‘ಜಮಾಲಿಗುಡ್ಡ’ದ ಕಥೆ ಹೇಳಲು ಹೊರಟ ಡಾಲಿಗೆ ನಾಯಕಿಯಾಗಿ ಜೊತೆಯಾದವರು ಯಾರು?


ಡಾಲಿ ಧನಂಜಯ್ ತನ್ನ ಪ್ರತಿಭೆಯಿಂದಲೇ ಚಿತ್ರರಂಗದಲ್ಲೆ ನೆಲೆ ಕಂಡುಕೊಂಡ ಅದ್ಬುತ ಪ್ರತಿಭೆ.. ಡಾಲಿ ನಾಯಕನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ರು, ಅದೃಷ್ಟ ಕೈ ಹಿಡಿದಿದ್ದು ಮಾತ್ರ ಖಳನಟನ ಪಾತ್ರಗಳು.. ಪಾಲಿಗೆ ಬಂದಿದ್ದು ಪಂಚಾಮೃತ ಅನ್ನೋ ಮಾತಿನಂತೆ ಧನಂಜಯ್ ತನಗೆ ಸಿಕ್ಕ ಎಲ್ಲಾ ಪಾತ್ರಗಳನ್ನು ಬಾಚಿಕೊಂಡು, ಈಗ ಸದ್ದಿಲ್ಲದೆ ಅದಿತಿ ಪ್ರಭುದೇವ ಜೊತೆ ”ಜಮಾಲಿಗುಡ್ಡ”ದಲ್ಲಿ ಪ್ರತ್ಯಕ್ಷವಾಗಿದ್ದಾರೆ.. ಅಷ್ಟಕ್ಕೂ ಅದ್ಯಾವ್ದು ”ಜಮಾಲಿ ಗುಡ್ಡ”ಅಲ್ಲಿ ಡಾಲಿಗೇನು ಕೆಲಸ ?

ಅದೊಂದು ಕಾಲವಿತ್ತು ಧನಂಜಯ್ ಹಾಕಿಕೊಂಡು ಸಿನಿಮಾ ಮಾಡಿದ್ರೆ ನೆಗೆಟಿವ್ ದುಡ್ಡು ಕೂಡ ವಾಪಸ್ ಬರಲ್ಲ ಅಂತಿದ್ರು.. ಅದ್ರೆ ಈಗ ಕಾಲ ಬದಲಾಗಿದೆ ಡಾಲಿಯ ನಸೀಬು ಚೇಂಜ್ ಆಗಿದೆ.. ಈಗ ಡಾಲಿ ಮುಟ್ಟಿದ್ದೆಲ್ಲ ಚಿನ್ನ.. ಅದಕ್ಕೆ ಸಾಕ್ಷಿ ಎಂಬಂತೆ ಒಟಿಟಿಯಲ್ಲಿ ಬಂದ ಡಾಲಿಯ ”ರತ್ನನ್ ಪ್ರಪಂಚ” ನಿರ್ಮಾಪಕರ ಜೋಳಿಗೆ ತುಂಬಿಸುವಲ್ಲಿ ಯಶಸ್ವಿಯಾಗಿದೆ.

ಜೊತೆಗೆ ಡಾಲಿ ‘ಕಾಲ್ ಶೀಟ್ಗೆ ಸಾಕಷ್ಟು ನಿರ್ಮಾಪಕರು ಟವೆಲ್ ಹಾಕಿದ್ದಾರೆ.. ಸದ್ಯ ಡಾಲಿ ಸ್ವಂತ ಬ್ಯಾನರ್​ ”ಹೆಡ್-ಬುಷ್” ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ”ಬಡವರಾಸ್ಕಲ್” ಸಿನಿಮಾ ರಿಲೀಸ್ ಮಾಡೋಕೆ ಪ್ಲಾ ನ್ ಮಾಡಿಕೊಳ್ತಿದ್ದಾರೆ.. ಈ ಗ್ಯಾಪ್ನಲ್ಲಿ ಡಾಲಿ ಒಂದು ವಿಭಿನ್ನವಾದ ಟೈಟಲ್ನ ಸಿನಿಮಾವನ್ನು ರಿವೀಲ್ ಮಾಡುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ..

