ಆಕ್ಸಿಜೆನ್ ಆಕ್ಸಿಜೆನ್ ಆಕ್ಸಿಜೆನ್.. ಬಹುಶಃ ಹಿಂದೆಂದೂ ಇಡೀ ಮಾನವ ಕುಲವೇ ಪ್ರಾಣವಾಯುವಿಗಾಗಿ ಇಷ್ಟು ಪರಿತಪಿಸಿರಲಿಲ್ಲ. ಅದ್ರಲ್ಲೂ ನಮ್ಮ ದೇಶದಲ್ಲಿ ಇಂದು ಕಾಶ್ಮೀರದಿಂದ ಕನ್ಯಾಕುಮಾರಿ ತನಕ, ಗುಜರಾತ್​ನಿಂದ ಪಶ್ಚಿಮ ಬಂಗಾಳದ ತನಕ ಎಲ್ಲ ಅತ್ಯಂತ ಅವಶ್ಯಕ ವಸ್ತುವೆಂದ್ರೆ ಅದು ಆಕ್ಸಿಜೆನ್.. ಆಕ್ಸಿಜೆನ್ ಅಭಾವ ಕಾಡುತ್ತಿರುವ ಇಂದಿನ ಸಂದರ್ಭದಲ್ಲಿ ಜರ್ಮನಿ ಭಾರತದ ನೆರವಿಗೆ ಬಂದಿದೆ. ಅದೂ ಅಂತಿಂಥ ನೆರವಲ್ಲ ಲಕ್ಷಾಂತರ ಜನರ ಪ್ರಾಣ ಉಳಿಸುವಂಥ ನೆರವು..

ಯಾಕೆ ದೇಶದಲ್ಲಿ ಇಷ್ಟು ಆಕ್ಸಿಜೆನ್ ಅಭಾವ ಉಂಟಾಗ್ತಿದೆ? ನಮ್ಮ ಸುತ್ತ ಮುತ್ತ ಸಾಕಷ್ಟು ಆಕ್ಸಿಜೆನ್ ಇದೆಯಲ್ವಾ? ಅಷ್ಟಾಗಿಯೂ ಆಕ್ಸಿಜೆನ್ ಕಡಿಮೆ ಎನಿಸಿದ್ರೆ ಅರಳಿ ಮರಾನೋ? ಆಲದ ಮರಾನೋ? ಅಥವಾ ಔದಂಬರ ಮರವೋ? ಅದರ ಕಳಗೆ ಹೋಗಿ ಕುಳಿತರೆ ಸಾಕಷ್ಟು ಆಕ್ಸಿಜೆನ್ ಸಿಗುತ್ತಲ್ವಾ? ಅನ್ನೋ ಪ್ರಶ್ನೆ ಇಂದು ಹಲವರನ್ನು ಕಾಡುತ್ತಿರಬಹುದು. ಅದು ನಿಜ.. ಖಂಡಿತ ಇಂಥ ಮರಗಳ ಕೆಳಗೆ ಉಳಿತರೆ ತಂಪಾಗಿಯೂ ಇರುತ್ತೆ.. ಪ್ರಾಣವಾಯೂ ಹೆಚ್ಚಾಗಿಯೂ ಸಿಗುತ್ತೆ.. ಆದ್ರೆ ಅದಕ್ಕೆ ನಿಮ್ಮ ಶ್ವಾಸಕೋಶ ಸ್ಪಂದಿಸುತ್ತಾ? ನೀವು ಆರೋಗ್ಯವಾಗಿದ್ರೆ ಖಂಡಿತ ಸ್ಪಂದಿಸುತ್ತೆ.

