ಶ್ರೀನಗರ: ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನಿರ್ಮಾಣದ ಭೂಮಿ ಪೂಜೆಯನ್ನು ಇಂದು ಜಮ್ಮು ಕಾಶ್ಮೀರದ ರಾಜ್ಯಪಾಲ ಮನೋಜ್​ ಸಿನ್ಹಾ ಅವರು ನೆರವೇರಿಸಿದರು.

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯ ಮಜೀನ್ ಎಂಬಲ್ಲಿ ದೇವಸ್ಥಾನ ನಿರ್ಮಾಣ ಮಾಡಲಾಗುತ್ತಿದೆ. ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಕಮಿಟಿಯ ಅಧ್ಯಕ್ಷ ವೈ.ವಿ ಸುಬ್ಬ ರೆಡ್ಡಿ ಹಾಗೂ ರಾಜ್ಯಪಾಲ ಮನೋಜ್​ ತಿವಾರಿ ಅವರೊಂದಿಗೆ ಟಿಟಿಡಿ  ಬೋರ್ಡ್​​ನ 58​ ಸದಸ್ಯರು, ಆಂಧ್ರ ಪ್ರದೇಶದ ಸಂಸತ್ ಸದಸ್ಯರು ಹಾಗೂ ಮಾಜಿ ಐಎಎಸ್​ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮಕ್ಕೆ 12 ವಿಶೇಷ ಮಂದಿ ವಿಶೇಷ ಆಹ್ವಾನ ನೀಡಲಾಗಿತ್ತು ಎಂಬ ಮಾಹಿತಿ ಲಭಿಸಿದೆ.

ದೇವಾಲಯ ನಿರ್ಮಾಣಕ್ಕಾಗಿ ಟ್ರಸ್ಟ್​ 62 ಎಕರೆ ಪ್ರದೇಶವನ್ನು ಖರೀದಿ ಮಾಡಿದ್ದು, ಮೊದಲ ಹಂತದಲ್ಲಿ 17 ಎಕರೆ ಪ್ರದೇಶದಲ್ಲಿ ಮೊದಲ ಹಂತದ ನಿರ್ಮಾಣ ಕಾರ್ಯ ನಡೆಯಲಿದೆ. ಮೊದಲ ಹಂತದಲ್ಲಿ ದೇವಾಲಯ ಸಂಕೀರ್ಣ, ಬೌಂಡರಿ ವಾಲ್​, ವೇದಿಕ್ ಶಾಲೆ, ಸಿಬ್ಬಂದಿಯ ವಸತಿ ಸಮುಚ್ಚಯ ಹಾಗೂ ಯಾತ್ರಿಕರ ಅಗತ್ಯವಿರುವ ಸೌಲಭ್ಯಗಳು ನಿರ್ಮಾಣವಾಗಲಿದೆ. ಮೊದಲ ಹಂತದ ಕಾಮಗಾರಿಗೆ 33 ಕೋಟಿ ರೂಪಾಯಿ ವೆಚ್ಚವನ್ನು ಅಂದಾಜು ಮಾಡಲಾಗಿದೆ.

The post ಜಮ್ಮುವಿನಲ್ಲಿ ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿ ದೇಗುಲ ನಿರ್ಮಾಣಕ್ಕೆ ಭೂಮಿ ಪೂಜೆ appeared first on News First Kannada.

Source: newsfirstlive.com

Source link