಡಿದೆ. ಜಡೇಜಾ, ಟೆಸ್ಟ್, ಏಕದಿನ, ಟಿ20 ಕ್ರಿಕೆಟ್‌ನಲ್ಲಿ ಏನು ಮಾಡುತ್ತಿದ್ದಾರೆಂದು ಒಮ್ಮೆ ನೋಡಿ. ಮುಖ್ಯವಾಗಿ ವೇಲ್ಸ್​​ ಕ್ರಿಕೆಟ್​ ಬೋರ್ಡ್​ ಒಂದು ಸ್ಥಾನಕ್ಕೆ ಹೆಚ್ಚು ಆದ್ಯತೆ ನೀಡಬೇಕಿದೆ.

ಎಲ್ಲಾ ಫಾರ್ಮೆಟ್​ನಲ್ಲಿ ಬ್ಯಾಟಿಂಗ್, ಬೌಲಿಂಗ್ ಮಾಡಬಲ್ಲ, ತಂಡಕ್ಕೆ ನೆರವಾಗುವ ಆಟಗಾರನ ಅಗತ್ಯವಿದೆ. ಒಂದು ವೇಳೆ ಉದಯೋನ್ಮುಖ ಆಟಗಾರನಾಗಿದ್ದರೆ ಅಥವಾ ಕೌಂಟಿ ಕ್ರಿಕೆಟರ್‌ ಆಗಿದ್ದರೆ ಖಂಡಿತ ಜಡೇಜಾರನ್ನ ಅನುಸರಿಸಿ. ಏಕೆಂದರೆ ಜಡೇಜಾ ನಿಸ್ಸಂಶವಾಗಿ ಸೂಪರ್‌ಸ್ಟಾರ್‌. ಇಂಗ್ಲೆಂಡ್‌ ಪರ ದೀರ್ಘಕಾಲ ಟೆಸ್ಟ್ ಕ್ರಿಕೆಟ್‌ ಆಡಬೇಕಾದರೆ ಇದನ್ನು ಮಾಡುವಂತೆ ಪೀಟರ್ಸನ್‌ ಸಲಹೆ ನೀಡಿದ್ದಾರೆ.

The post ಜಡೇಜಾರಂತಹ ಆಟಗಾರ ಇಂಗ್ಲೆಂಡ್​​ ತಂಡಕ್ಕೆ ಬೇಕು -ಪೀಟರ್​ಸನ್ appeared first on News First Kannada.

Source: newsfirstlive.com

Source link