ಜಮೀನು ಮಾರಲು ಒಪ್ಪಿಗೆ ನೀಡದ ಪತ್ನಿ, ಮಕ್ಕಳಿಗೆ ಎಗ್ರೈಸ್ನಲ್ಲಿ ವಿಷ ಬೆರೆಸಿ ತಿನ್ನಿಸಿದ ವ್ಯಕ್ತಿ! | A man try to wife and Children Murder in Vijaypur


ಜಮೀನು ಮಾರಲು ಒಪ್ಪಿಗೆ ನೀಡದ ಪತ್ನಿ, ಮಕ್ಕಳಿಗೆ ಎಗ್ರೈಸ್ನಲ್ಲಿ ವಿಷ ಬೆರೆಸಿ ತಿನ್ನಿಸಿದ ವ್ಯಕ್ತಿ!

ಎಗ್​ರೈಸ್ ಸೇವಿಸಿದ ಮಕ್ಕಳು ಅಸ್ವಸ್ಥರಾಗಿದ್ದಾರೆ.

ವಿಪರೀತ ಸಾಲ ಮಾಡಿಕೊಂಡಿದ್ದ ಚಂದ್ರಶೇಖರ್ ಎಂಬಾತ ಜಮೀನು ಮಾರಲು ಮುಂದಾಗಿದ್ದ. ಇದಕ್ಕೆ ಪತ್ನಿ ಸಾವಿತ್ರಿ ಒಪ್ಪಿರಲಿಲ್ಲ. ಇದೇ ಕಾರಣಕ್ಕೆ ಸಾವಿತ್ರಿ ತವರು ಮನೆಗೆ ತೆರಳಿದ್ದಳು.

TV9kannada Web Team

| Edited By: sandhya thejappa

Jun 10, 2022 | 10:40 AM
ವಿಜಯಪುರ: ಜಮೀನು (Land) ಮಾರಲು ಒಪ್ಪಿಗೆ ನೀಡದ ಪತ್ನಿ ಹಾಗೂ ಮಕ್ಕಳ ಕೊಲೆಗೆ (Murder) ಯತ್ನಿಸಿರುವ ಘಟನೆ ತಾಳಿಕೋಟೆ ತಾಲೂಕಿನ ಗೋನಾಳ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವಿಪರೀತ ಸಾಲ ಮಾಡಿಕೊಂಡಿದ್ದ ಚಂದ್ರಶೇಖರ್ ಎಂಬಾತ ಜಮೀನು ಮಾರಲು ಮುಂದಾಗಿದ್ದ. ಇದಕ್ಕೆ ಪತ್ನಿ ಸಾವಿತ್ರಿ ಒಪ್ಪಿರಲಿಲ್ಲ. ಇದೇ ಕಾರಣಕ್ಕೆ ಸಾವಿತ್ರಿ ತವರು ಮನೆಗೆ ತೆರಳಿದ್ದಳು. ಈ ವೇಳೆ ಪತಿ ಹೆಂಡತಿ ತವರು ಮನೆಗೆ ಬಂದು ಜಮೀನು ಮಾರಲು ಒಪ್ಪಿಸಲು ಪ್ರಯತ್ನಿಸಿದ್ದ. ಆದರೆ ಒಪ್ಪಿರಲಿಲ್ಲ. ಇದರಿಂದ ಕೋಪಗೊಂಡಿದ್ದ ಪತಿ ಚಂದ್ರಶೇಖರ್, ಎಗ್ ರೈಸ್​ನಲ್ಲಿ ವಿಷ ಬೆರೆಸಿ ಪತ್ನಿ ಹಾಗೂ ಮಕ್ಕಳಿಗೆ ನೀಡಿದ್ದಾನೆ.

TV9 Kannada


Leave a Reply

Your email address will not be published.