ಜನರು ಇಂದಿರಾಜೀ ಅವರನ್ನು ಕ್ಷಮಿಸಿಲ್ಲ, ಮೋದಿಯವರನ್ನೂ ಕ್ಷಮಿಸಲಾರರು: ಮಮತಾ ಬ್ಯಾನರ್ಜಿ | Narendra Modi apologised to farmers but message has already reached he won’t be excused says Mamata Banerjee


ಜನರು ಇಂದಿರಾಜೀ ಅವರನ್ನು ಕ್ಷಮಿಸಿಲ್ಲ, ಮೋದಿಯವರನ್ನೂ ಕ್ಷಮಿಸಲಾರರು: ಮಮತಾ ಬ್ಯಾನರ್ಜಿ

ಮಮತಾ ಬ್ಯಾನರ್ಜಿ

ಮುಂಬೈ: ಪಶ್ಚಿಮ ಬಂಗಾಳದ (West Bengal) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಸವಾಲೆಸೆಯಲು ರಾಷ್ಟ್ರೀಯ  ವೇದಿಕೆಯನ್ನು ನಿರ್ಮಿಸುವಲ್ಲಿ ಮುಂಬೈನಲ್ಲಿ ನಿರತರಾಗಿದ್ದಾರೆ. ಈಗ ರದ್ದಾದ ಕೃಷಿ ಕಾನೂನುಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ವಿರುದ್ಧ ವಾಗ್ದಾಳಿ ನಡೆಸಿದ ಅವರು ಜನರು ಮೋದಿಯನ್ನು ಕ್ಷಮಿಸುವುದಿಲ್ಲ ಎಂದಿದ್ದಾರೆ.  ಬಿಜೆಪಿಯ ವಿರೋಧ ಪಕ್ಷವಾಗಿ ಪ್ರಮುಖ ಸ್ಥಾನಗಳಿಸುವ ಉದ್ದೇಶದಿಂದ ಕಾಂಗ್ರಸ್ ವಿರುದ್ಧವೂ ವಾಗ್ದಾಳಿ ನಡೆಸುತ್ತಿರುವ ಮಮತಾ, ಶಾರುಖ್ ಖಾನ್ ಅವರ ಮಗ ಆರ್ಯನ್ ಒಳಗೊಂಡ ಡ್ರಗ್ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದು ಬಿಜೆಪಿ “ಕ್ರೂರ ಮತ್ತು ಪ್ರಜಾಪ್ರಭುತ್ವ ವಿರೋಧಿ ಪಕ್ಷ” ಎಂದಿದ್ದಾರೆ. “ಇಂದಿರಾ ಜೀ ಅತ್ಯಂತ ಶಕ್ತಿಶಾಲಿ ನಾಯಕಿಯಾಗಿದ್ದರು, ಆದರೆ ಸಂದೇಶ ತಲುಪಿತು – ‘ತುರ್ತು, ತುರ್ತು, ತುರ್ತು ‘. ಅವರು 1977 ರಲ್ಲಿ ಕ್ಷಮೆಯಾಚಿಸಿದರು ಆದರೆ ಜನರು ಅವರನ್ನು ಕ್ಷಮಿಸಲಿಲ್ಲ. ನಮ್ಮ ಪ್ರಧಾನಿ ರೈತರಲ್ಲಿ ಕ್ಷಮೆಯಾಚಿಸಿದ್ದಾರೆ. ಆದರೆ ಸಂದೇಶ ಈಗಾಗಲೇ ತಲುಪಿದೆ, ಆದ್ದರಿಂದ ಅವರನ್ನೂ ಜನರು ಕ್ಷಮಿಸುವುದಿಲ್ಲ ಎಂದು ಮಮತಾ ಹೇಳಿದ್ದಾರೆ.  “ಇಂದು ಅವರು ಚರ್ಚೆಯಿಲ್ಲದೆ ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ್ದಾರೆ. ಆದರೆ ಅವರು ಕೃಷಿ ಕಾನೂನುಗಳನ್ನು ರದ್ದು ಗೊಳಿಸಲು ಉತ್ತರ ಪ್ರದೇಶ ಚುನಾವಣೆಯೇ ಕಾರಣ. ಅದು ಎಲ್ಲರಿಗೂ ತಿಳಿದಿದೆ. ಅವರೂ ಭಯಪಡುತ್ತಾರೆ. ಅವರು (ಬಿಜೆಪಿ) ತುಂಬಾ ಸುರಕ್ಷಿತವಾಗಿದ್ದಾರೆ ಎಂದು ಭಾವಿಸಬೇಡಿ. ದೇಶವನ್ನು ಉಳಿಸಬೇಕು, ಚಿಂತಿಸಬೇಡಿ, ಎಲ್ಲವೂ ಸರಿಹೋಗಲಿದೆ ಎಂದು ಅವರು ಹೇಳಿದರು.

