ನವದೆಹಲಿ: ಹೊಸ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಿರುವ ಟ್ವಿಟ್ಟರ್ ಇದೀಗ ತನ್ನ ಡೈರೆಕ್ಟ್ ಮೆಸೇಜಸ್( ಡಿಎಂ) ಫ್ಲ್ಯಾಟ್ ಫಾರ್ಮ್ ನಲ್ಲಿ ವಾಯ್ಸ್ ಮೆಸೇಜಿಂಗ್ ಆಯ್ಕೆಯನ್ನು ನೀಡಲು ಮುಂದಾಗಿದೆ.  ಇಂದಿನಿಂದ (ಫೆ.17) ಹಂತಹಂತವಾಗಿ ವಾಯ್ಸ್ ಮೆಸೇಜ್ ಫೀಚರ್ ಭಾರತ, ಬ್ರೆಜಿಲ್ ಮತ್ತು ಜಪಾನ್ ದೇಶಗಳಲ್ಲಿ ಪರೀಕ್ಷೆಗೊಳಪಡಲಿದೆ.

ವಾಯ್ಸ್ ಮೆಸೇಜ್ ಆಯ್ಕೆಯು ಬಳಕೆದಾರರಿಗೆ ವಾಯ್ಸ್ ಟ್ವೀಟ್ ಮತ್ತು ವಾಯ್ಸ್ ನೋಟ್ಸ್ ಕಳುಹಿಸಲು ಅವಕಾಶ ಮಾಡಿಕೊಡುತ್ತದೆ. ಈ ಫೀಚರ್ ಅನ್ನು ಟ್ವಿಟ್ಟರ್ ಕಳೆದ ವರ್ಷವೇ ಪರಿಚಯಿಸಿತ್ತು, ಆದರೇ ಅಧಿಕೃತವಾಗಿ ಜಾರಿಗೆ ಬಂದಿರಲಿಲ್ಲ. ಇಂದಿನಿಂದ ಹಂತಹಂತವಾಗಿ ಬಳಕೆದಾರರು ಧ್ವನಿ ಸಂದೇಶವನ್ನು ಕಳುಹಿಸಬಹುದಾಗಿದ್ದು, ಪ್ರತಿಯೊಂದು ವಾಯ್ಸ್ ಮೆಸೇಜ್ ಗೆ 140 ಸೆಕೆಂಡುಗಳ ಕಾಲವಕಾಶ ನೀಡಲಾಗಿದೆ.

ಇದನ್ನೂ ಓದಿ:  ರೈತರ ಪ್ರತಿಭಟನೆ ಪರ ಧ್ವನಿಯೆತ್ತಿ ವಿವಾದಕ್ಕೀಡಾದ ಗಾಯಕಿ ರಿಹಾನ್ನಾ ಮೇಲೆ ಮತ್ತೊಂದು ವಿವಾದ

ಈ ಟೆಸ್ಟಿಂಗ್ ಫೀಚರ್ ಆ್ಯಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗೆ ಲಭ್ಯವಿದೆ. ಇದು ಟ್ವೀಟಿಗರಿಗೆ ಮತ್ತಷ್ಟು ಅನುಕೂಲವನ್ನು ಒದಗಿಸಿ ಕೊಡಲಿದ್ದು, ವಾಟ್ಸಾಪ್ ವಾಯ್ಸ್ ಫೀಚರ್ ಮಾದರಿಯಲ್ಲೆ ಕಾರ್ಯನಿರ್ವಹಿಸಲಿದೆ. ಗಮನಿಸಬೇಕಾದ ಸಂಗತಿಯೆಂದರೇ ಯಾವುದೇ ವಾಯ್ಸ್ ಮೆಸೇಜ್ ಕಳುಹಿಸುವ ಮೊದಲು ಅದನ್ನೊಮ್ಮೆ ಪರಿಶೀಲಿಸಬಹುದು. ಐಓಎಸ್ ಬಳಕೆದಾರರಿಗೆ ವಾಯ್ಸ್ ರೆಕಾರ್ಡ್ ಅನ್ನು ಹೋಲ್ಡ್ (HOLD) ಮತ್ತು ಕಂಟಿನ್ಯೂ ಮಾಡುವ ಅವಕಾಶ ನೀಡಲಾಗಿದೆ.

ಇದರ ಹೊರತಾಗಿ ವೆಬ್ ಬ್ರೌಸರ್ ಬಳಸುವವರು ಕೂಡ ವಾಯ್ಸ್ ಮೆಸೇಜ್ ಅನ್ನು ಕೇಳುವ ಅವಕಾಶ ನೀಡಲಾಗಿದೆ. ಈ ಆಯ್ಕೆ ಬಳಕೆದಾರರಿಗೆ ಹೊಸ ಅನುಭವವನ್ನು ನೀಡಲಿದ್ದು, ಟ್ವೀಟ್ ಗಳ ಪ್ರಮಾಣ ಹೆಚ್ಚಾಗಲಿದೆ ಎಂದು ಟ್ವಿಟ್ಟರ್ ತಿಳಿಸಿದೆ.

ಇದನ್ನೂ ಓದಿ:  ಸತತ 8ನೇ ಬಾರಿಗೆ ಏರಿಕೆಯಾದ ತೈಲ ದರ: ಮೇಘಾಲಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 5ರೂ. ಇಳಿಕೆ

ಗ್ಯಾಜೆಟ್/ಟೆಕ್ – Udayavani – ಉದಯವಾಣಿ
Read More