ಬೆಂಗಳೂರು: ಆವೇಶಕ್ಕೆ ಒಳಗಾಗಿ ಹೇಳಿಕೆಗಳನ್ನು ನೀಡದಂತೆ, ಯಾವುದೇ ಒತ್ತಡಕ್ಕೆ ಒಳಗಾಗದಂತೆ ಮಾಜಿ ಪ್ರಧಾನಿ ಹೆಚ್​.ಡಿ. ದೇವೇಗೌಡರು ಪುತ್ರ ಹೆಚ್.ಡಿ. ಕುಮಾರಸ್ವಾಮಿಯವರಿಗೆ ಹಿತವಚನ ಹೇಳಿದ್ದಾರೆ ಎನ್ನಲಾಗಿದೆ.

ರಾಜಕೀಯ ವಿರೋಧಿಗಳು ಅನಗತ್ಯವಾಗಿ ಕೆರಳುವಂತೆ ಮಾಡುತ್ತಾರೆ.. ನಮ್ಮನ್ನ ಪ್ರಚೋದಿಸಿ ಖಳನಾಯಕರೆಂಬಂತೆ ಬಿಂಬಿಸಲು ಪ್ರಯತ್ನಿಸುತ್ತಾರೆ. ಎಷ್ಟೇ ಪ್ರಚೋದಿಸಿದರೂ ಪ್ರತಿ ಹೇಳಿಕೆ ನೀಡುವುದು ಬೇಡ.. ಅದೊಂದು ಕ್ಷಣ ಮೌನಕ್ಕೆ ಶರಣಾಗುವುದು ಒಳ್ಳೆಯದು.. ಯಾರೋ ಏನೋ ಟೀಕೆ ಮಾಡಿದರೆಂಬ ಕಾರಣಕ್ಕೆ ಪ್ರತಿಯಾಗಿ ಹೇಳಿಕೆ ನೀಡಬಾರದು.. ನಮ್ಮ ಮನಸ್ಸನ್ನ ನಾವೇ ನಿಯಂತ್ರಣ ಮಾಡಿಕೊಳ್ಳಬೇಕು.. ರಾಜಕೀಯ ವಿರೋಧಿಗಳು ನಮ್ಮ ವಿರುದ್ಧ ಷಡ್ಯಂತ್ರ ನಡೆಸುತ್ತಲೇ ಇರುತ್ತಾರೆ.. ಸಮಯ ಬಂದಾಗ ಮಾತನ್ನಾಡಬೇಕೆ ಹೊರತು ಅನಗತ್ಯವಾಗಿ ಒತ್ತಡಕ್ಕೆ ಒಳಗಾಗಿ ಹೇಳಿಕೆ ನೀಡೋದು ಬೇಡ ಎಂದು ತಮ್ಮ ಪುತ್ರನಿಗೆ ಸುದೀರ್ಘವಾಗಿ ಜೆಡಿಎಸ್ ವರಿಷ್ಠ ದೇವೇಗೌಡರು ಹಿತವಚನ ಹೇಳಿದ್ದಾರೆ ಎಂದು ಹೇಳಲಾಗಿದೆ.

ಇತ್ತೀಚೆಗೆ ಕುಮಾರಸ್ವಾಮಿ ಹಾಗೂ ಜಮೀರ್ ನಡುವೆ ಮಾತಿನ ಸಮರ ನಡೆದಿತ್ತು.. ಈ ಹಿನ್ನೆಲೆಯಲ್ಲಿ ಪುತ್ರನಿಗೆ ತಂದೆ ಹಿತೋಪದೇಶ ಮಾಡಿದ್ದಾರೆ ಎನ್ನಲಾಗಿದೆ. ಈ ಹಿಂದೆಯೂ ಹಲವು ಬಾರಿ ಕುಮಾರಸ್ವಾಮಿಗೆ ಹಿತವಚನ ನೀಡಿದ್ದಾರಂತೆ. ತಮ್ಮ ರಾಜಕೀಯ ಕಡುವೈರಿ ಸಿದ್ದರಾಮಯ್ಯ ವಿರುದ್ಧವೂ ಕುಮಾರಸ್ವಾಮಿ ಹಲವು ಬಾರಿ ಟೀಕಾ ಪ್ರಹಾರ ನಡೆಸಿದ್ದರು. ಹಲವು ದಿನ ಸಿದ್ದರಾಮಯ್ಯ- ಹೆಚ್‌ಡಿಕೆ ನಡುವೆ ಹೈಡ್ರಾಮಾ ನಡೆದಿತ್ತು.. ಅಷ್ಟೇ ಏಕೆ ಡಿ.ಕೆ. ಶಿವಕುಮಾರ್​ ಟೀಕೆಗೆ ಪ್ರತಿಯಾಗಿ ನಿರಂತರವಾಗಿ ಹೆಚ್‌ಡಿಕೆ ವಾಗ್ದಾಳಿ ನಡೆಸಿದ್ದರು.

The post ಜಮೀರ್​​​​ರಿಂದ ನಿರಂತರ ವಾಗ್ದಾಳಿ; ಪುತ್ರ ಕುಮಾರಸ್ವಾಮಿಗೆ ದೇವೇಗೌಡರು ಹೇಳಿದ್ದೇನು ಗೊತ್ತಾ? appeared first on News First Kannada.

Source: newsfirstlive.com

Source link