ಕೊರೊನಾದಿಂದ ಬಳಲ್ತಿರೋ ಜನರಿಗೆ ಸಹಾಯ ಮಾಡಲು ಸ್ವಯಂ ಪ್ರೇರಿತವಾಗಿ ಸ್ಯಾಂಡಲ್​ವುಡ್​​ ನಟ ಅರ್ಜುನ್​ ಗೌಡ ಕೊರೊನಾ ವಾರಿಯರ್​ ಆಗಿದ್ದಾರೆ. ಫ್ರೀ ಆಫ್​ ಕಾಸ್ಟ್​ನಲ್ಲಿ ಕನರ ಸಹಾಯಕ್ಕೆ ನಿಂತಿರುವ ಅರ್ಜುನ್​, ಸದ್ಯ ಆ್ಯಂಬುಲೆನ್ಸ್​ ಡ್ರೈವರ್​ ಆಗಿ ಸಾಮಾಜಿಕ ಕಾರ್ಯ ಮಾಡ್ತಿದ್ದಾರೆ.

ಹೌದು.. ಕೊರೊನಾದಿಂದ ಬಳಲ್ತಿರೋ ರೋಗಿಗಳನ್ನ ಆಸ್ಪತ್ರೆಗೆ ಸಾಗಿಸೋದಲ್ಲದೇ, ಮೃತ ದೇಹಗಳ ಅಂತ್ಯ ಸಂಸ್ಕಾರವನ್ನೂ ಅರ್ಜುನ್ ಅವರೇ ನಡೆಸ್ತಿದ್ದಾರೆ. ಅಂದ್ಹಾಗೇ ಅರ್ಜುನ್​ ಈ ಸೇವೆಗೆ ಪ್ರಾಜೆಕ್ಟ್​ ಸ್ಮೈಲ್​​ ಟ್ರಸ್ಟ್​ ಅಂತ ಹೆಸರಿಟ್ಟಿದ್ದಾರೆ. ಈ ಪ್ರಾಜೆಕ್ಟ್​ ಮೂಲಕನೇ ಕೊರೊನಾ ತೊಂದರೆಯಲ್ಲಿ ಸಿಲುಕಿದರವರಿಗೆ ನೆರವಾಗ್ತಿದ್ದಾರೆ ಯುವ ನಟ.

ರೋಗಿಗಳನ್ನ ಆಸ್ಪತ್ರೆಗೆ ಸಾಗಿಸೋದು ಹಾಗೂ ಮೃತ ದೇಹಗಳ ಅಂತ್ಯ ಸಂಸ್ಕಾರದ ನೆರವಿನ ಜೊತೆಗೆ ಆಕ್ಸಿಜನ್​ ಪೂರೈಸುವಲ್ಲೂ ಅರ್ಜುನ್​ ಸಹಾಯ ಮಾಡೋದಾಗಿ ಹೇಳಿಕೊಂಡಿದ್ದಾರೆ. ಅರ್ಜುನ್​ ಗೌಡ ಕನ್ನಡದ ಯುವರತ್ನ, ಒಡೆಯ, ರುಸ್ತುಂ ಹಾಗೂ ಆ ದೃಶ್ಯ ಚಿತ್ರಗಳನ್ನ ನಟಿಸಿದ್ದಾರೆ.

ನ್ಯೂಸ್​ಫಸ್ಟ್​ ಕಳಕಳಿ:

ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ. ಮಾಸ್ಕ್ ಧರಿಸಿ, ಸೋಶಿಯಲ್ ಡಿಸ್ಟನ್ಸ್ ಕಾಪಾಡಿ. ಕೈ ತೊಳೆಯುತ್ತಿರಿ. ಮತ್ತು ಮೇ 1 ರಿಂದ 18ರ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಲು ಅರ್ಹರಾಗಿದ್ದು ರೆಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಅದಕ್ಕಾಗಿ https://www.cowin.gov.in/  ಇಲ್ಲಿಗೆ ಭೇಟಿ ಕೊಟ್ಟು ನೊಂದಣಿ ಮಾಡಿಕೊಳ್ಳಿ. ಮತ್ತೊಂದು ಮುಖ್ಯ ಸಂಗತಿ ಗಮನಿಸಿ CoWin ಆ್ಯಪ್ ಸಾರ್ವಜನಿಕರಿಗೆ ಅಲ್ಲ. ಹೀಗಾಗಿ ಕಡ್ಡಾಯವಾಗಿ ವೆಬ್​ಸೈಟ್​ನಲ್ಲಿಯೇ ನೊಂದಾಯಿಸಿಕೊಳ್ಳಬೇಕು.

The post ಜನರಿಗೆ ಸಹಾಯ ಮಾಡಲು ಆ್ಯಂಬುಲೆನ್ಸ್ ಡ್ರೈವರ್ ಆದ ನಟ ಅರ್ಜುನ್​ ಗೌಡ appeared first on News First Kannada.

Source: newsfirstlive.com

Source link