ಕ್ರಿಕೆಟ್​ ಎಂಬ ಜಂಟಲ್​ಮನ್ ಗೇಮ್​​ನಲ್ಲಿ ಯಾರು ದ್ವಿಪಾತ್ರಾಭಿನಯ ಮೂಲಕ ತಂಡಕ್ಕೆ ನೆರವಾಗ್ತಾರೋ, ಅವರೇ ಆಲ್​ರೌಂಡರ್​​ಗಳು..! ಈ ಆಲ್​ರೌಂಡರ್​ಗಳು ಸದಾ ತಂಡd ನೆರವಿಗೆ ಧಾವಿಸ್ತಾರೆ. ಬ್ಯಾಟಿಂಗ್ ಬೌಲಿಂಗ್​ನಲ್ಲಿ ಸಾಮರ್ಥ್ಯಕ್ಕೂ ಮೀರಿದ ಪ್ರದರ್ಶನದಿಂದ, ಕ್ವಾಲಿಟಿ ಆಲ್​ರೌಂಡರ್​​ಗಳು ಎನಿಸಿಕೊಳ್ಳೋ ಇವರೇ, ತಂಡದ ಎಕ್ಸ್​ಫ್ಯಾಕ್ಟರ್ಸ್​. ಹಾಗಾಗಿಯೇ ಕ್ರಿಕೆಟ್​​ನಲ್ಲಿ, ಈ ಆಲ್​ರೌಂಡರ್​​ಗಳಿಗೆ ಪ್ರತ್ಯೇಕ ಸ್ಥಾನಮಾನ..!

ಹೀಗೆ ವಿಶೇಷವಾಗಿ ಕಾಣಿಸಿಕೊಳ್ಳುವ ಆಲ್​ರೌಂಡರ್​ಗಳಲ್ಲಿ ಮಾಡ್ರನ್​ ಡೇ ಕ್ರಿಕೆಟ್​ಮ ಬೆಸ್ಟ್ ಆಲ್​​ರೌಂಡರ್ ಯಾರು..​.? ಈ ಪ್ರಶ್ನೆ ಬಂದಾಗ ತಟ್ಟನೇ ಇಂಗ್ಲೆಂಡ್​ನ ಬೆನ್​ ಸ್ಟೋಕ್ಸ್​, ಟೀಮ್ ಇಂಡಿಯಾದ ರವೀಂದ್ರ ಜಡೇಜಾ ಕಣ್ಮುಂದೆ ಕಾಣಿಸಿಕೊಳ್ತಾರೆ. ಯಾಕಂದ್ರೆ ಸದ್ಯ ಮಾಡ್ರನ್ ಡೇ ಕ್ರಿಕೆಟ್​ನ ಮೂರು ಫಾರ್ಮೆಟ್​ಗಳಲ್ಲೂ ಮಿಂಚುತ್ತಿರುವ ಆಲ್​ರೌಂಡರ್​​​ಗಳೂ, ಇವರಿಬ್ಬರೇ ಆಗಿದ್ದಾರೆ. ಹಾಗಾದ್ರೆ ಇವರಿಬ್ಬರಲ್ಲಿ ಯಾರು ಬೆಸ್ಟ್..?

ಇಂಗ್ಲೆಂಡ್​​ನ ಬೆನ್​ ಸ್ಟೋಕ್ಸ್​ or ಇಂಡಿಯನ್ ಜಡ್ಡುನಾ..?
ಟೀಮ್ ಇಂಡಿಯಾದ ರವೀಂದ್ರ ಜಡೇಜಾ, ಇಂಗ್ಲೆಂಡ್​ನ ಬೆನ್ ಸ್ಟೋಕ್ಸ್​..!! ಸದ್ಯ ವಿಶ್ವ ಕ್ರಿಕೆಟ್​​ನ ಪ್ರಮುಖ ಆಲ್​ರೌಂಡರ್​​ಗಳು.. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್​ನಲ್ಲಿ ತಂಡಕ್ಕೆ ನೆರವಾಗುವ ಇವರಿಬ್ಬರು, ವೇರಿ ಡೇಂಜರಸ್ ಪ್ಲೇಯರ್ಸ್​ ಆಗಿದ್ದಾರೆ. ಎಷ್ಟರ ಮಟ್ಟಿಗೆ ಅಂದ್ರೆ, ಉಭಯ ತಂಡಗಳಲ್ಲಿ ಆಲ್​ರೌಂಡರ್ ಆಯ್ಕೆ ಬಂದಾಗ, ಇವರಿಬ್ಬರೇ ಫಸ್ಟ್ ಚಾಯ್ಸ್​ ಆಗಿರ್ತಾರೆ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ…