ಈ ವಾರ ಸಂಸತ್ ಹಿಂದೆಗೆದುಕೊಂಡ ಮೂರು ಕೃಷಿ ಕಾನೂನುಗಳನ್ನು ಪ್ರತಿಭಟಿಸಿ ಸುಮಾರು 15 ತಿಂಗಳುಗಳನ್ನು ಕಳೆದ ಹತ್ತಾರು ರೈತರಿಗೆ ಪ್ರಧಾನಿ ಮೋದಿ ಕಳೆದ ತಿಂಗಳು ಕ್ಷಮೆಯಾಚಿಸಿದ್ದರು. ಕೃಷಿ ಕಾನೂನುಗಳರದ್ದತಿಯನ್ನು ದೃಢೀಕರಿಸುವ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕಳೆದ ಅಂಕಿತ ಹಾಕಿದರು.

ಪ್ರಧಾನಿಯವರು “(ನನ್ನ) ದೇಶದ ಜನರಲ್ಲಿ ಶುದ್ಧ ಮತ್ತು ಪ್ರಾಮಾಣಿಕ ಹೃದಯದಿಂದ ಕ್ಷಮೆಯಾಚಿಸುತ್ತಿದ್ದೇನೆ” ಎಂದು ಹೇಳಿದ್ದರು. ಕಾನೂನನ್ನು ಒಪ್ಪಿಕೊಳ್ಳುವಂತೆ ರೈತರನ್ನು ಮನವೊಲಿಸುವ ತಮ್ಮ ಸರ್ಕಾರದ ಪ್ರಯತ್ನಗಳಲ್ಲಿ “ಕೆಲವು ಕೊರತೆಗಳಿತ್ತು ಎಂದು ಒಪ್ಪಿಕೊಂಡಿದ್ದರು.

ಯುಪಿಎ ವಿರುದ್ಧ ವಾಗ್ದಾಳಿ ನಡೆಸಿದ್ದ ಮಮತಾ
ಬಿಜೆಪಿಗಿಂತ ಮೊದಲು ಅಧಿಕಾರದಲ್ಲಿದ್ದ ಯುನೈಟೆಡ್ ಪ್ರೋಗ್ರೆಸ್ಸಿವ್ ಅಲೈಯನ್ಸ್ ನೇತೃತ್ವದ ಕಾಂಗ್ರೆಸ್ “ಚಾಲ್ತಿಯಲ್ಲಿರುವ ಫ್ಯಾಸಿಸಂ” ವಿರುದ್ಧ ಹೋರಾಡುತ್ತಿಲ್ಲ ಎಂಬ ಕಾರಣಕ್ಕಾಗಿ ಬಿಜೆಪಿ ಅಸ್ತವ್ಯಸ್ತವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು. “ಏನು ಯುಪಿಎ? ಈಗ ಯುಪಿಎ ? ಯುಪಿಎ ಎಂದರೇನು? ನಾವು ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತೇವೆ. ನಮಗೆ ಬಲವಾದ ಪರ್ಯಾಯ ಬೇಕು” ಎಂದು ಮುಂಬೈನಲ್ಲಿ ಎನ್‌ಸಿಪಿ ಶರದ್ ಪವಾರ್ ಅವರನ್ನು ಭೇಟಿ ಮಾಡಿದ ನಂತರ ಅವರು ಹೇಳಿದ್ದರು.

TV9 Kannada


Leave a Reply

Your email address will not be published. Required fields are marked *