ಇಂಜುರಿಯಿಂದಾಗಿ 2 ತಿಂಗಳು ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ಆಲ್ರೌಂಡರ್ ಜಡೇಜಾ, ತಂಡಕ್ಕೆ ವಾಪಸ್ಸಾಗಿದ್ದು, ಮತ್ತೆ ಮೈದಾನಕ್ಕಿಳಿದು ಅಬ್ಬರಿಸಲು ಸಜ್ಜಾಗಿದ್ದಾರೆ. ಆದ್ರೆ, ಜಡೇಜಾಗೆ ಕೆಲ ಸವಾಲುಗಳು ಎದುರಾಗಿವೆ. ಈ ಸವಾಲುಗಳನ್ನ ಜಡೇಜಾ ಯಾವ ರೀತಿ ಫೇಸ್ ಮಾಡಲಿದ್ದಾರೆ ಅನ್ನೋದು ಕುತೂಹಲ ಮೂಡಿಸಿದೆ.
ಇಂಜುರಿಯಿಂದ 2 ತಿಂಗಳು ಭಾರತ ತಂಡಕ್ಕೆ ದೂರವಾಗಿದ್ದ ಆಲ್ರೌಂಡರ್ ರವೀಂದ್ರ ಜಡೇಜಾ, ಇದೀಗ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ಕಿವೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಇಂಜುರಿಗೊಳಗಾಗಿದ್ದ ಜಡ್ಡು ಫಿಟ್ ಆಗಿದ್ದು, ಇಂದು ಶ್ರೀಲಂಕಾ ವಿರುದ್ಧ ಕಣಕ್ಕಿಳಿಯಲು ರೆಡಿಯಾಗಿದ್ದಾರೆ. ಆದ್ರೆ ತಂಡಕ್ಕೆ ವಾಪಸ್ಸಾಗಿರೋ ಜಡೇಜಾಗೇ ಬಿಗ್ ಚಾಲೆಂಜಸ್ ಎದುರಾಗಿವೆ. ಮುಂಬರೋ ಟಿ20 ವಿಶ್ವಕಪ್ ಹಾಗೂ ತಂಡದಲ್ಲಿ ಭದ್ರವಾಗಿ ನೆಲೆಯೂರಬೇಕಾದ್ರೆ, ಈ ಎಲ್ಲಾ ಸವಾಲುಗಳನ್ನ ಜಡ್ಡು ಮೆಟ್ಟಿ ನಿಲ್ಲಲೇಬೇಕಿದೆ.
ಸಿಕ್ಕ ಅವಕಾಶದಲ್ಲಿ ಫಾರ್ಮ್ ಕಂಡುಕೊಳ್ಳಬೇಕಿದೆ ಜಡ್ಡು..!
ಯೆಸ್..! ಯಾವುದೇ ಕ್ರಿಕೆಟರ್ಗಾದ್ರೂ ಲಾಂಗ್ ಗ್ಯಾಪ್ ಬಳಿಕ ಮತ್ತೆ ಹಳೆಯ ಲಯಕ್ಕೆ ಮರಳೋದು ಅಷ್ಟು ಸುಲಭವಲ್ಲ. ಹಳೆಯ ಖದರ್ ತೋರಿಸಬೇಕಾದ್ರೆ, ಒಂದಿಷ್ಟು ಸಮಯ ಬೇಕೇ ಬೇಕು. ಆದ್ರೆ, ಜಡೇಜಾಗೆ ಸಮಯ ತುಂಬಾ ಕಡಿಮೆ ಇದ್ದು, ಸಿಕ್ಕ ಅವಕಾಶಗಳಲ್ಲೇ ಜಡೇಜಾ ಫಾರ್ಮ್ಗೆ ಮರಳೋದು ಅನಿವಾರ್ಯ.
ಅದ್ಭುತ ಪ್ರದರ್ಶನ ನೀಡಿದ್ರೆ ಮಾತ್ರ ಜಡೇಜಾಗೆ ಉಳಿಗಾಲ..!
