ಜಮ್ಮು ಕಾಶ್ಮೀರಕ್ಕೆ ನಾಳೆ ಪ್ರಧಾನಿ ನರೇಂದ್ರ ಮೋದಿ ಭೇಟಿ; 20 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ | Security tightened ahead of PM Narendra Modi visit to Jammu and Kashmir on Sunday


ಜಮ್ಮು ಕಾಶ್ಮೀರಕ್ಕೆ ನಾಳೆ ಪ್ರಧಾನಿ ನರೇಂದ್ರ ಮೋದಿ ಭೇಟಿ; 20 ಸಾವಿರ ಕೋಟಿ ರೂ. ಯೋಜನೆಗಳಿಗೆ ಚಾಲನೆ

ನರೇಂದ್ರ ಮೋದಿ

ಶ್ರೀನಗರ: ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆ (ಭಾನುವಾರ) ಜಮ್ಮು ಮತ್ತು ಕಾಶ್ಮೀರಕ್ಕೆ ಆಗಮಿಸಲಿರುವುದರಿಂದ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ನಾಳೆ ‘ಪಂಚಾಯತಿ ರಾಜ್ ದಿವಸ್’ ಸಂದರ್ಭದಲ್ಲಿ ಪ್ರಧಾನಿಯವರು ಪಂಚಾಯತ್‌ಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರತಿ ವರ್ಷ ಏಪ್ರಿಲ್ 24 ಅನ್ನು ರಾಷ್ಟ್ರೀಯ ಪಂಚಾಯತ್ ರಾಜ್ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರಧಾನಮಂತ್ರಿ ಮೋದಿ ಜಮ್ಮು ಮತ್ತು ಕಾಶ್ಮೀರದ 30,000ಕ್ಕೂ ಹೆಚ್ಚು ಪಂಚಾಯತ್ ರಾಜ್ ಸಂಸ್ಥೆ (PRI) ಸದಸ್ಯರನ್ನು ಒಳಗೊಂಡಂತೆ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ 20 ಸಾವಿರ ಕೋಟಿ ರೂ.ಗಳ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಜಮ್ಮುವಿನ ಪಂಚಾಯತ್ ಪಲ್ಲಿಯನ್ನು ಈ ವರ್ಷ ಪಂಚಾಯತ್ ರಾಜ್ ದಿವಸ್ ಕಾರ್ಯಕ್ರಮಕ್ಕೆ ಆಯ್ಕೆ ಮಾಡಲಾಗಿದೆ. ರೈತರು, ಸರಪಂಚ್‌ಗಳು ಮತ್ತು ಗ್ರಾಮದ ಮುಖ್ಯಸ್ಥರು ತಮ್ಮ ಆದಾಯ ಮತ್ತು ಅವರ ಉತ್ಪನ್ನಗಳನ್ನು ಸುಧಾರಿಸಲು ಅನುವು ಮಾಡಿಕೊಡುವ ಇತ್ತೀಚಿನ ಆವಿಷ್ಕಾರಗಳನ್ನು ಈ ವೇಳೆ ಪ್ರದರ್ಶಿಸಲಾಗುತ್ತದೆ.

ನಾಳೆ ಪ್ರದರ್ಶಿಸಲು ಯೋಜಿಸಲಾದ ಪ್ರಮುಖ ಆವಿಷ್ಕಾರಗಳ ಪೈಕಿ, ಗ್ರಾಮೀಣಾಭಿವೃದ್ಧಿ ಮತ್ತು ರೈತರಿಗೆ ಭೂಗೋಳದ ತಂತ್ರಜ್ಞಾನ, ಐದು ದಿನಗಳವರೆಗೆ ಹವಾಮಾನ ಮುನ್ಸೂಚನೆಗಾಗಿ ರೈತರು ಬಳಸಬಹುದಾದ ಅಪ್ಲಿಕೇಶನ್‌ಗಳು, ನೇರಳೆ ಕ್ರಾಂತಿ ಎಂದು ಪ್ರಸಿದ್ಧವಾದ ಲ್ಯಾವೆಂಡರ್ ಕೃಷಿ, ಅದೇ ಭೂಮಿಯಲ್ಲಿ ಸೇಬಿನ ಉತ್ಪಾದನೆಯನ್ನು ಹೆಚ್ಚಿಸಲು ಜೈವಿಕ ತಂತ್ರಜ್ಞಾನದ ಆವಿಷ್ಕಾರಗಳು. ರೈತರ ಆದಾಯವನ್ನು ಹೆಚ್ಚಿಸಲು, ಕೀಟನಾಶಕ ಸಿಂಪಡಣೆ ಮತ್ತು ತ್ಯಾಜ್ಯ ಸಂಸ್ಕರಣೆಗೆ ಡ್ರೋನ್ ಅಪ್ಲಿಕೇಶನ್, ಪರಮಾಣು ವಿಕಿರಣದ ಮೂಲಕ ಹಣ್ಣುಗಳ ಶೆಲ್ಫ್ ಜೀವಿತಾವಧಿಯನ್ನು ಹೆಚ್ಚಿಸುವುದು ಇತ್ಯಾದಿಗಳು ಸೇರಿವೆ.

TV9 Kannada


Leave a Reply

Your email address will not be published.