ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಬೆಂಬಲಿಗರು ಹಾಗು ಜಮೀರ್ ಬೆಂಬಲಿಗರ ನಡುವೆ ಸದಾಶಿವನಗರ ಗೆಸ್ಟ್ ಹೌಸ್​ ಬಳಿ ಗಲಾಟೆ ನಡೆದಿದ್ದು ಕೈ ಕೈ ಮಿಲಾಯಿಸಿಕೊಂಡಿದ್ದಾರೆ ಎನ್ನಲಾಗಿದೆ.

ನಿಖಿಲ್ ಗನ್ ಮ್ಯಾನ್ ಹಾಗೂ ಬೆಂಬಲಿಗರು ಗೆಸ್ಟ್ ಹೌಸ್ ಬಳಿ ಹೋಗಿದ್ದಾರೆ.. ಈ ವೇಳೆ ಜಮೀರ್ ಬೆಂಬಲಿಗರು ಕೂಡ ಗೆಸ್ಟ್ ಹೌಸ್ ಬಳಿ ಜಮಾವಣೆಗೊಂಡಿದ್ದರು.. ಗೆಸ್ಟ್​ಹೌಸ್ ಮಾಲೀಕತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ ಎನ್ನಲಾಗಿದೆ.
ನಿಖಿಲ್ ಕುಮಾರಸ್ವಾಮಿ ಬೆಂಬಲಿಗರು ಗೆಸ್ಟ್ ಹೌಸ್​ನ ಡೋರ್ ಒಡೆದು ಗಲಾಟೆ ನಡೆಸಿರುವ ಆರೋಪ ಕೇಳಿಬಂದಿದೆ. ಸದ್ಯ ಗಲಾಟೆ ಪ್ರಕರಣ ಸದಾಶಿವನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ ಎನ್ನಲಾಗಿದೆ.

ಜಮೀರ್ ಆಪ್ತ ಫಾರೂಕ್ ಬಳಿ ಇನ್ಸ್​ಪೆಕ್ಟರ್ ಅನಿಲ್ ಕುಮಾರ್ ಮಾಹಿತಿ ಪಡೆಯುತ್ತಿದ್ದಾರೆ. ಗೆಸ್ಟ್ ಹೌಸ್ ಬಳಿ ನಿಖಿಲ್ ಕುಮಾರಸ್ವಾಮಿಯ ಮೂವರು ಬಾಡಿ ಗಾರ್ಡ್ ಗಳು ತೆರಳಿದ್ದಾರೆ.. ಗೆಸ್ಟ್ ಹೌಸ್ ಬಳಿ ಕೇರ್ ಟೇಕರ್​ರನ್ನ ಓಡಿಸಿದ್ದಾರೆ ಎಂದು ದೂರು ನೀಡಿದ್ದಾರೆ ಎನ್ನಲಾಗಿದೆ. ಮೊದಲು ಗೆಸ್ಟ್ ಹೌಸ್ ಎಚ್ ಡಿ ಕೆ ಗೆ ಕೊಟ್ಟಿದ್ದೆವು.. ಅದು ನಮ್ಮದು ಅಂತಾ ದೂರು ನೀಡಲು ಜಮೀರ್ ಪಿಎ ಫಾರುಕ್ ಸ್ಟೇಷನ್ ಬಳಿಗೆ ಬಂದಿದ್ದಾರೆ ಎನ್ನಲಾಗಿದೆ.

The post ಜಮೀರ್​ ಗೆಸ್ಟ್​ಹೌಸ್​ನಲ್ಲಿ ಬೆಂಬಲಿಗರಿಂದ ಗಲಾಟೆ ಆರೋಪ; ಕುಮಾರಸ್ವಾಮಿ ವಿರುದ್ಧ ಜಮೀರ್ ಕಿಡಿ appeared first on News First Kannada.

Source: newsfirstlive.com

Source link