ದಾವಣಗೆರೆ: ಜಮೀರ್ ಅಹಮ್ಮದ್, ಗುಜರಿ ಅಹಮ್ಮದ್ ಮೊದಲು ವಾಚ್‍ಮೆನ್ ಡ್ರೆಸ್ ಹಾಕಿಕೊಂಡು, ಲಾಠಿ ಹಿಡಿದು, ಯಡಿಯೂರಪ್ಪನವರ ಮನೆ ವಾಚ್ ಮೆನ್ ಆಗಿ ಎಂದು ಶಾಸಕ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ ಬಳಿ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಲಿ ಸಿಎಂ ಅಲ್ಲ ಭಾವಿ ಸಿಎಂ ಎಂಬ ಜಮೀರ್ ಆಹ್ಮದ್ ಹೇಳಿದ್ದಾರೆ. ಜಮೀರ್ ಮೊದಲು ಸಿಎಂ ಮನೆ ವಾಚ್ ಮನ್ ಆಗಲಿ. ಆ ನಂತರ ಮುಂದಿನ ರಾಜಕೀಯದ ಬಗ್ಗೆ ಯೋಚನೆ ಮಾಡಿ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ನಿಜವಾದ ಜನ ನಾಯಕ, ನೀವೆಂತ ಜನ ನಾಯಕ – ಹೆಚ್‍ಡಿಕೆಗೆ ಜಮೀರ್ ಗೇಲಿ

ಮುಂದೆ ನೀವು ಶಾಸಕನಾಗುತ್ತೀರಾ ಎಂದು ನಂಬಿಕೆ ಇಲ್ಲಾ. ಸಿದ್ದರಾಮಯ್ಯರನ್ನು ಹೊಗಳಿದರೆ ಮುಂದೆ ಏನೋ ಅವಕಾಶ ಸಿಗುತ್ತದೆ ಎಂದು ಅವರನ್ನು ಕೊಂಡಾಡುತ್ತಿದ್ದೀರಾ. ನೀವು ಕೋಮುವಾದಿ ಪಾದರಾಯನಪುರದಲ್ಲಿ ವಿಷ ಬೀಜ ಬಿತ್ತಿ ಗಲಾಟೆ ಮಾಡಿಸುವ ಕೆಲಸ ಮಾಡುತ್ತಿದ್ದೀರಿ. ಸಿದ್ದರಾಮಯ್ಯನವರ ಬಗ್ಗೆ ನನಗೆ ಅಪಾರ ಗೌರವ ಇದೆ. ಆದರೆ ರಾಜ್ಯದಲ್ಲಿ ಸಿಎಂ ಸೀಟ್ ಖಾಲಿ ಇಲ್ಲಾ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: 16 ಜಿಲ್ಲೆಗಳಲ್ಲಿ ಸಂಜೆ 5ರವರೆಗೆ ಅನ್‍ಲಾಕ್- ನಿಯಮಗಳೇನು?

The post ಜಮೀರ್ ಮೊದಲು ಬಿಎಸ್‍ವೈ ಮನೆ ವಾಚ್‍ಮೆನ್ ಆಗಿ: ರೇಣುಕಾಚಾರ್ಯ appeared first on Public TV.

Source: publictv.in

Source link