ಬಾಗಲಕೋಟೆ: ರಾಜ್ಯ ಕಾಂಗ್ರೆಸ್​ನಲ್ಲೀಗ ಏನಿದ್ದರೂ ಮುಂದಿನ ಸಿಎಂ ಕುರಿತ ವಿವಾದದ ಚರ್ಚೆಯೇ ಜೋರಾಗಿದೆ. ಶಾಸಕ ಜಮೀರ್​ ಅಹಮ್ಮದ್​ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬೆಳಗಾವಿ ಕಾಂಗ್ರೆಸ್​ ಮುಖಂಡ ಸತೀಶ್ ಜಾರಕಿಹೊಳಿ.. ಜಮೀರ್ ಅಹಮ್ಮದ್ ಆಲ್ರೌಂಡರ್. ಆಗಾಗ ಸಿಕ್ಸರ್ ಹೊಡಿತಾ ಇರ್ತಾನೆ, ಅದೇನು ಹೊಸತಲ್ಲ. ಮ್ಯಾಚ್​ ಗೆಲ್ಲಿಸಬೇಕಾದ್ರೆ ಸಿಕ್ಸರ್​ಗಳನ್ನು ಕಳುಹಿಸುತ್ತೇವಲ್ಲ ಹಾಗೆ. ಅವರೂ ಕೂಡ ಹಾಗೆ ಸಿಕ್ಸರ್ ಬಾರಿಸ್ತಾರೆ ಎಂದರು.

ಅಲ್ಲದೇ ನಾನೇ ಸಿಎಂ ಅಂತ ಹೇಳು ಎಂದು ಸಿದ್ದರಾಮಯ್ಯ ಜಮೀರ್​​ಗೆ ಹೇಳಿಲ್ಲ. ಅಭಿಮಾನದಿಂದ ಜಮೀರ್ ಹಾಗೆ ಹೇಳಿರಬಹುದು. ಇದನ್ನ ತಪ್ಪಾಗಿ ಗ್ರಹಿಸೋದು ಬೇಡ. ಯಾರಿಗೂ ರಿಸ್ಟ್ರಿಕ್ಷನ್ ಮಾಡೋಕೆ ಆಗೋದಿಲ್ಲ. ಅಂತಿಮವಾಗಿ ಸಿಎಂ ಆಯ್ಕೆ ಮಾಡಬೇಕಾದದ್ದು ಹೈಕಮಾಂಡ್‌ ಮತ್ತು 113 ಶಾಸಕರು. ಈಗ ಏನು ಹೇಳಿದರೂ ತಾತ್ಕಾಲಿಕ. ನಂತರ ಹೈಕಮಾಂಡ್ ಒಪ್ಪಿಗೆ ಕೊಡಬೇಕು. ನಂತರ ಸಿಎಂ ಆಯ್ಕೆ ನಡೆಯುತ್ತದೆ. ಇದು ಹಿಂದಿನಿಂದ‌ ನಡೆದುಕೊಂಡು‌ಬಂದ ಸಂಪ್ರದಾಯ ಅಂತಾ ಹೇಳಿದರು.

ಪರಂ, ಡಿಕೆಎಸ್​, ಖರ್ಗೆ ಎಲ್ರೂ ಇರ್ತಾರೆ
ಸಿಎಂ ಸ್ಥಾನದ ರೇಸ್​ನಲ್ಲಿ ಜಿ.ಪರಮೇಶ್ವರ್ ಕೂಡ ಇರುತ್ತಾರೆ. ಖರ್ಗೆ, ಡಿಕೆಎಸ್​, ಸಿದ್ದರಾಮಯ್ಯ ಎಲ್ಲರೂ ಇರ್ತಾರೆ. ಸಿಎಂ ರೇಸ್​ನಲ್ಲಿ ಸದ್ಯಕ್ಕೆ ನಾನಿಲ್ಲ. ನನಗೆ ಇನ್ನೂ ವಯಸ್ಸಿದೆ, ತಾಳ್ಮೆ ಇದೆ. ಅವರೆಲ್ಲ ಆಗಲಿ, ಆಮೇಲೆ ನಾನು ಸಿಎಂ ಸ್ಥಾನಕ್ಕೆ ಅರ್ಜಿ ಕೊಡುತ್ತೇನೆ. ಈಗ ನನಗೆ ಅರ್ಜೆಂಟ್ ಇಲ್ಲ. ನನಗೂ ಒಂದು ದಿನ ಕಾಲಾವಕಾಶ ಬರುತ್ತದೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದರು.

The post ಜಮೀರ್​ ಆಲ್ ರೌಂಡರ್, ಆಗಾಗ ಸಿಕ್ಸರ್ ಬಾರಿಸ್ತಾರೆ -ಸತೀಶ್ ಜಾರಕಿಹೊಳಿ ಹೀಗ್ಯಾಕೆ ಅಂದ್ರು? appeared first on News First Kannada.

Source: newsfirstlive.com

Source link