ಬೆಂಗಳೂರು: ಕೊರೊನಾದ ಮೂರನೇ ಅಲೆ ಶೀಘ್ರದಲ್ಲೇ ಉಲ್ಬಣಗೊಳ್ಳಲಿದೆ ಅಂತಾ ತಜ್ಞರು ಎಚ್ಚರಿಕೆಯನ್ನ ನೀಡಿದ್ದಾರೆ. ತಜ್ಞರ ಎಚ್ಚರಿಕೆ ಕೇವಲ ಸರ್ಕಾರಕ್ಕೆ, ರಾಜಕೀಯ ನಾಯಕರಿಗೆ, ಸಂಘ ಸಂಸ್ಥೆಗಳಿಗೆ ಮಾತ್ರವಲ್ಲ. ಸಾರ್ವಜನಿಕರು ಕೂಡ ಜಾಗೃತರಾಗಬೇಕಿದೆ. ಜನರು ಜಾಗೃತರಾದ್ರೆ ಸರ್ಕಾರಗಳ ಕೆಲಸ ತುಂಬಾ ಸುಲಭವಾಗಲಿದೆ. ಹಾಗಾದ್ರೆ ಕೊರೊನಾ ಎದುರಿಸುವಲ್ಲಿ ಜನರ ಪಾತ್ರವೇನು..? ತಾವು ಇರುವ ಜಾಗದಲ್ಲಿ, ಊರಿನಲ್ಲಿ ಯಾವೆಲ್ಲಾ ರೀತಿಯ ಜಾಗೃತಿಯನ್ನು ವಹಿಸಬೇಕು..?

ಕೊರೊನಾ ಎದುರಿಸಲು ಜನರ ಪಾತ್ರವೇನು..?