ಈ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯೋ, ಟಿ20 ವಿಶ್ವಕಪ್ ದಂಗಲ್ಗಾಗಿ ಸಾಲಿಡ್ ಟೀಮ್ ಕಳಿಸಲು ಬಿಸಿಸಿಐ ಚಿಂತಿಸ್ತಿದೆ. ಹಾಗೇ ಈ ತಂಡದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಕಾಂಪಿಟೇಷನ್ ಇದೆ. ಹಲವು ಆಟಗಾರರು ಈಗಾಗ್ಲೇ ಈ ರೇಸ್ನಲ್ಲಿ ಮುಂದಿದ್ದಾರೆ. ಹಾಗಾಗಿ ಚುಟುಕು ಸಮರಕ್ಕೆ ಸ್ಥಾನ ಭದ್ರಪಡಿಸಿಕೊಳ್ಳಬೇಕಾದ್ರೆ ordinory ಅಲ್ಲ, extraordinary ಪರ್ಫಾಮೆನ್ಸ್ ನೀಡಲೇಬೇಕು.
ಜಡೇಜಾಗೆ ಅಕ್ಷರ್, ಅಶ್ವಿನ್, ಸುಂದರ್ ಕಾಂಪಿಟೇಟರ್ಸ್..!
ತಂಡದಲ್ಲಿ ಆಟಗಾರರ ನಡುವೆ ಕಾಂಪಿಟೇಷನ್ ಜಾಸ್ತಿ ಇದೆ. ಅದರಂತೆ ಸ್ಪಿನ್ ಆಲ್ರೌಂಡರ್ ಸ್ಥಾನಕ್ಕೆ ಜಡೇಜಾ ಸೇರಿ ನಾಲ್ವರ ನಡುವೆ ಪೈಪೋಟಿ ದೊಡ್ಡದಾಗಿದೆ. ಆಲ್ರೌಂಡ್ ಆಟದ ಮೂಲಕ ಮಿಂಚ್ತಿರುವ ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಜಡೇಜಾಗೆ ಸ್ಟ್ರಾಂಗ್ ಕಂಟೆಂಡರ್ಗಳಾಗಿದ್ದಾರೆ. ಅನುಭವಿ ಆರ್.ಅಶ್ವಿನ್ ಸಹ ತಂಡಕ್ಕೆ ರೀ ಎಂಟ್ರಿಗೆ ಸಜ್ಜಾಗಿದ್ದಾರೆ. ಹೀಗಾಗಿ ಜಡೇಜಾ ಸಕ್ಕಾತ್ತಾಗೇ ವರ್ಕೌಟ್ ಮಾಡಬೇಕು.
ಫಿಟ್ನೆಸ್ ಬಗ್ಗೆಯೂ ಗಮಹರಿಸಬೇಕಿದೆ ಆಲ್ರೌಂಡರ್..!
ಅದ್ಭುತ ಪ್ರದರ್ಶನ ನೀಡೋದ್ರ ಜೊತೆಗೆ ಫಿಟ್ನೆಸ್ ಕಡೆಯೂ ಜಡೇಜಾ ಗಮನ ನೀಡ್ಬೇಕು. ಯಾಕೆಂದ್ರೆ ಫಿಟ್ನೆಸ್ ಸಮಸ್ಯೆ ಎದುರಿಸಿದಂತೆಲ್ಲಾ ತಂಡದಲ್ಲಿ ಸ್ಥಾನ ಸಿಗೋದೇ ಅನುಮಾನವಾಗಿ ಬಿಡುತ್ತೆ. ಹಾಗಾಗಿ ಪೈಪೋಟಿ ಇರೋ ಈ ಪರಿಸ್ಥಿತಿಯಲ್ಲಿ ಜಡೇಜಾ ಫಿಟ್ನೆಸ್ ಮೇಲೆ ಫೋಕಸ್ ಮಾಡಲೇಬೇಕು. ಹಾಗಿದ್ದಲ್ಲಿ ಮಾತ್ರ ತಂಡದಲ್ಲಿ ಸ್ಥಾನ ಸುಭದ್ರವಾಗಿರುತ್ತೆ.
ಒಟ್ನಲ್ಲಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮೂರರಲ್ಲೂ ಅದ್ಭುತ ಪ್ರದರ್ಶನ ನೀಡಿ 3D ಪ್ಲೇಯರ್ ಎನಿಸಿರುವ ಜಡೇಜಾ, ಈ ಹಿಂದಿನಿಂತೆ ಮಿಂಚ್ತಾರಾ ಅನ್ನೋದು ಮ್ಯಾನೇಜ್ಮೆಂಟ್ ಮುಂದಿರೋ ದೊಡ್ಡ ಪ್ರಶ್ನೆಯಾಗಿದೆ.