ಜನರ ಸಮ್ಮುಖದಲ್ಲೇ ಯುವಕನನ್ನು ಅಡ್ಡಾಡಿಸಿಕೊಂಡು ಹೋಗಿ ಬರ್ಬರವಾಗಿ ಕೊಲೆ: ಬೆಚ್ಚಿಬೀಳಿಸುವ ಸಿಸಿಟಿವಿ ವಿಡಿಯೋ ವೈರಲ್ | Two miscreants killed youth on road in front of public in kalaburagi


ಸೆಪ್ಟೆಂಬರ್ 17 ರಂದು ರಾತ್ರಿ ನಡು ರಸ್ತೆಯಲ್ಲೇ ನೂರಾರು ಜನರ ಸಮ್ಮುಖದಲ್ಲೇ ಯುವಕನ ಬರ್ಬರ ಕೊಲೆಯಾಗಿದೆ. ದುಷ್ಕರ್ಮಿಗಳು ಯುವಕನನ್ನು ಕೊಚ್ಚಿ ರಕ್ತದೋಕುಳಿ ಆಡುದ್ರು ಯಾರೂ ಅದನ್ನು ನಿಲ್ಲಿಸುವ ಕೆಲಸ ಮಾಡಿಲ್ಲ.

ಕಲಬುರಗಿ: ಜಿಲ್ಲೆಯ ಜನನಿಬಿಡ ಪ್ರದೇಶದಲ್ಲಿ ಯುವಕನ ಬರ್ಬರ ಕೊಲೆಯಾಗಿದೆ(Murder). ಸಿನಿಮಾ ರೀತಿಯಲ್ಲಿ ಇಬ್ಬರು‌ ದುಷ್ಕರ್ಮಿಗಳು ಯುವಕನನ್ನು ಅಡ್ಡಾಡಿಸಿಕೊಂಡು ಹೋಗಿ ಕೊಲೆ ಮಾಡಿದ್ದಾರೆ. ಯುವಕನ ಕೊಲೆ ವೇಳೆ ಸ್ಥಳದಲ್ಲೇ ನೂರಾರು ಜನರು ಇದ್ರು ಯಾರು ಯುವಕನ ರಕ್ಷಣೆಗೆ ಬಂದಿಲ್ಲಾ. ಕಲಬುರಗಿ ನಗರದ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿ ಸಮೀರ್(23) ಕೊಲೆಯಾದ ಯುವಕ. ಕಲಬುರಗಿ ನಗರದ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿ ನಗರದ ಹಳೆ ಜೇವರ್ಗಿ ರಸ್ತೆಯಲ್ಲಿ ನಡೆದ ಕೊಲೆ ಬೆಚ್ಚಿಬೀಳಿಸುವಂತಿದೆ. ಸೆಪ್ಟೆಂಬರ್ 17 ರಂದು ರಾತ್ರಿ ನಡು ರಸ್ತೆಯಲ್ಲೇ ನೂರಾರು ಜನರ ಸಮ್ಮುಖದಲ್ಲೇ ಯುವಕನ ಬರ್ಬರ ಕೊಲೆಯಾಗಿದೆ. ದುಷ್ಕರ್ಮಿಗಳು ಯುವಕನನ್ನು ಕೊಚ್ಚಿ ರಕ್ತದೋಕುಳಿ ಆಡುದ್ರು ಯಾರೂ ಅದನ್ನು ನಿಲ್ಲಿಸುವ ಕೆಲಸ ಮಾಡಿಲ್ಲ. ಕೊಲೆಯನ್ನು ನೋಡುತ್ತಾ ಸುಮ್ಮನೆ ನಿಂತಿದ್ದರು. ದುಷ್ಕರ್ಮಿಗಳ ಬಳಿಯಿದ್ದ ಮಾರಕಾಸ್ತ್ರಗಳನ್ನು ನೋಡಿ ಭಯದಿಂದ ದೂರ ನಿಂತಿದ್ರು. ಅನೇಕ ಬಾರಿ ಮಾರಕಾಸ್ತ್ರದಿಂದ ಇರಿದು ಯುವಕನ ಕೊಲೆ ಮಾಡಲಾಗಿದೆ. ಯುವಕನ ಬರ್ಬರ ಕೊಲೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಾರು, ಬೈಕ್​​ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸಾವು

ಮೈಸೂರು ಜಿಲ್ಲೆ ನಂಜನಗೂಡು ವಿದ್ಯಾಪೀಠದ ಬಳಿ ಕಾರು, ಬೈಕ್​​ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದಾರೆ. ರಸ್ತೆ ಅಪಘಾತದಲ್ಲಿ ಮಹೇಶ್, ಮಹದೇವ ಮೃತ ದುರ್ದೈವಿಗಳು. ಇವರು ಚಾಮರಾಜನಗರ ತಾಲೂಕಿನ ಹೆಗ್ಗೊಟರು ನಿವಾಸಿಗಳು. ಅಪಘಾತದ ಬಳಿಕ ಕಾರು ಚಾಲಕ ಪೊಲೀಸರಿಗೆ ಶರಣಾಗಿದ್ದಾರೆ.

ಮೈಸೂರಿನಲ್ಲಿ ಸರಣಿ ಕಳ್ಳತನ

ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಸರಣಿ ಕಳ್ಳತನ ನಡೆಯುತ್ತಿದೆ. ರೇಣುಕಾ, ಚಾಮುಂಡೇಶ್ವರಿ ಬಾರ್ & ರೆಸ್ಟೋರೆಂಟ್, ಟಿ.ಪಿ ಸ್ಟೋರ್, ಟೀ ಅಂಗಡಿ ಬೀಗ ಒಡೆದು ಕಳ್ಳತನ ಮಾಡಲಾಗಿದೆ. ಬೆಳ್ತೂರಿನಲ್ಲಿ ಐದು ಪಂಪ್​​ಸೆಟ್‌ನ ಕೇಬಲ್ ಕಳ್ಳತನವಾಗಿದೆ. ಹುಣಸೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ

TV9 Kannada


Leave a Reply

Your email address will not be published.