ಬೆಂಗಳೂರು: ಬಿಬಿಎಂಪಿ ದಕ್ಷಿಣ ವಲಯದ ಕೋವಿಡ್ ವಾರ್ ರೂಮ್​ನಲ್ಲಿ ಭಾರೀ ಅವ್ಯವಹಾರ ನಡೆದಿದೆ ಎನ್ನಲಾಗಿದ್ದು ಇದನ್ನ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಶಾಸಕ ಸತೀಶ್​ರೆಡ್ಡಿ ಬಯಲಿಗಳೆದಿದ್ದಾರೆ.

ಬಿಬಿಎಂಪಿ ಅಧಿಕಾರಿಗಳು ತಮಗೆ ಬೇಕಾದವರಿಗೆ, ಆಪ್ತರಿಗೆ ಹಾಗೂ ಪ್ರಭಾವಿಗಳಿಗಾಗಿ ಯಾರ್ಯಾರದ್ದೋ ಹೆಸರಿನಲ್ಲಿ 4,000 ಕ್ಕೂ ಹೆಚ್ಚು ಬೆಡ್​​ಗಳನ್ನು ಬುಕ್​ ಮಾಡಿದ್ದಾರೆ ಎನ್ನಲಾಗಿದೆ. ನಿತ್ಯ ಹತ್ತಾರು ಸಾವಿರ ಸೋಂಕಿತರು ಒಂದೆಡೆ ಬೆಡ್​​ಗಳಿಲ್ಲದೇ ಬಡಿದಾಡುತ್ತಿದ್ದರೆ ಇತ್ತ ಬಿಬಿಎಂಪಿ ಅಧಿಕಾರಿಗಳು.. ತಮಗೆ ಬೇಕಾದವರಿಗೆ ಲಕ್ಷ ಲಕ್ಷ ದುಡ್ಡು ಕೊಟ್ಟವರಿಗೆ ಐಸಿಯು, ವೆಂಟಿಲೇಟರ್, ಆಕ್ಸಿಜನ್ ಬೆಡ್​ಗಳನ್ನ ಬ್ಲಾಕ್ ಮಾಡಿಕೊಳ್ತಿದ್ದಾರೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

ಇನ್ನು ವಾರ್​ರೂಂನಿಂದ ಹೊರಗಿರುವ ದಲ್ಲಾಳಿಗಳು, ಕಿಂಗ್​ಪಿನ್​ಗಳ ನಿರ್ದೇಶನದಂತೆ ವಾರ್ ರೂಂ ಸಿಬ್ಬಂದಿ ಬೆಡ್​ಗಳನ್ನ ಬುಕ್​ ಮಾಡಿ ಕೊಡ್ತಿದ್ದಾರೆ ಎನ್ನಲಾಗಿದೆ, ಇದು ಗಮನಕ್ಕೆ ಬರ್ತಿದ್ದಂತೆ ಕಿಂಗ್ ಪಿನ್ ಬಗ್ಗೆ ಪೊಲೀಸರಿಗೆ ಶಾಸಕ ಸತೀಶ್ ರೆಡ್ಡಿ & ಸಂಸದ ತೇಜಸ್ವಿ ಸೂರ್ಯಮಾಹಿತಿ ನೀಡಿದ್ದಾರೆ.

The post ಜನ ಸಾಯ್ತಿದ್ರೂ ಬೆಡ್​ಗಳ ಬ್ಲಾಕಿಂಗ್; ಬ್ರಹ್ಮಾಂಡ ದಂಧೆ ಬಯಲಿಗೆಳೆದ ತೇಜಸ್ವಿ ಸೂರ್ಯ, ಸತೀಶ್ ರೆಡ್ಡಿ ಟೀಂ appeared first on News First Kannada.

Source: newsfirstlive.com

Source link