ಬ್ಯಾಟಿಂಗ್​​ನಲ್ಲಿ ಯಾರು ಬೆಸ್ಟ್​ ಚಾಯ್ಸ್​..?
ಬ್ಯಾಟಿಂಗ್ ವಿಚಾರದಲ್ಲಿ ಇವರಿಬ್ಬರಲ್ಲಿ ಯಾರು ಬೆಸ್ಟ್​ ಎಂದಾಗ, ಅಂಕಿಅಂಶಗಳು ಬೆನ್​ ಸ್ಟೋಕ್ಸ್​​ ಪರವಾಗಿಯೇ ಮಾತನಾಡುತ್ತವೇ.. ಯಾಕಂದ್ರೆ ಬ್ಯಾಟಿಂಗ್​​ನ ಟ್ರ್ಯಾಕ್​ ರೆಕಾರ್ಡ್​ನಲ್ಲಿ ಸ್ಟೋಕ್ಸ್​, ಹೆಚ್ಚು ರನ್ ಕಲೆಹಾಕಿದ್ದಾರೆ. ಅಷ್ಟೇ ಅಲ್ಲ..! ಬೆನ್ ಸ್ಟೋಕ್ಸ್​ರ ಗಳಿಕೆಯ ರನ್​​​ ಜೊತೆಗೆ, ಜಡ್ಡು ಗಳಿಸಿದ ರನ್ ಹೋಲಿಕೆ ಮಾಡಿದಾಗ ಅರ್ಧಕ್ಕೆ ಅರ್ಧ ರನ್​​​​ ಕಡಿಮೆಯೇ ಆಗಿರುತ್ತೆ. ಹಾಗಾಗಿ ಸಹಜವಾಗೇ ಬೆನ್ ಸ್ಟೋಕ್ಸ್​ ಮೊದಲ ಆಯ್ಕೆಯಾಗಿರ್ತಾರೆ.

ಉಭಯ ಆಟಗಾರರ ಬ್ಯಾಟಿಂಗ್
ಜಡೇಜಾ                            ಸ್ಟೋಕ್ಸ್
210               ಇನ್ನಿಂಗ್ಸ್​         230
4582                ರನ್          7557
32.82            ಸರಾಸರಿ        37.04
01                   ಶತಕ            13

ಮೇಲಿನ ಅಂಕಿಅಂಶಗಳಲ್ಲಿ ಜಡೇಜಾ ಹಿಂದೆ ಬಿದ್ದಿರಬಹುದು.. ಆದ್ರೆ, 2018ರ ಬಳಿಕ ಜಡೇಜಾ ಬ್ಯಾಟಿಂಗ್ ಸಂಪೂರ್ಣ ಬದಲಾಗಿದೆ.

2018ರಬಳಿಕ ಉಭಯ ಆಟಗಾರರ ಬ್ಯಾಟಿಂಗ್
ಜಡೇಜಾ                                  ಸ್ಟೋಕ್ಸ್
47                   ಇನ್ನಿಂಗ್ಸ್​               70
1376                  ರನ್                3286
47.44             ಸರಾಸರಿ              43.23
01                      ಶತಕ                  04

2018ರ ಬಳಿಕ ಜಡೇಜಾ ಅಂಕಿ-ಅಂಶ ಗಮನಿಸಿದರೇ, ಬೆನ್​ ಸ್ಟೋಕ್ಸ್​ ಸರಾಸರಿಗಿಂತ ಜಡೇಜಾ ಸರಾಸರಿ ಹೆಚ್ಚಿದೆ. ಅದ್ರಲ್ಲೂ ಮ್ಯಾಚ್ ಫಿನಿಷರ್ ರೋಲ್ ಪ್ಲೇ ಮಾಡುತ್ತಾ, ತಂಡದ ಟ್ರಂಪ್ ಕಾರ್ಡ್ ಆಗಿಯೂ ಗುರುತಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ..! ಸ್ಲಾಗ್​ ಓವರ್​ಗಳಲ್ಲಿ ತಂಡ ಬಿಗ್ ಟಾರ್ಗೆಟ್​ ಮಾಡುವಲ್ಲಿ ಹೆಚ್ಚು ನೆರವಾಗ್ತಿದ್ದಾರೆ ಅಂತಾನೇ ಹೇಳಬಹುದು..!

