ಜನಾರ್ದನ ರೆಡ್ಡಿ ಮಗ ಕಿರೀಟಿ ಈಗ ‘ಜೂನಿಯರ್​’; ರಿವೀಲ್ ಆಯ್ತು ಮೊದಲ ಸಿನಿಮಾ ಟೈಟಲ್ | Janardhana Reddy Son Kireeti New Movie titled Junior


ಕಿರೀಟಿ ಅವರನ್ನು ಇಂಟ್ರಡ್ಯೂಸ್ ಮಾಡಲು ಟೀಸರ್ ಒಂದನ್ನು ರಿಲೀಸ್ ಮಾಡಲಾಗಿತ್ತು. ಈ ಟೀಸರ್​ನಲ್ಲಿ ಸ್ಟಂಟ್​ಗಳನ್ನು ಮಾಡಿ ಅವರು ಗಮನ ಸೆಳೆದಿದ್ದರು. ಈಗ ಸಿನಿಮಾ ಟೈಟಲ್ ರಿವೀಲ್ ಆಗಿದೆ.

ರಾಜಕೀಯಕ್ಕೆ ಬಂದ ಅನೇಕರು ನಂತರ ಚಿತ್ರರಂಗಕ್ಕೆ ಕಾಲಿಟ್ಟ ಉದಾಹರಣೆ ಇದೆ. ಅದೇ ರೀತಿ ಹಲವು ರಾಜಕಾರಣಿ ಮಕ್ಕಳು ಬಣ್ಣದ ಬದುಕು ಆರಂಭಿಸಿದ್ದಾರೆ. ಮಾಜಿ ಸಚಿವ ಜನಾರ್ದನ ರೆಡ್ಡಿ (Janardhana Reddy) ಮಗ ಕಿರೀಟಿ (Kireeti Reddy ) ಈಗ ಬಣ್ಣದ ಲೋಕಕ್ಕೆ ಎಂಟ್ರಿ ಕೊಡೋಕೆ ರೆಡಿ ಆಗಿದ್ದಾರೆ. ಈಗಾಗಲೇ ಅವರ ಚೊಚ್ಚಲ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಆದರೆ, ಈ ಚಿತ್ರದ ಟೈಟಲ್ ರಿವೀಲ್ ಆಗಿರಲಿಲ್ಲ. ಅವರ ಬರ್ತ್​​ಡೇ ಪ್ರಯುಕ್ತ ಇಂದು (ಸೆಪ್ಟೆಂಬರ್ 29) ಟೈಟಲ್ ಅನಾವರಣಗೊಂಡಿದೆ. ಈ ಚಿತ್ರಕ್ಕೆ ‘ಜೂನಿಯರ್’ ಎಂದು ಶೀರ್ಷಿಕೆ ಇಡಲಾಗಿದೆ.

ಕಿರೀಟಿ ಅವರನ್ನು ಇಂಟ್ರಡ್ಯೂಸ್ ಮಾಡಲು ಟೀಸರ್ ಒಂದನ್ನು ರಿಲೀಸ್ ಮಾಡಲಾಗಿತ್ತು. ಈ ಟೀಸರ್​ನಲ್ಲಿ ಸ್ಟಂಟ್​ಗಳನ್ನು ಮಾಡಿ ಅವರು ಗಮನ ಸೆಳೆದಿದ್ದರು. ಏಕಕಾಲದಲ್ಲಿ ‘ಜೂನಿಯರ್’ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಈ ಕಾರಣದಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅವರು ಗುರುತಿಸಿಕೊಳ್ಳುತ್ತಿದ್ದಾರೆ. ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ಈ ಚಿತ್ರ ಅದ್ದೂರಿಯಾಗಿ ಮೂಡಿ ಬರುತ್ತಿದೆ. ಈವರೆಗೆ ಟೈಟಲ್ ರಿವೀಲ್ ಮಾಡದೇ ಚಿತ್ರೀಕರಣದಲ್ಲಿ ತೊಡಗಿದ್ದ ತಂಡ ಈಗ ಟೈಟಲ್ ರಿವೀಲ್ ಮಾಡಿದೆ. ಆ ಮೂಲಕ ಇಷ್ಟು ದಿನದ ಕುತೂಹಲಕ್ಕೆ ಚಿತ್ರತಂಡ ತೆರೆ ಎಳೆದಿದೆ.

ಇಂದು ಕಿರೀಟಿ ಹುಟ್ಟುಹಬ್ಬ. ಆ ಪ್ರಯುಕ್ತ ಟೈಟಲ್ ರಿವೀಲ್ ಮಾಡುವ ಮೂಲಕ ಅವರಿಗೆ ದೊಡ್ಡ ಗಿಫ್ಟ್ ನೀಡಿದೆ. ಸಂಜೆ 6.39ಕ್ಕೆ ಟೈಟಲ್ ವೀಡಿಯೋ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾಗೆ ‘ಜೂನಿಯರ್’ ಎಂದು ಚಿತ್ರತಂಡ ಟೈಟಲ್ ಫಿಕ್ಸ್ ಮಾಡಿದೆ. ಎಲ್ಲಾ ಭಾಷೆಗಳಿಗೂ ಹೊಂದುವಂತಹ ಟೈಟಲ್​ಅನ್ನೇ ಚಿತ್ರತಂಡ ಆಯ್ಕೆ ಮಾಡಿಕೊಂಡಿರುವುದು ವಿಶೇಷ.

‘ಮಾಯಾಬಜಾರ್’ ಸಿನಿಮಾ ನಿರ್ದೇಶನ ಮಾಡಿ ರಾಧಾಕೃಷ್ಣ ರೆಡ್ಡಿ ಗಮನ ಸೆಳೆದಿದ್ದಾರೆ. ಅವರೇ ಈಗ ಕಿರೀಟಿ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ‘ವಾರಾಹಿ ಫಿಲ್ಮ್​ ಪ್ರೊಡಕ್ಷನ್’ ಕಿರೀಟಿ ಮೊದಲ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ದೊಡ್ಡ ಬಜೆಟ್​ನಲ್ಲಿ ಸಿನಿಮಾ ಸಿದ್ಧಗೊಳ್ಳುತ್ತಿದೆ.  ಬಹುದೊಡ್ಡ ತಾರಾಗಣವೂ ಚಿತ್ರದ ಹೈಲೈಟ್​. ಕ್ರೇಜಿ ಸ್ಟಾರ್ ರವಿಚಂದ್ರನ್, ನಟಿ ಜೆನಿಲಿಯಾ, ಶ್ರೀಲೀಲಾ ಸೇರಿದಂತೆ ಇನ್ನೂ ಹಲವು ತಾರೆಯರು ಈ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

ಇದನ್ನು ಓದಿ: ಜನಾರ್ದನ ರೆಡ್ಡಿ ಮಗ ಕಿರೀಟಿ ಬರ್ತ್​​ಡೇ ದಿನವೇ ಅನಾವರಣ ಆಗಲಿದೆ ಚೊಚ್ಚಲ ಸಿನಿಮಾದ ಟೈಟಲ್

TV9 Kannada


Leave a Reply

Your email address will not be published.