ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಲಾಕ್ ಡೌನ್ ಹಾಗೂ ನೈಟ್ ಕರ್ಫ್ಯೂ ಘೋಷಿಸುತ್ತಿದ್ದಂತೆ ಮಾಲ್ಡಿವ್ಸ್ ಗೆ ಹಾರಿರುವ ಕೆಲವು ತಾರೆಯರ ವಿರುದ್ಧ ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಕಿ ಆಕ್ರೋಶ ಹೊರಹಾಕಿದ್ದರು.

ಇಲ್ಲಿ ಜನ ಊಟ ಇಲ್ಲದೇ ಸಾಯುತ್ತಿದ್ದಾರೆ, ನೀವು ಹಣವನ್ನು ಪ್ರವಾಸದಲ್ಲಿ ಉಡಾಯಿಸುತ್ತಿದ್ದೀರ. ಸ್ವಲ್ಪವಾದ್ರೂ ನಾಚಿಕೆ ಬೇಡವೇ ಎಂದು ಖಾರವಾಗಿ ಪ್ರಶ್ನಿಸಿರುವ ಸಿದ್ಧಕಿ, ನಿಮ್ಮನ್ನು ಸ್ಟಾರ್​​ಗಳೆಂದು ಆರಾಧಿಸುವ ಜನರೇ ಇಂದು ಸಂಕಷ್ಟದಲ್ಲಿದ್ದಾರೆ. ಸಾಧ್ಯವಾದರೆ ಅವರ ಕಷ್ಟಗಳಿಗೆ ಸ್ಪಂದಿಸಿ, ಇಲ್ಲವೇ ಸುಮ್ಮನಿರಿ. ಇಂಥ ಸಮಯದಲ್ಲಿ ಪ್ರವಾಸದ ಸುಂದರ ಫೋಟೋಗಳನ್ನು ಹಾಕಿ ಮಾನ ಕಳೆದುಕೊಳ್ಳಬೇಡಿ ಎಂದು ಗುಡುಗಿದ್ದಾರೆ.  

ಇನ್ನು ಇತ್ತೀಚೆಗಷ್ಟೇ ಬಾಲಿವುಡ್​ನ ಲವ್​ಬರ್ಡ್ಸ್​​ ರಣವೀರ್​ ಕಪೂರ್​- ಆಲಿಯಾ ಭಟ್​​ ಕೊರೋನಾದಿಂದ ಗುಣಮುಖರಾಗುತ್ತಲೇ ಮಾಲ್ಡೀವ್ಸ್​ಗೆ ಹಾರಿದ್ದರು. ನಟಿಮಣಿಯರಾದ ಜಾಹ್ನವಿ ಕಪೂರ್​, ಶ್ರದ್ಧಾ ಕಪೂರ್​, ದಿಶಾ ಪಟಾಣಿ ಕೂಡ ಬೀಚ್​ನಲ್ಲಿ ಬಿಕಿನಿ ತೊಟ್ಟು ಮಿಂಚುತ್ತಿರುವ ಫೋಟೋಗಳನ್ನು ಅಪಲೋಡ್​ ಮಾಡಿದ್ದರು.

ಇನ್ನು ಮುಂಬೈನಲ್ಲಿ ಕೋವಿಡ್ ಸೋಂಕು ಕೈ ಮೀರಿ ವ್ಯಾಪಿಸುತ್ತಿದೆ. ಒಂದು ಕಡೆ ಚೀನಿ ವೈರಸ್ ಅಬ್ಬರ ಹೆಚ್ಚಾಗಿದ್ದರೆ, ಮತ್ತೊಂದೆಡೆ ಆಸ್ಪತ್ರೆಗಲ್ಲಿ ಬೆಡ್ ಹಾಗೂ ಆಕ್ಸಿಜನ್‍ಗಳ ಅಭಾವ ಎದುರಾಗಿದೆ. ಕೋವಿಡ್ ಸರಪಳಿ ತುಂಡರಿಸಲು ಮಹಾ ಸರ್ಕಾರ ಹರಸಾಹಸ ಪಡುತ್ತಿದೆ.

ಸಿನೆಮಾ – Udayavani – ಉದಯವಾಣಿ
Read More