ಯೆಸ್.. ಡಾಲಿ ಅಭಿನಯದ ಬಹುತೇಕ ಸಿನಿಮಾಗಳ ಟೈಟಲ್ಗಳು ಗುಂಪಿಗೆ ಸೇರದ ಪದಗಳಂತಿರುತ್ತವೆ.. ಅದ್ರೆ ಆ ಸಿನಿಮಾಗಳು ಹೊಸ ಟ್ರೆಂಡ್ ಕ್ರಿಯೇಟ್ ಮಾಡಿ ಹೋಗ್ತಾವೆ..ಈಗ ಅದೇ ರೀತಿ ಡಾಲಿಯ ಹೊಸ ಸಿನಿಮಾ ಟೈಟಲ್ನಿಂದಲೇ ಸಿನಿರಸಿಕರ ಗಮನ ಸೆಳೆಯುತ್ತಿದೆ.. ಆ ಸಿನಿಮಾ ಯಾವ್ದಪ್ಪ ಅಂದ್ರೆ ”once Upon A time in ಜಮಾಲಿಗುಡ್ಡ”.

ಲಾಕ್ ಡೌನ್ ನಂತ್ರ ಸದ್ದಿಲ್ಲದೆ ಡಾಲಿ once Upon A time ಜಮಾಲಿಗುಡ್ಡ ಚಿತ್ರದ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ..ಕನ್ನಡ ರಾಜ್ಯೋತ್ಸವಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಂದ ಚಿತ್ರದ ಟೈಟಲ್ ಅನ್ನು ಅನಾವರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿತ್ತು.. ಅದ್ರೆ ವಿಧಿಯಾಟವೇ ಬೇರೆ ಆಗಿತ್ತು ಅಪ್ಪು ನಮ್ಮನ್ನ ಬಿಟ್ಟು ಬಾರದೂರಿಗೆ ಹೋದ್ರು.. ಆದ್ದರಿಂದ ಕೊಂಚ ತಡವಾಗಿ ಚಿತ್ರತಂಡ ಈಗ ಚಿತ್ರದ ಟೈಟಲ್ ಅನ್ನು ಲಾಂಚ್ ಮಾಡಿದೆ..

”once Upon A time in ಜಮಾಲಿಗುಡ್ಡ” ಚಿತ್ರವನ್ನು ಈ ಹಿಂದೆ ”ಕನ್ನಡಕ್ಕಾಗಿ ಒಂದನ್ನು ಒತ್ತಿ” ಚಿತ್ರವನ್ನು ನಿರ್ದೇಶನ ಮಾಡಿದ್ದ ಕುಶಾಲ್ ಗೌಡ ಈ ಚಿತ್ರಕ್ಕೂ ಸಾರಥಿಯಾಗಿದ್ದಾರೆ..ಇದೊಂದು ಟ್ರಾವೆಲ್ ಸ್ಟೋರಿಯಾಗಿದ್ದು, ಡಾಲಿ ಆ ಪುಟ್ಟ ಮಗುವಿನ ಜೊತೆ ”ಜಮಾಲಿ ಗುಡ್ಡ”ಕ್ಕೆ ಹೋಗಿದ್ಯಾಕೆ ಅನ್ನೊಕತೆಯನ್ನು, ಸಸ್ಪೆನ್ಸ್ ಟಚ್ ಕೊಟ್ಟು ಹೇಳಲು ಚಿತ್ರತಂಡ ರೆಡಿಯಾಗಿದೆ.


”once Upon A time in ಜಮಾಲಿಗುಡ್ಡ” ಚಿತ್ರದಲ್ಲಿ ಡಾಲಿಗೆ ಜೋಡಿಯಾಗಿ ಅದಿತಿ ಪ್ರಭುದೇವ ನಟಿಸಿದ್ದು, ಚಿತ್ರದಲ್ಲಿ ಬಾಲನಟಿ ಪ್ರಾಣ್ಯ ಪ್ರಮುಖ ಪಾತ್ರದಲ್ಲಿ ಕಾಣಿಸಿದ್ದಾರೆ.. ಸದ್ಯ 2 ಶೆಡ್ಯೂಲ್ ಶೂಟಿಂಗ್ ಮುಗಿಸಿರುವ ಚಿತ್ರತಂಡ ಶೀಘ್ರದಲ್ಲೇ ಶೂಟಿಂಗ್ ಕಂಪ್ಲೀಟ್ಮಾಡಿ..ಮುಂದಿನ ವರ್ಷ ರಿಲೀಸ್ ಮಾಡಲು ಪ್ಲಾನ್ ಮಾಡಿಕೊಂಡಿದ್ದಾರೆ.

The post ‘ಜಮಾಲಿಗುಡ್ಡ’ದ ಕಥೆ ಹೇಳಲು ಹೊರಟ ಡಾಲಿಗೆ ನಾಯಕಿಯಾಗಿ ಜೊತೆಯಾದವರು ಯಾರು? appeared first on News First Kannada.

News First Live Kannada


Leave a Reply

Your email address will not be published. Required fields are marked *