ಹಾವೇರಿ: ಆಕ್ಸಿಜನ್ ಪೂರೈಕೆ ಕುರಿತು ನಿತ್ಯ ನಾನು ಸಂಸ್ಥೆಗಳೊಂದಿಗೆ ಮಾತನಾಡುತ್ತಿದ್ದೇನೆ. ಬೇಕಾಗಿರುವಷ್ಟು ಆಕ್ಸಿಜನ್ ಪೂರೈಸಲು ಸರ್ವ ಪ್ರಯತ್ನವನ್ನು ಮಾಡುತ್ತಿದ್ದೇವೆ. ಜಿಂದಾಲ್, ಹರಿಹರ, ಹುಬ್ಬಳ್ಳಿಗೂ ಮಾತನಾಡುತ್ತಿದ್ದೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದರು.

ಹಾವೇರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಬೊಮ್ಮಾಯಿ ಅವರು, ಪೊಲೀಸರು ಎಲ್ಲಾ ಸ್ಥಿತಿ ಎದುರಿಸಲು ತರಬೇತಿ ಪಡೆದುಕೊಂಡಿರುತ್ತಾರೆ. ಈಗ ಲಾಕಡೌನ್​ನಲ್ಲಿ ಜನರು ಸ್ವಯಂ ಪ್ರೇರಿತವಾಗಿ ಮಾಡಿದ್ರೆ ಮಾತ್ರ ಯಶಸ್ವಿಯಾಗುತ್ತದೆ. ಹೊರಗೆ ಬಂದರೆ ನನಗೆ ತೊಂದರೆ ಆಗುತ್ತದೆ ಎನ್ನುವ ಅರಿವು ಅವರಿಗೆ ಇರಬೇಕು. ನಾಲ್ಕು ದಿನ ಒಳಗೆ ಇದ್ರೆ ಒಳ್ಳೆಯದೊ ಅಥವಾ ಕೋವೀಡ್‍ಗೆ ಆಹ್ವಾನ ನೀಡುವುದು ಒಳ್ಳೆಯದೊ ಅದನ್ನು ಯೋಚಿಸಬೇಕು. ಅದರಿಂದ ಬೇರೆಯವರಿಗೂ ತೊಂದರೆ ಆಗುತ್ತಿದೆ. ಹೀಗಾಗಿ ಪೊಲೀಸರು ಸಾಧ್ಯವಾದಷ್ಟು ಬಲಪ್ರಯೋಗ ಮಾಡದೆ ನಿಯಂತ್ರಣ ಮಾಡಬೇಕು. ನಮ್ಮ ಆದೇಶ ಇದೆ ಹೀಗಾಗಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಜನ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಲಾಕ್‍ಡೌನ್ ಎಪೆಕ್ಟ್ ತಿಳಿಯಬೇಕಾದರೆ 14 ದಿನಗಳು ಬೇಕಾಗುತ್ತೆ. ಎರಡು ವಾರಗಳ ನಂತರ ಕೊರೊನಾ ಕಂಟ್ರೊಲ್ ಆಗುತ್ತದೆ. ಆ ವಿಶ್ವಾಸ ನಮಗಿದೆ ಹಾಗೂ ಪರಿಣತರು ಕೂಡಾ ಇದನ್ನೇ ಹೇಳಿದ್ದಾರೆ. ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡುವ ಕುರಿತು ಪ್ರತಿಕ್ರಿಯೆ ನೀಡಿ, ಈಗಾಗಲೇ ಎಲ್ಲರಿಗೂ ಆಹಾರಧಾನ್ಯ ಕೊಡುವುದಕ್ಕೆ ವ್ಯವಸ್ಥೆ ಮಾಡಿದ್ದೇವೆ. ಕಾರ್ಡ್ ಇದ್ದರು ಇಲ್ಲದಿದ್ದರೂ ಆಹಾರ ಕೊಡುತ್ತಿದ್ದೇವೆ. ಉಳಿದಂತೆ ಮತ್ಯಾವ ಪ್ಯಾಕೇಜ್ ಇಲ್ಲ ಎಂದರು.

The post ಜನ ಸ್ವಯಂ ಪ್ರೇರಿತವಾಗಿ ಲಾಕ್‍ಡೌನ್ ಮಾಡಿದ್ರೆ ಮಾತ್ರ ಯಶಸ್ವಿಯಾಗುತ್ತದೆ- ಬೊಮ್ಮಾಯಿ appeared first on News First Kannada.

Source: newsfirstlive.com

Source link