 • ಅನಾವಶ್ಯಕವಾಗಿ ಮನೆಯಿಂದ ಹೊರಹೋಗದೇ ಇರುವುದು
 • ಉತ್ತಮ ಮಾಸ್ಕ್ ಧರಿಸುವ ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ
 • ಆಗಾಗ ಕೈ ತೊಳೆಯುವ ಜೊತೆಗೆ ಸ್ವಚ್ಛತೆ ಕಾಪಾಡಿಕೊಳ್ಳೋದನ್ನು ಮರೆಯಬೇಡಿ
 • ಯಾವುದೇ ರೀತಿ ಹಿಂಜರಿಕೆ ಪಡದೇ ಕಡ್ಡಾಯವಾಗಿ ವ್ಯಾಕ್ಸಿನ್ ಪಡೆದುಕೊಳ್ಳಿ
 • ಸೋಂಕಿನ ಯಾವುದೇ ಲಕ್ಷಣ ಕಂಡುಬಂದರೂ ತಕ್ಷಣ ಟೆಸ್ಟ್ ಮಾಡಿಸಿಕೊಳ್ಳಿ
 • ಜೀವದ ಜೊತೆ ಜೀವನವೂ ಮುಖ್ಯ ಅಂತಾ ಲಾಕ್​ಡೌನ್​ ಸಡಿಲಿಸಲಾಗಿದೆ
 • ಅನ್​ಲಾಕ್​ ಆಯಿತೆಂದು ತಕ್ಷಣವೇ ಬೀದಿಗಿಳಿಯೋದು ಸರಿಯಲ್ಲ
 • ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ಬದಲು ಮನೆಯಲ್ಲಿಯೇ ಪ್ರಾರ್ಥಿಸೋದು
 • ಸಾಧ್ಯವಾದರೆ ನಿಮ್ಮ ಕೆಲಸವನ್ನು ವಾರದ 3-4 ದಿನಕ್ಕೆ ಸೀಮಿತಗೊಳಿಸೋದು
 • ಐಟಿಬಿಟಿ ಉದ್ಯೋಗಿಗಳಾಗಿದ್ರೆ ವರ್ಕ್​ ಫ್ರಮ್​ ಹೋಮ್​ಗೆ ಆದ್ಯತೆ
 • ಮುಂದಿನ ಆರೆಂಟು ವಾರಗಳಲ್ಲಿ 3ನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ
 • ತಜ್ಞರ ಎಚ್ಚರಿಕೆ ಕಾರಣ 6 ತಿಂಗಳು ಸಭೆ ಸಮಾರಂಭಗಳಿಂದ ದೂರವಿರಿ
 • ​ಅನ್​ಲಾಕ್​ ಆದ ತಕ್ಷಣವೇ ತೀರ್ಥಯಾತ್ರೆ, ಪ್ರವಾಸ, ಧಾರ್ಮಿಕ ಕೈಂಕರ್ಯ ಬೇಡ
 • ಹೊರಗಡೆ ಓಡಾಡುವ ಮೂಲಕ ಸೋಂಕು ಹರಡುವ ಸಾಧನವಾಗಬಾರದು
 • ಮನೆಯಲ್ಲಿಯೇ ಇದ್ದು ಮನೆಯವರ ರಕ್ಷಣೆಗೆ ಆದ್ಯತೆ ನೀಡೋದು ಒಳಿತು
 • ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಬಗ್ಗೆ ಹೆಚ್ಚಿನ ಗಮನ ನೀಡಬಹುದು
 • ನಕರಾತ್ಮಕ ವಿಚಾರಗಳ ಬದಲು ಅಕ್ಕಪಕ್ಕದರನ್ನು ಸೋಂಕಿನ ಬಗ್ಗೆ ಎಚ್ಚರಿಸಬಹುದು
 • ನಾನು ಯಾವುದೇ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ
 • ನಾವು ಯಾವುದೇ ರಾಜಕೀಯ ಸಮಾವೇಶಕ್ಕೆ ಹೋಗುವುದಿಲ್ಲ
 • ನಾನು ಯಾವುದೇ ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದಿಲ್ಲ
 • ಮಂದಿರ, ಮಸೀದಿ, ಚರ್ಚ್ ಹೀಗೆ ಎಲ್ಲಿಗೂ ಹೋಗುವುದಿಲ್ಲ
 • ಬದಲಿಗೆ ಮನೆಯಲ್ಲೇ ನನ್ನ ಇಷ್ಟ ದೇವರ ಆರಾಧನೆ ಮಾಡುತ್ತೇನೆ
 • ಲಾಕ್ಡೌನ್ ಸಡಿವಾದ್ರೂ ನಾನ ವಿನಾಕಾರಣ ಮನೆಯಾಚೆ ಹೋಗುವುದಿಲ್ಲ
 • ಏನೇ ಲಕ್ಷಣ ಕಂಡು ಬಂದರೂ ತಕ್ಷಣ ಟೆಸ್ಟ್ ಮಾಡಿಸಿಕೊಳ್ಳುತ್ತೇನೆ
 • ನಾನೂ ಕೇರ್ ತಗೊಳ್ಳುವೆ.. ನನ್ನ ಸುತ್ತಲಿನವರನ್ನು ಸೋಂಕಿನಿಂದ ರಕ್ಷಿಸುವೆ
 • ಹೀಗೆ ಸೆಲ್ಫ್ ರಿಸ್ಟ್ರಿಕ್ಷನ್ ಹಾಕಿಕೊಳ್ಳುವ ಮೂಲಕ ಸೋಂಕು ನಿಯಂತ್ರಣ ಸಾಧ್ಯ

The post ಜನ ಎಚ್ಚೆತ್ತರೆ ಕೊರೊನಾ 3ನೇ ಅಲೆ ಓಡುತ್ತೆ.. ಸಾರ್ವಜನಿಕರು ಮಾಡ್ಲೇಬೇಕಾದ ಸಂಕಲ್ಪಗಳೇನು? appeared first on News First Kannada.

Source: newsfirstlive.com

Source link