ಪಾಶ್ಚಿಮಾತ್ಯ ಯೂರೋಪ್​​ನಲ್ಲಿ ಸಿಕ್ಕಾಪಟ್ಟೆ ಮಳೆಯಿಂದಾಗಿ ಜರ್ಮನ್​​ನಲ್ಲಿ ಭಾರೀ ಪ್ರವಾಹ ಉಂಟಾಗಿದೆ. ಪ್ರವಾಹದ ಆರ್ಭಟಕ್ಕೆ ಇದುವರೆಗೆ 60ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ನೂರಾರು ಮಂದಿ ನಾಪತ್ತೆಯಾಗಿದ್ದಾರೆ ಅಂತಾ ವರದಿಯಾಗಿದೆ.

ಜರ್ಮನ್ ಮಾತ್ರವಲ್ಲ ನೆರೆಯ ರಾಷ್ಟ್ರಗಳಾದ ಲಕ್ಸೆಂಬರ್ಗ್, ನೆದರ್​ಲ್ಯಾಂಡ್, ಬೆಲ್ಜಿಯಂನಲ್ಲಿ ತಲಾ 4ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆಯಲ್ಲಿ ನದಿ ತೀರದಲ್ಲಿ ವಾಸಿಸುತ್ತಿರುವ ಎಲ್ಲಾ ನಿವಾಸಿಗಳನ್ನೂ ಸುರಕ್ಷಿತ ಸ್ಥಳಕ್ಕೆ ರವಾನಿಸಲು ಸೂಚನೆ ನೀಡಲಾಗಿದೆ.

ಇನ್ನು ಮಳೆಯ ಆರ್ಭಟ ಜರ್ಮನ್ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರಿದೆ. ಅದು ಎಷ್ಟರ ಮಟ್ಟಿಗೆ ಅಂದರೆ ಎರಡನೇ ಮಹಾಯುದ್ಧದಲ್ಲಿ ಉಂಟಾದ ಹಾನಿ ಬಳಿಕ ಈ ಪ್ರವಾಹ ಭಾರೀ ದೊಡ್ಡ ಪ್ರಮಾಣದಲ್ಲಿ ಹೊಡೆತ ಕೊಟ್ಟಿದೆ ಅಂತಾ ಹೇಳಲಾಗುತ್ತಿದೆ. ಇನ್ನು ಸಂಕಷ್ಟಕ್ಕೆ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಸೇನಾ ಹೆಲಿಕಾಪ್ಟರ್​ ಮೂಲಕ ರಕ್ಷಣೆ ಮಾಡಲಾಗುತ್ತಿದೆ.

20 ಸಾವಿರಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. 400ಕ್ಕೂ ಹೆಚ್ಚು ಯೋಧರಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. 468 ರೋಗಿಗಳನ್ನ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಅಹ್ರ್ವೀಲರ್ ಪಟ್ಟಣ ಒಂದರಲ್ಲೇ ಸುಮಾರು 19 ಮಂದಿಯ ಮೃತದೇಹವನ್ನ ವಶಪಡಿಸಿಕೊಳ್ಳಲಾಗಿದೆ. ಇಲ್ಲಿ 70ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಯುಸ್ಕಿರ್ಚೆನ್​ನಲ್ಲಿ 15 ಮಂದಿ ಹಾಗೂ ಬೊನ್​​ನಲ್ಲಿ 4 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ 6 ಮನೆಗಳು ತೊಳೆದುಕೊಂಡು ಹೋಗಿವೆ ಅಂತಾ ವರದಿಯಾಗಿದೆ.

ಜರ್ಮನ್ ಚಾನ್ಸಲರ್​ ವಾಸಿಂಗ್ಟನ್ ಪ್ರವಾಸದಲ್ಲಿದ್ದು, ಭೀಕರ ಪ್ರವಾಹವನ್ನ ಕಂಡು ಆಘಾತ ಸೂಚಿಸಿದ್ದಾರೆ. ನಿಜಕ್ಕೂ ದೇಶಕ್ಕೆ ಮಾನವೀಯ ವಿಪತ್ತು ಸಂಭವಿಸಿದೆ ಎಂದಿದ್ದಾರೆ.

The post ಜರ್ಮನಿಯಲ್ಲಿ ಮಹಾ ಪ್ರವಾಹ; 60ಕ್ಕೂ ಹೆಚ್ಚು ಮಂದಿ ಸಾವು appeared first on News First Kannada.

Source: newsfirstlive.com

Source link