ಶ್ರೀನಗರ: ಜಮ್ಮು ವಾಯುನೆಲೆಯಲ್ಲಿ ಅವಳಿ ಸ್ಫೋಟಗಳು ನಡೆದ ಬಳಿಕ ಪಂಜಾಬ್​​ ಹಾಗೂ ಶ್ರೀನಗರದಲ್ಲಿ ಹೈ-ಅಲರ್ಟ್​​ ಘೋಷಣೆ ಮಾಡಲಾಗಿದೆ. ಜಮ್ಮು ವಾಯುನೆಲೆಯ ಮೇಲೆ ರಿಮೋರ್ಟ್​ ಕಂಟ್ರೋಲ್​​ ಡ್ರೋಣ್​ ಬಳಸಿ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ಏರ್​​ಪೋರ್ಸ್​​ ಇಬ್ಬರು ಸಿಬ್ಬಂದಿ  ಗಾಯಗೊಂಡಿದ್ದು, ಸ್ಫೋಟದ ತೀವ್ರತೆ ಕಡಿಮೆಯಿದ್ದ ಕಾರಣ ಯಾವುದೇ ಹೆಚ್ಚಿನ ಹಾನಿ ಸಂಭವಿಸಿಲ್ಲ ಎನ್ನಲಾಗಿದೆ.

ಇಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಲಡಾಖ್​ ಭೇಟಿ ನೀಡುತ್ತಿದ್ದು, ಭೇಟಿಗೂ ಮುನ್ನ ಇಂಡಿಯನ್​​ ಏರ್​​ಪೋರ್ಸ್​​​ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.

ಭಾನುವಾರ ಬೆಳಗ್ಗೆ 1:27ರ ವೇಳೆಗೆ ಮೊದಲ ಸ್ಫೋಟ ಸಂಭವಿಸಿದ್ದು, ಎರಡನೇ ಸ್ಫೋಟ 1:32ರ ವೇಳೆಗೆ ಸಂಭವಿಸಿದೆ. ಸ್ಫೋಟ ಸಂಭವಿಸಿದ ವಾಯುನೆಲೆ ಜಮ್ಮು ಕಾಶ್ಮೀರದ ಸತ್ವಾರಿ ಬಳಿಯಿದ್ದು, ಜಮ್ಮು ತಾವಿ ರೈಲು ನಿಲ್ದಾಣದಿಂದ 6 ಕಿಮೀ, ಪಠಾಣ್​ ಕೋಟ್​​ ವಾಯುನೆಲೆಯಿಂದ 110 ಕಿಮೀ ದೂರದಲ್ಲಿದೆ.

ಘಟನೆ ಕುರಿತಂತೆ ಕಾನೂನು ಬಾಹೀರ ಚಟುವಟಿಕೆಗಳ (​ತಡೆ) ಕಾಯ್ದೆಗೆ (ಯುಎಪಿಎ) ಅಡಿ ದೂರು ದಾಖಲಿಸಿಕೊಂಡಿದ್ದು, ಸ್ಥಳಕ್ಕೆ ರಾಷ್ಟ್ರೀಯ ತನಿಖಾ ದಳ (ಎನ್​​ಐಎ) ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತಂತೆ ಈಗಾಗಲೇ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ವಿತರಣೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

The post ಜಮ್ಮು ವಾಯುನೆಲೆಯಲ್ಲಿ IED ಸ್ಫೋಟ; ಪಂಜಾಬ್​, ಶ್ರೀನಗರದಲ್ಲಿ ಹೈ-ಅಲರ್ಟ್​​ appeared first on News First Kannada.

Source: newsfirstlive.com

Source link