‘ಜನರ ಮೇಲೆ ಅನುಕಂಪ ಇದ್ದರೆ ರಾಹುಲ್​​ ಕಾಶ್ಮೀರಕ್ಕೆ ಹೋಗಲಿ’- ಕೇಂದ್ರ ಸಚಿವ ಹೀಗಂದಿದ್ಯಾಕೆ?

ನವದೆಹಲಿ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಲಖೀಂಪುರ್​ ಖೇರಿಗೆ ಭೇಟಿ ಕೊಟ್ಟ ವಿಷಯವಾಗಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಟೀಕಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಗಿರಿರಾಜ್​ ಸಿಂಗ್​, ರಾಹುಲ್​ ಈ ರೀತಿ ಪ್ರಕರಣಗಳಾದ್ರೆ ಜನರ ಹತ್ತಿರ ಹೋಗಿ ಅನುಕಂಪ ಗಿಟ್ಟಿಸಿಕೊಳ್ಳುವ ಕಲೆಯನ್ನ ಕರಗತ ಮಾಡಿಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಜನರ ಮೇಲೆ ನಿಜವಾಗಲೂ ಅನುಕಂಪ, ಸಹಾನೂಭೂತಿಯಿದ್ರೆ ಕಾಂಗ್ರೆಸ್​ ನಾಯಕ ಕಾಶ್ಮೀರಕ್ಕೆ ತೆರಳಲಿ. ಅಲ್ಲಿ ಉಗ್ರರು ಮುಗ್ಧ ಜನರನ್ನ ಗುರಿಯಾಗಿಸಿಕೊಂಡು ಕೊಲ್ಲುತ್ತಿದ್ದಾರೆ. ಆದ್ರೆ ರಾಹುಲ್​ ಅಲ್ಲಿಗೆ ಹೋಗಲ್ಲ. ಕಾಂಗ್ರೆಸ್​ನವರಿಗೆ ಇದೊಂತರ ರಾಜಕೀಯ ಪ್ರವಾಸವಿದ್ದಂತೆ ಆಗಿದೆ ಎಂದು ಕೇಂದ್ರ ಸಚಿವ ಗಿರಿರಾಜ್​ ವಾಗ್ದಾಳಿ ನಡೆಸಿದ್ರು.

ಇದನ್ನೂ ಓದಿ: ಅನ್​​ಲಾಕ್​​ ಬಳಿಕ ಅಲಭ್ಯ; ಟ್ವಿಟರ್​​ನಿಂದ ದೂರ ಉಳಿದ್ರಾ ರಾಹುಲ್​​ ಗಾಂಧಿ? ಯಾಕೆ ಮೌನ?

News First Live Kannada

Leave a comment

Your email address will not be published. Required fields are marked *