ಜನರು ದೂರು ಸಲ್ಲಿಸಲು ವಾಟ್ಸಪ್ ನಂಬರ್ ಬಿಡುಗಡೆಗೊಳಿಸಿದ ಬೆವಿಕಂ | BESCOM released the WhatsApp number for Complaint


ಇಷ್ಟು ದಿನ ದೂರು ನೀಡಲು 1912 ಹೆಲ್ಪ್ ಲೈನ್ ಮಾತ್ರ ಇತ್ತು. ಈಗ ಈಗ ವಾಟ್ಸ್ ಅಪ್ ನಂಬರ್ ಸಹ ಬಿಡುಗಡೆ ಮಾಡಿದ್ದೇವೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. 

ಬೆಂಗಳೂರು: ಇಷ್ಟು ದಿನ ಬೆವಿಕಂಗೆ (BESCOM) ದೂರು ನೀಡಲು 1912 ಹೆಲ್ಪ್ ಲೈನ್ ಮಾತ್ರ ಇತ್ತು. ಈಗ ಈಗ ವಾಟ್ಸ್ ಅಪ್ ನಂಬರ್ ಸಹ ಬಿಡುಗಡೆ ಮಾಡಿದ್ದೇವೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ (Minister Sunil Kumar) ಹೇಳಿದ್ದಾರೆ.  ಬೆಸ್ಕಾಂ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ವಿದ್ಯುತ್ ಸಮಸ್ಯೆ ಬಗೆಹರಿಸಲು ವಾಟ್ಸಾಪ್​​​​​ ನಂಬರ್ ಬಿಡುಗಡೆ ಮಾಡಿದ್ದೇವೆ. ಇದೇ ಮೊದಲ ಬಾರಿಗೆ ವಾಟ್ಸ್ ಅಪ್ ಮೂಲಕ ದೂರು ನೀಡಲು ಅವಕಾಶ ನೀಡಿದ್ದೇವೆ. ಪ್ರತಿ ಜಿಲ್ಲೆಗೊಂದು ವಾಟ್ಸ್ ಅಪ್ ನಂಬರ್ ಬಿಡುಗಡೆ ಮಾಡುತ್ತೇವೆ. ಬೆಸ್ಕಾಂ ವ್ಯಾಪ್ತಿಗೆ ಒಳಪಡುವ 8 ಜಿಲ್ಲೆಗಳಿಗೆ ಪ್ರತ್ಯೇಕ ಸಹಾಯವಾಣಿ ಬಿಡುಗಡೆ ಮಾಡಲಾಗಿದೆ.  ಬೆಂಗಳೂರಿಗೆ ಒಟ್ಟು 4 ವಾಟ್ಸ್ ಅಪ್ ನಂಬರ್ ಬಿಡುಗಡೆ ಆಗಿದ್ದಾವೆ.

ಇದನ್ನು ಓದಿ: ವಿಧಾನ ಪರಿಷತ್ ಚುನಾವಣೆ: ನಾಮಪತ್ರ ಸಲ್ಲಿಕೆ ಬಳಿಕ ಕಣ್ಣೀರು ಹಾಕಿದ ಟಿ.ಎ. ಶರವಣ

 ದೂರು ಸಲ್ಲಿಸಲು ವಾಟ್ಸ್ ಪ್ ನಂಬರ್​ಗಳು
ಬೆಂಗಳೂರು ದಕ್ಷಿಣ 8277884011, ಬೆಂಗಳೂರು ಪಶ್ಚಿಮ 8277884012
ಬೆಂಗಳೂರು ಪೂರ್ವ 8277884013, ಬೆಂಗಳೂರು ಉತ್ತರ 8277884014
ಕೋಲಾರ ಜಿಲ್ಲೆ 8277884015, ಚಿಕ್ಕಬಳ್ಳಾಪುರ ಜಿಲ್ಲೆ 8277884016
ಬೆಂಗಳೂರು ಗ್ರಾಮಾಂತರ ಜಿಲ್ಲೆ 8277884017, ರಾಮನಗರ ಜಿಲ್ಲೆ 8277884018
ತುಮಕೂರು ಜಿಲ್ಲೆ 8277884019, ಚಿತ್ರದುರ್ಗ ಜಿಲ್ಲೆ 8277884020
ದಾವಣಗೆರೆ ಜಿಲ್ಲೆ 8277884021 ಸಹಾಯವಾಣಿ ನಂಬರ್  ಬೆಸ್ಕಾಂ ಬಿಡುಗಡೆ ಮಾಡಿದೆ.

ಇದನ್ನು ಓದಿ: ವಿಧಾನ ಪರಿಷತ್ ಚುನಾವಣೆ: ನಾಮಪತ್ರ ಸಲ್ಲಿಕೆ ಬಳಿಕ ಕಣ್ಣೀರು ಹಾಕಿದ ಟಿ.ಎ. ಶರವಣ

TV9 Kannada


Leave a Reply

Your email address will not be published. Required fields are marked *