ಕೊಪ್ಪಳ: ಸಿದ್ದರಾಮಯ್ಯನವರೇ ಪುನಃ ಸಿಎಂ ಆಗಬೇಕೆಂದು ಹೇಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಎನ್ನಲಾದ ಶಾಸಕ ಜಮೀರ್ ಅಹ್ಮದ್ ಇಂದು ಕೊಪ್ಪಳದಲ್ಲಿ ಜನರ ಅಭಿಪ್ರಾಯವನ್ನ ನಾನು ಹೇಳಿದ್ದೇನೆ ಎಂದಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಪುನರುಚ್ಚರಿಸಿದ್ದಾರೆ.

ನನ್ನ ಮಾತಿಗೆ ನಾನು ಈಗಲೂ ಬದ್ಧವಾಗಿದ್ದೇನೆ.. ನನ್ನ ವೈಯಕ್ತಿಕ ಅಭಿಪ್ರಾಯ ಹೇಳುವುದಕ್ಕೆ ನಾನು ಸ್ವತಂತ್ರ. ನಾನು ರಾಜ್ಯಾದ್ಯಂತ ಸಾಕಷ್ಟು ಪ್ರವಾಸ ಮಾಡಿದ್ದೇನೆ. ನಾನು ಪ್ರವಾಸ ಮಾಡಿದಲ್ಲೆಲ್ಲ ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಜನ ಹೇಳಿದ್ದಾರೆ. ಜನರ ಅಭಿಪ್ರಾಯವನ್ನೇ ನಾನು ಹೇಳಿದ್ದೇನೆ. ಕಳೆದ ಸರ್ಕಾರದಲ್ಲಿ ಸಿದ್ದರಾಮಯ್ಯ ಮಾಡಿದ ಕೆಲಸ‌ ಜನ ಮರೆತಿಲ್ಲ. ಬಡವರಿಗೆ ಒಳ್ಳೆಯದು ಆಗಬೇಕಂದ್ರೆ ಸಿದ್ದರಾಮಯ್ಯ ಸಿಎಂ ಆಗಬೇಕು.

ಸುರ್ಜೆವಾಲ ಪ್ರೆಸ್ ರಿಲೀಸ್ ನಾನು ನೋಡಿಲ್ಲ
ನಾನು, ಹಿಟ್ನಾಳ ಹೇಳಿದ್ರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗ್ತಾರಾ? ಕೊನೆಗೆ ನಮ್ಮ ಪಕ್ಷದ ನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ತೀರ್ಮಾನ ಮಾಡುತ್ತಾರೆ. ನನ್ನ ಅಭಿಪ್ರಾಯ ಸಿದ್ದರಾಮಯ್ಯ ಅವರೇ ಸಿಎಂ ಆಗಬೇಕು ಎಂಬುದು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲ ಪ್ರೆಸ್ ರಿಲೀಸ್ ನಾನು ನೋಡಿಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಜನ ಡಿಕೆ ಶಿವಕುಮಾರ್ ಅವರನ್ನು ಸಿಎಂ ಆಗಿ ಬಯಸಬೇಕಲ್ಲ?

ಇನ್ನು ನಿಮ್ಮ ಹೇಳಿಕೆಯಿಂದ ಡಿ.ಕೆ. ಶಿವಕುಮಾರ್ ಅವರಿಗೆ ಅಸಮಾಧಾನ ಆಗೋದಿಲ್ಲವೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ.. ಡಿ.ಕೆ. ಶಿವಕುಮಾರ್ ಅವರಿಗೆ ಅಸಮಾಧಾನ ಏಕೆ ಆಗುತ್ತೆ? ರಾಜ್ಯದ ಜನ ಡಿಕೆ ಶಿವಕುಮಾರ್ ಅವರನ್ನು ಸಿಎಂ ಆಗಿ ಬಯಸಬೇಕಲ್ಲ? ಜನರು ಬಯಸಿದ್ರೆ ನಾವೂ ಬಯಸುತ್ತೇವೆ.. ಸದ್ಯಕ್ಕಂತೂ ರಾಜ್ಯದ ಜನರು ಸಿದ್ದರಾಮಯ್ಯ ಸಿಎಂ ಆಗಬೇಕು ಎನ್ನುತ್ತಿದ್ದಾರೆ ಎಂದು ಹೇಳಿದ್ದಾರೆ.

The post ‘ಜನ ಹೇಳಿದ್ದನ್ನೇ ನಾನು ಹೇಳ್ತಿದ್ದೇನೆ’- ಮತ್ತೆ ಸಿದ್ದರಾಮಯ್ಯ ಸಿಎಂ ಆಗಲಿ ಎಂದ ಜಮೀರ್ appeared first on News First Kannada.

Source: newsfirstlive.com

Source link