ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದಂತೆ ಆಸ್ಪತ್ರೆಗಳು ರೋಗಿಗಳ ಆರೈಕೆಯಲ್ಲಿ ಬ್ಯುಸಿಯಾಗಿವೆ. ಡಾಕ್ಟರ್ಸ್​​, ನರ್ಸ್​​ ಹಾಗೇ ಆಸ್ಪತ್ರೆ ಸಿಬ್ಬಂದಿಗಳು ದಿನವಿಡೀ ಆಸ್ಪತ್ರೆಯಲ್ಲೇ ಇದ್ದು ಕಾರ್ಯ ಪ್ರವೃತ್ತರಾಗಿದ್ದಾರೆ. ಇದೀಗ ಕೊರೊನಾ ಸಂಕಷ್ಟದ ಸಮಯದಲ್ಲಿ ಹಗಲಿರುಳು ಸೋಂಕಿತರ ಸೇವೆ ಮಾಡುತ್ತಿರುವ ಐದು ಸರ್ಕಾರಿ ಆಸ್ಪತ್ರೆಯ ಡಾಕ್ಟರ್ಸ್, ನರ್ಸ್ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳಿಗೆ ನಟ ರೋರಿಂಗ್​ ಸ್ಟಾರ್​ ಶ್ರೀಮುರಳಿ ಊಟದ ವ್ಯವಸ್ಥೆಯನ್ನ ಒದಗಿಸುತ್ತಿದ್ದಾರೆ.

ನಗರದ ಕೆ.ಸಿ ಜನರಲ್​ ಆಸ್ಪತ್ರೆ, ESI ರಾಜಾಜಿನಗರ, ಬೌರಿಂಗ್​ ಆಸ್ಪತ್ರೆ, ಜಯನಗರ ಜನರಲ್​ ಆಸ್ಪತ್ರೆ ಹಾಗೂ ಸಿವಿ ರಾಮನ್​ ಜನರಲ್​ ಆಸ್ಪತ್ರೆಯ ಡಾಕ್ಟರ್ಸ್​, ನರ್ಸ್​ ಹಾಗೂ ಸಿಬ್ಬಂದಿಗಳಿಗೆ ನಟ ಶ್ರೀ ಮುರಳಿ ಊಟದ ವ್ಯವಸ್ಥೆ ಮಾಡಿದ್ದಾರೆ. ಊಟ್ ಜೊತೆಗೆ ನೀರಿನ ವ್ಯವಸ್ಥೆಯನ್ನೂ ಮಾಡಿದ್ದಾರೆ ಶ್ರೀ ಮುರಳಿ.

The post ಜನ ಸೇವೆಯಲ್ಲಿ ನಿರತ ವೈದ್ಯಕೀಯ ಸಿಬ್ಬಂದಿಗೆ ಶ್ರೀ ಮುರುಳಿ ಊಟದ ವ್ಯವಸ್ಥೆ appeared first on News First Kannada.

Source: newsfirstlive.com

Source link