ಜನ್ಮದಿನದಂದೇ ಪ್ರಪೋಸ್​​ ಮಾಡಿ ಎಂಗೇಜ್ಮೆಂಟ್​​ ಮಾಡಿಕೊಂಡ ಅಕ್ಷರ್ ಪಟೇಲ್.. ಹುಡುಗಿ ಯಾರು?


ಭಾರತ ಕ್ರಿಕೆಟ್ ತಂಡದ ಆಲ್​ರೌಂಡರ್​ ಅಕ್ಷರ್ ಪಟೇಲ್ ತಮ್ಮ 28ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ತಮ್ಮ ಜನ್ಮದಿನದಂದೇ ಗೆಳತಿ ಮೇಹಾ ಅವರಿಗೆ ಪ್ರಪೋಸ್ ಮಾಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಬಗ್ಗೆ ಸ್ವತಃ ಅಕ್ಷರ್ ಪಟೇಲ್​ ಅವರೇ ಖಚಿತಪಡಿಸಿದ್ದು, ತಮ್ಮ ಇನ್ ಸ್ಟಾಗ್ರಾಂನಲ್ಲಿ ಎಂಗೇಜ್ಮೆಂಟ್ ಫೋಟೋಗಳನ್ನು ಶೇರ್​​ ಮಾಡಿದ್ದಾರೆ.

ಇಂದಿನಿಂದ ನಮ್ಮ ಜೀವನದ ಹೊಸ ಅಧ್ಯಾಯ ಆರಂಭವಾಗಲಿದೆ ಎಂದು ತಮ್ಮ ಗೆಳತಿಗೆ ತಾವು ಮಂಡಿಯೂರಿ ಪ್ರಪೋಸ್ ಮಾಡಿದ ಪೋಟೋ ಹಂಚಿಕೊಂಡಿದ್ದಾರೆ ಆಲ್​ರೌಂಡರ್​. ಇಂದಿಗೂ-ಎಂದೆಂದಿಗೂ ನೀನೆ ನನ್ನ ಸಂಗಾತಿ ಎಂದು ಬರೆದುಕೊಂಡಿದ್ದಾರೆ.

ಸದ್ಯ ಇಂಜುರಿ ಕಾರಣ ಸೌತ್​ ಆಫ್ರಿಕಾದ ಪ್ರವಾಸದಿಂದ ದೂರ ಇರೋ ಅಕ್ಷರ್ ಪಟೇಲ್​​, ಮುಂದಿನ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲೂ ಆಡೋದು ಡೌಟ್. ಎಡಗೈ ಸ್ಪಿನ್ನರ್ ಅಕ್ಷರ್ ಈ ಹಿಂದೆ ನಡೆದ ಇಂಗ್ಲೆಂಡ್ ವಿರುದ್ಧ ಆಡಿದ ಚೊಚ್ಚಲ ಸರಣಿಯಲ್ಲಿ 3 ಟೆಸ್ಟ್​ಗಳಲ್ಲಿ 27 ವಿಕೆಟ್​ಗಳನ್ನ ಪಡೆದ ಸಾಧನೆ ಮಾಡಿದ್ದಾರೆ.

News First Live Kannada


Leave a Reply

Your email address will not be published. Required fields are marked *