ದೇವನಹಳ್ಳಿ: ಅನ್ನ ದಾಸೋಹ ಕಾರ್ಯಕ್ರಮಕ್ಕೆ ಮಾಜಿ ಸಚಿವ ಜಮೀರ್ ಅಹಮ್ಮದ್​ ಭೇಟಿ ನೀಡಿದಾಗ ಅಭಿಮಾನಿಯೊಬ್ಬ ಶಾಸಕರಿಗೆ ಮುತ್ತು ನೀಡಿರೋ ಘಟನೆ ನಡೆದಿದೆ.

ಅಭಿಮಾನಿ, ತನ್ನ ಕಾರು ಮೇಲೆ ಜಮೀರ್ ಅಹಮ್ಮದ್ ಭಾವಚಿತ್ರ ಅಳವಡಿಸಿದ್ದ. ಯಾವಾಗ, ಭಾವಚಿತ್ರ ನೋಡಿ ಕಾರಿನಿಂದ ಕೆಳಗಿಳಿದು ಜಮೀರ್ ಅಹಮ್ಮದ್ ಹತ್ತಿರ ಬಂದ ವೇಳೆ ಅಭಿಮಾನಿ ಜಮೀರ್ ಅಹಮ್ಮದ್​ ಕೆನ್ನೆಗೆ ಮುತ್ತು ನೀಡಿದ್ದಾರೆ.

ಇನ್ನು ಈ ವೇಳೆ ಜಮೀರ್ ಅಹಮ್ಮದ್​ಗೆ ಮಾನಸಿಕ ಸ್ಥಿಮಿತ ಇಲ್ಲ ಎಂದು ನಿಖಿಲ್ ಹೇಳಿಕೆ ನೀಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿ.. ನಿಖಿಲ್ ನನ್ನು ನಾನು 9 ವರ್ಷ ಹುಡುಗನಿಂದ ನೋಡಿದ್ದೇನೆ. ನನ್ನ ಮಗ ಜಾವೀದ್ ತರ ನಿಖಿಲ್ ಸಹ ನನ್ನ ಮಗನಿದ್ದಂತೆ.  ಹಾಗಾಗಿ ಅದರ ಬಗ್ಗೆ ಉತ್ತರಿಸಲ್ಲ ಅಂತ ಹೇಳಿದ್ದಾರೆ.

ತಸ್ತಿಕ್ ರದ್ದು ಮಾಡುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರೋ ಜಮೀರ್​.. ರದ್ದು ಮಾಡಿಲ್ಲ, ರದ್ದು ಮಾಡಬೇಕು ಅಂತ ಹೇಳಿದ್ದಾರೆ. ಆನಂದ್ ಸಿಂಗ್ ಆಗಲೀ ಅಥವಾ ಮುಖ್ಯಮಂತ್ರಿ ಆಗಲೀ ಇದರ ಬಗ್ಗೆ ಹೇಳಿಕೆ ನೀಡಿಲ್ಲ. ಮುಜರಾಯಿ ಮಂತ್ರಿಗೂ ಇದಕ್ಕೂ ಏನು ಸಂಬಂಧ.. ಮುಜರಾಯಿ ಇಲಾಖೆ ಅಲ್ಲದೆ ಸಣ್ಣ ದೇವಾಲಯಕ್ಕೂ ಸಂಬಳ ನೀಡಲಿ.. ಇದಕ್ಕೆ ನನ್ನ ಅಭ್ಯಂತರ ಇಲ್ಲ. ಬಿಜೆಪಿ ಸರ್ಕಾರದಲ್ಲಿ ಏನು ಬೇಕಾದರೂ ಆಗಬಹುದು. ಅಲ್ಪಸಂಖ್ಯಾತರಿಗೆ ನ್ಯಾಯ ಸಿಗುತ್ತದೆ ಎಂಬ ಯಾವ ನಂಬಿಕೆಯೂ ನಮಗೆ ಇಲ್ಲ. ಯಡಿಯೂರಪ್ಪ ಒಳ್ಳೆಯವರು ರೈಟ್ ಪರ್ಸನ್ ಇನ್ ರಾಂಗ್ ಪಾರ್ಟಿ, ಹಾಗಾಗಿ ರದ್ದು ಮಾಡಿದರೂ ನಾವು ಏನೂ ಮಾಡಲಿಕ್ಕೆ ಆಗಲ್ಲ ಅಂತ ಹೇಳಿದ್ರು.

The post ಜಮೀರ್ ಅಹ್ಮದ್​ರನ್ನ ಕಂಡು ಖುಷಿಯಿಂದ ಮುತ್ತು ಕೊಟ್ಟ ಅಭಿಮಾನಿ appeared first on News First Kannada.

Source: newsfirstlive.com

Source link