ಜಮೀನು ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ: ಇಬ್ಬರ ಕೊಲೆಯಲ್ಲಿ ಜಗಳ ಅಂತ್ಯ | Argument between two families over land: The fight ends in the murder of two


ಶಿಲ್ಪಾ ಮತ್ತು ಶ್ರೀಧರ್ ಗುಪ್ತಾ ಕುಟುಂಬದ ನಡುವೆ ಜಮೀನು ವಿವಾದ ಇತ್ತು. ಇಂದು ಸಂಜೆ ಇಬ್ಬರ ನಡುವೆ ಜಗಳ ನಡೆದಿತ್ತು. ಜಗಳ ತಾರಕಕ್ಕೇರಿ ಕುಡುಗೋಲಿನಿಂದ ಶ್ರೀಧರ್ ಗುಪ್ತಾ ಹತ್ಯೆ ಮಾಡಿದ್ದಾನೆ.

ಜಮೀನು ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಗಲಾಟೆ: ಇಬ್ಬರ ಕೊಲೆಯಲ್ಲಿ ಜಗಳ ಅಂತ್ಯ

ಸಾಂದರ್ಭಿಕ ಚಿತ್ರ

Image Credit source: India.com

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Sep 22, 2022 | 10:06 PM
ತುಮಕೂರು: ಜಮೀನು ವಿವಾದ ಹಿನ್ನೆಲೆ ಇಬ್ಬರ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಜಿಲ್ಲೆಯ ಮಧುಗಿರಿ ತಾಲೂಕಿನ ಮಿಡಿಗೇಶಿಯ ಸಂತೇ ಬೀದಿ ನಡೆದಿದೆ. ಮಲ್ಲಿಕಾರ್ಜುನಯ್ಯ (45) ಶಿಲ್ಪಾ (35) ಮೃತರು. ಶ್ರೀದರ್ ಗುಪ್ತ ಎಂಬಾತನಿಂದ ಕೊಲೆ ಮಾಡಲಾಗಿದೆ. ಗ್ರಾಮದಲ್ಲಿ ನಿವೇಶನಕ್ಕಾಗಿ ಗಲಾಟೆ ನಡೆದಿದ್ದು, ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಶಿಲ್ಪಾ ಮತ್ತು ಶ್ರೀಧರ್ ಗುಪ್ತಾ ಕುಟುಂಬದ ನಡುವೆ ಜಮೀನು ವಿವಾದ ಇತ್ತು. ಇಂದು ಸಂಜೆ ಇಬ್ಬರ ನಡುವೆ ಜಗಳ ನಡೆದಿತ್ತು. ಜಗಳ ತಾರಕಕ್ಕೇರಿ ಕುಡುಗೋಲಿನಿಂದ ಶ್ರೀಧರ್ ಗುಪ್ತಾ ಹತ್ಯೆ ಮಾಡಿದ್ದಾನೆ. ಜಗಳ ಬಿಡಿಸಲು ಬಂದ ರಾಮಾಂಜನಪ್ಪ ಮೇಲೂ ಕುಡುಗೋಲಿನಿಂದ ದಾಳಿ ಮಾಡಲಾಗಿದೆ. ಶಿಲ್ಪಾ, ಮಲ್ಲಿಕಾರ್ಜುನಯ್ಯ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಿಡಿಗೇಶಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದರು. ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿ

TV9 Kannada


Leave a Reply

Your email address will not be published.