ಜೂನ್ 7 ರಿಂದ 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಕೊರೊನಾ ಲಸಿಕೆ ವಿತರಣೆ ಮಾಡಲಾಗುತ್ತದೆ ಎಂದು ಜರ್ಮನಿಯ ಚಾನ್ಸೆಲರ್ ಏಂಜೆಲಾ ಮಾರ್ಕೆಲ್ ತಿಳಿಸಿದ್ದಾರೆ. ಆದ್ರೆ ಮಕ್ಕಳಿಗೆ ವ್ಯಾಕ್ಸಿನೇಷನ್ ಕಡ್ಡಾಯವೇನಲ್ಲ, ಅವರ ಸ್ವಇಚ್ಚೆಗೆ ಬಿಟ್ಟಿದ್ದು, ಎಂದು ಹೇಳಿದ್ದಾರೆ.

ಇನ್ನು ಯುರೋಪಿಯನ್ ಮೆಡಿಸಿನ್ಸ್​​ ಏಜೆನ್ಸಿ 12 ರಿಂದ 15 ವರ್ಷದ ಮಕ್ಕಳಿಗೆ ಫೈಜರ್ ಲಸಿಕೆಯನ್ನ ನೀಡಲು ಅನುಮತಿ ಕೊಡಬಹುದು ಎನ್ನಲಾಗಿದೆ. ಈಗಾಗಲೇ ಯೂರೋಪಿಯನ್ ಯೂನಿಯನ್ ರಾಷ್ಟ್ರಗಳಲ್ಲಿ 16 ವರ್ಷ ಮೇಲ್ಪಟ್ಟವರಿಗೆ ಫೈಜರ್​ ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಜೂನ್ 7ರಿಂದ ಲಸಿಕೆ ಮಕ್ಕಳಿಗೆ ಲಸಿಕೆ ಹಾಕಿಸಲು ಇಚ್ಚಿಸುವವರು ಈಗಿನಿಂದಲೇ ನೊಂದಣಿ ಮಾಡಿಕೊಳ್ಳಬಹುದಾಗಿದೆ.

ಆಗಸ್ಟ್ ಅಂತ್ಯದ ವೇಳೆಗೆ ಮಕ್ಕಳಿಗೆ ಎರಡಲ್ಲಿ ಕನಿಷ್ಠ ಒಂದು ಡೋಸ್ ಲಸಿಕೆಯನ್ನ ನೀಡುವ ಗುರಿ ಹೊಂದಿದ್ದೇವೆ. ಈ ಮೂಲಕ ಮಕ್ಕಳು ಸಹ ಕೊರೊನಾ ವಿರುದ್ದ ಹೋರಾಡಲು ಸಹಕಾರಿಯಾಗಲಿದೆ ಎಂದು ಮಾರ್ಕೆಲ್ ತಿಳಿಸಿದ್ದಾರೆ. ಈಗಾಗಲೇ ಕೆನಾಡ ಹಾಗೂ ಅಮೆರಿಕದಲ್ಲಿ 12 ವರ್ಷದ ಮಕ್ಕಳಿಗೆ ವ್ಯಾಕ್ಸಿನ್ ನೀಡಲಾಗುತ್ತಿದೆ.

The post ಜರ್ಮನಿಯಲ್ಲಿ ಜೂನ್ 7ರಿಂದ 12 ವರ್ಷ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ appeared first on News First Kannada.

Source: newsfirstlive.com

Source link