ಬೆಂಗಳೂರು: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸುರ್ಜೇವಾಲ ಅವರು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ‘ನಮ್ಮ ಹೀರೋ’ ಅಂತ ಹಾಡಿ ಹೊಗಳಿದ್ದಾರೆ.
ಶಾಸಕ ಜಮೀರ್ ಜೊತೆ ಎಲ್ಲರೂ ಒಗ್ಗೂಡಿ ಕೆಲಸ ಮಾಡ್ತಿದ್ದಾರೆ. ಅಲ್ಪಸಂಖ್ಯಾತರು, ದಲಿತರು, ಹಿಂದುಳಿದವರು, ಹಿಂದು, ಮುಸ್ಲಿಂ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಆಗಿದೆ. ಇವರೇ ನಮ್ಮ ಹೀರೋ ಅಂತ ನಗು ನಗುತ್ತಾ ಸುರ್ಜೇವಾಲ ಜಮೀರ್ ಕೈ ಹಿಡಿದ್ರು. ಇನ್ನು ಜಮೀರ್ ಕೂಡ ರಂದೀಪ್ ಮನೆಯಿಂದ ತೆರಳುವಾಗ ಸಂತಸದಿಂದ ಬೀಳ್ಕೊಟ್ಟರು.
ಜಮೀರ್ ನಮ್ಮ ಹೀರೋ ಅಂದಿರೋದ್ರಿಂದ ಅವರ ಬೆಂಬಲಿಗರು ಫುಲ್ ಖಷಿಯಾಗಿದ್ದಾರೆ ಎನ್ನಲಾಗಿದೆ. ಈ ಮೂಲಕ ಜಮೀರ್ ವಿರೋಧಿ ಬಣಗಳಿಗೆ ಕಾಂಗ್ರೆಸ್ ಹೈಕಮಾಂಡ್ ಪರೋಕ್ಷ ಸಂದೇಶ ರವಾನೆ ಮಾಡಿದೆ ಎಂದು ಮಾಜಿ ಸಚಿವರ ಅಭಿಮಾನಿಗಳು ಮಾತಾಡಿಕೊಳ್ತಿದ್ದಾರಂತೆ
ಪ್ಲೀಸ್ ವೇಯ್ಟ್
ಇದೇ ವೇಳೆ ಬಿಟ್ ಕಾಯಿನ್ ಹಗರಣದ ದಾಖಲೆ ಬಿಡುಗಡೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ.. ಬಿಟ್ ಕಾಯಿನ್ ಹಗರಣದ ಬಗ್ಗೆ ಮತ್ತಷ್ಟು ದಾಖಲೆ ಬರೋದು ಬಾಕಿ ಇದೆ. MORE INSTALLMENT IS COMING, ಪ್ಲೀಸ್ ವೇಯ್ಟ್ ಅಂತ ಮಾಧ್ಯಮದವರಿಗೆ ರಣದೀಪ್ ಸಿಂಗ್ ಸುರ್ಜೇವಾಲ ಹಿಂಟ್ ಕೊಟ್ಟಿದ್ದಾರೆ.