ಬೌಲಿಂಗ್​​ನಲ್ಲಿ ಜಡೇಜಾ ಮುಂದೆ.. ಸ್ಟೋಕ್ಸ್ ಹಿಂದೆ..!
ದಾಂಡಿಗರಾಗಿ ಬೌಲರ್​ಗಳನ್ನ ಚಚ್ಚುವ ಇವರಿಬ್ಬರು, ಬ್ಯಾಟ್ಸ್​ಮನ್​ಗಳಿಗೂ ಕಂಟಕವಾಗಿ ಕಾಡ್ತಾರೆ. ಎಡಗೈ ಸ್ಪಿನ್​ ಮೂಲಕ ಬ್ಯಾಟ್ಸ್​ಮನ್​ಗಳಿಗೆ ಜಡ್ಡು ಬ್ರೇಕ್​ ಹಾಕಿದರೇ, ಬೆನ್ ಸ್ಟೋಕ್ಸ್​ ತಮ್ಮ ಲೈನ್​ ಆ್ಯಂಡ್ ಲೆನ್ತ್​ ಬೌಲಿಂಗ್ ಮೂಲಕ ಎದುರಾಳಿಗೆ ಕಾಡುತ್ತಾರೆ.. ಇನ್ನೂ ಟೆಸ್ಟ್​, ಏಕದಿನ ಆಲ್​ರೌಂಡರ್​​ ಱಂಕಿಂಗ್​ನಲ್ಲಿ ಬೆನ್ ಸ್ಟೋಕ್ಸ್​ ಮೇಲ್ಪಂಕ್ತಿಯಲ್ಲಿ ಕಾಣಿಸಿಕೊಂಡರು. ವಿಕೆಟ್ ಟೇಕಿಂಗ್​ ವಿಚಾರದಲ್ಲಿ ರಾಕ್​​ಸ್ಟಾರ್​ ಜಡ್ಡು, ಬೆನ್ ಸ್ಟೋಕ್ಸ್​ಗಿಂತ ಮುಂದೆಯೇ ಇದ್ದಾರೆ.

ಉಭಯ ಆಟಗಾರರ ಬೌಲಿಂಗ್ ಪ್ರದರ್ಶನ
ಜಡೇಜಾ                           ಸ್ಟೋಕ್ಸ್​
310              ಇನ್ನಿಂಗ್ಸ್​         216
447              ವಿಕೆಟ್           245
30.26           ಸರಾಸರಿ       34.78
10 5              ವಿಕೆಟ್          05

ವಿಕೆಟ್ ಬೇಟೆಯಾಡುವುದರಲ್ಲಿ ಮುಂದಿರುವ ಜಡೇಜಾ, ಫೀಲ್ಡಿಂಗ್​ನಲ್ಲಿ ಟೀಮ್ ಇಂಡಿಯಾದ ಗನ್ ಫೀಲ್ಡರ್​​ ಅಂತಾನೇ ಹೇಳಬಹುದು..! ಕಷ್ಟದ ಕ್ಯಾಚ್​​ಗಳನ್ನ ಸುಲಭವಾಗಿ ತೆಕ್ಕೆಗೆ ತೆಗೆದುಕೊಳ್ಳುವ ವಿಚಾರದಲ್ಲಿ ಜಡೇಜಾ ಮುಂದೆ, ಯಾರು ಇಲ್ಲ.. ಈ ವಿಚಾರದಲ್ಲಿ ಬೆನ್​ ಸ್ಟೋಕ್ಸ್​, ಸೇಫ್ ಹ್ಯಾಂಡ್.. ಆದ್ರೆ ಜಡೇಜಾಗೆ ಸರಿಸಾಟಿ ಅಲ್ಲ ಅನ್ನೋದ ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಒಟ್ನಲ್ಲಿ.. ಜಡೇಜಾ-ಬೆನ್ ಸ್ಟೋಕ್ಸ್​ ಇಬ್ಬರೂ, ವಿಶ್ವಕ್ರಿಕೆಟ್​ನ ಶ್ರೇಷ್ಠ ಆಲ್​ರೌಂಡಗಳು​.. ಆದ್ರೆ ಇಬ್ಬರಲ್ಲಿ ಯಾರು ಬೆಸ್ಟ್ ಅನ್ನೋದನ್ನ, ಕ್ರಿಕೆಟ್​ ಅಭಿಮಾನಿಗಳೇ ತೀರ್ಮಾನಿಸಬೇಕಿದೆ.

The post ಜಡೇಜಾ V/S ಬೆನ್ ಸ್ಟೋಕ್ಸ್- ಇಬ್ಬರಲ್ಲಿ ಬೆಸ್ಟ್ ಆಲ್​ರೌಂಡ್ ಯಾರು..? appeared first on News First Kannada.

Source: newsfirstlive.com

Source link