ದೆಹಲಿ: ದೇಶದಲ್ಲಿ ಕೊರೊನಾ ಲಸಿಕೆ ಕೊರತೆಯ ನಡುವೆಯೇ ನಕಲಿ ವೆಬ್​​​ಸೈಟ್​​ಗಳ ಸಂಖ್ಯೆಯೂ ಹೆಚ್ಚಾಗಿದ್ದು, ಸರ್ಕಾರ ತಯಾರಿಸಿರುವಂತಹ ವೆಬ್​​ಸೈಟ್​​ನಂತೆಯೇ ನಕಲಿ ವೆಬ್​​ಸೈಟ್​​ ತೆಗೆದು ಜನರಿಂದ ಹಣ ದೋಚುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರ ನಡುವೆಯೇ ಕಾರ್ಯಾಚರಣೆ ನಡೆಸಿದ ದೆಹಲಿ ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದು, ಸುಮಾರು 40 ಲಕ್ಷ ರೂಪಾಯಿ ಹಣವನ್ನು ಆರೋಪಿಗಳಿಂದ ಜಪ್ತಿ ಮಾಡಿದ್ದಾರೆ.

ಬಂಧಿತರನ್ನು ಶೇಖರ್ ಪೆರಿಯಾರ್ ಮತ್ತು ಅಶೋಕ್ ಸಿಂಗ್ ಬಂಧಿತ ಆರೋಪಿಗಳಾಗಿದ್ದಾರೆ. ಸರ್ಕಾರದ ಕೋ-ವಿನ್​​ ವೆಬ್​​ಸೈಟ್​ನಂತೆಯೇ ಕಲರ್ ಕಾಂಬಿನೇಷನ್, ಫಾಂಟ್, ವೆಬ್ ಕಲರ್ ಸೇರಿದಂತೆ ಎಲ್ಲವು ನಕಲಿ ಮಾಡಲಾಗಿದೆ. ಈ ರೀತಿಯ ಸುಮಾರು 10ಕ್ಕೂ ಹೆಚ್ಚು ನಕಲಿ ವೆಬ್​​ಸೈಟ್​​ಗಳು ಕಾರ್ಯನಿರ್ವಹಿಸುತ್ತಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ಖದೀಮರಿಂದ ದೇಶಾದ್ಯಂತ ಜನರು ಮೋಸ ಹೊಗುತ್ತಿದ್ದಾರೆ.

ಬಂಧಿತ ಆರೋಪಿಗಳು ಖಾಸಗಿಯಾಗಿ ಲಸಿಕೆ ನೀಡೋದಾಗಿ ಹೇಳಿ ಒಬ್ಬರಿಂದ ಸುಮಾರು 4 ಸಾವಿರದಿಂದ 6 ಸಾವಿರ ರೂಪಾಯಿ ವರೆಗೂ ಆನ್​​​ಲೈನ್​​ ಮೂಲಕ ವಸೂಲಿ ಮಾಡಿದ್ದು, ನಕಲಿ ರೆಸಿಪ್ಟ್​​​ಗಳನ್ನು ನೀಡುತ್ತಿದ್ದರು. ಪಶ್ಚಿಮ ಬಂಗಾಳದಲ್ಲಿ ಕುಳಿತು ವೆಬ್ ಗಳನ್ನ ಆಪರೇಟ್ ಮಾಡುತ್ತಿದ್ದರು ಎನ್ನಲಾಗಿದೆ. ದೆಹಲಿ ಪೊಲೀಸರು ಇದುವರೆಗೂ ಇಂತಹ ಐದಕ್ಕೂ ಹೆಚ್ಚು ನಕಲಿ ವೆಬ್​​ಸೈಟ್​ಗಳನ್ನು ಬ್ಲಾಕ್​ ಮಾಡಿದ್ದಾರೆ. ಉಳಿದ ನಕಲಿ ವೆಬ್​​ಸೈಟ್​ಗಳನ್ನು ಬ್ಲಾಕ್​ ಮಾಡುವ ಕಾರ್ಯ ಹಾಗೂ ಇಂತಹ ಕಾರ್ಯದಲ್ಲಿ ತೊಡಗಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

The post ಜನರೇ ಎಚ್ಚರ.. ನಕಲಿ ಕೋ-ವಿನ್​​ ವೆಬ್​​ಸೈಟ್​​ ತೆರೆದು ಯಾಮಾರಿಸ್ತಿದ್ದಾರೆ ಹುಷಾರ್​ appeared first on News First Kannada.

Source: newsfirstlive.com

Source link