ಆದ್ರೆ ಆತ ಕೊರೊನಾ ಸೋಂಕಿತನಾಗಿದ್ರೆ.. ರಕ್ತದಲ್ಲಿನ ಆಕ್ಸಿಜನ್ ಪ್ರಮಾಣ 90ಕ್ಕಿಂತ ಕಡಿಮೆ ಇಳಿದ್ರೆ.. ಸ್ಪಂದಿಸಲ್ಲ.. ಆಗ ಆತನಿಗೆ ಕಾಡಿನ ಮಧ್ಯದಲ್ಲಿ ಬಿಟ್ಟರೂ ಅಷ್ಟೇ.. ನಾಲ್ಕು ಗೋಡೆ ಮಧ್ಯದಲ್ಲಿ ಕೂರಿಸಿದರೂ ಅಷ್ಟೇ.. ಉಪಯೋಗವಾಗಲ್ಲ.. ಅಂಥ ಸೋಂಕಿತ ಉಳಿಬೇಕಿದ್ರೆ.. ಆತನಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಬೇಕು ಮತ್ತು ಅಂಥ ವ್ಯವಸ್ಥೆ ಮಾಡಬೇಕಾದ್ರೆ.. ಆಗ ಮೆಡಿಕಲ್ ಗ್ರೇಡ್ ಲಿಕ್ವಿಡ್ ಆಕ್ಸಿಜೆನ್ ಬೇಕೇಬೇಕು.. ಅದರ ಅಭಾವವೇ ಇಂದು ಇಡೀ ದೇಶ ಉಸಿರು ಉಸಿರು ಉಸಿರು ಅಂತಾ ಪರಿತಪಿಸುವಂತೆ ಮಾಡಿದೆ.. ಆ ಅಭಾವ ನೀಗಲು ಹಲವು ದೇಶಗಳು.. ಹಲವು ಖಾಸಗೀ ಸಂಸ್ಥೆಗಳು ಸಾಕಷ್ಟು ಸಹಾಯ ಮಾಡಿವೆ ಮತ್ತು ನಿರಂತರವಾಗಿ ಮಾಡುತ್ತಲೇ ಇವೆ.. ಆದ್ರೆ ಈಗ ಜರ್ಮನಿ ಮಾಡಿರೋ ಸಹಾಯ ಮಾತ್ರ ಹಿಂದೆಂದೂ ಕಾಣದ್ದು ಮತ್ತು ಲಕ್ಷಾಂತರ ಜೀವಗಳನ್ನು ಉಳಿಸುವಂಥದ್ದು..

ಹೌದು.. ಜರ್ಮನಿ ಅಂಥದ್ದೊಂದು ಸಹಾಯವನ್ನು ಭಾರತಕ್ಕಾಗಿ ಮಾಡಿದೆ. ಅತಿ ದೊಡ್ಡ ಆಕ್ಸಿಜೆನ್ ಪ್ಲಾಂಟ್​ ಅನ್ನೇ ಏರ್​ ಲಿಫ್ಟ್ ಮಾಡಿದೆ. ಜರ್ಮನ್ ಏರ್​ಫೋರ್ಸ್​ನ ಅತಿ ದೊಡ್ಡದಾದ ಎರಡು ವಿಮಾನಗಳು ಅದನ್ನು ಹೊತ್ತು ತರುತ್ತಿವೆ.

ಪ್ರತಿದಿನ 4-20 ಲಕ್ಷ ಲೀಟರ್ ಆಕ್ಸಿಜನ್ ಉತ್ಪಾದಿಸೋ ಪ್ಲಾಂಟ್
ಬೃಹತ್ ಆಕ್ಸಿಜೆನ್ ಪ್ಲಾಂಟ್ ಹೊತ್ತು ತಂದ ಜರ್ಮನ್ ಏರ್​ಫೋರ್ಸ್​ನ ಎ-400ಎಂ ವಿಮಾನ

ನಿಜಕ್ಕೂ ಇದು ಅಚ್ಚರಿಯ ಮತ್ತು ಅದ್ಭುತವೆನಿಸುವಂಥ ಪ್ರಕ್ರಿಯೆ. ಯಾಕಂದ್ರೆ ಜರ್ಮನಿ ಭಾರತಕ್ಕೆ ಅಂಥದ್ದೊಂದು ಬೃಹತ್ ಆಕ್ಸಿಜೆನ್ ಪ್ಲಾಂಟ್ ಅನ್ನೇ ಕಳಿಸಿದೆ. ಹಾಗೆ ನೋಡಿದ್ರೆ ಈಗ ಅಮೆರಿಕಾ, ಇಂಗ್ಲೆಂಡ್, ಫ್ರಾನ್ಸ್, ಇಸ್ರೇಲ್, ರಷ್ಯಾ, ಸಿಂಗಾಪೋರ್ ಮುಂತಾದ 40 ಕ್ಕೂ ಹೆಚ್ಚು ರಾಷ್ಟ್ರಗಳು ಭಾರತಕ್ಕೆ ಸಾಕಷ್ಟು ನೆರವಾಗಿವೆ. ನೂರಾರು ಆಕ್ಸಿಜೆನ್ ಕಾನ್ಸಂಟ್ರೇಟರ್​ಗಳನ್ನೂ ಕಳಿಸಿವೆ. ಆದ್ರೆ, ಜರ್ಮನಿ ಕಳಿಸಿರೋದು ಆಕ್ಸಿಜೆನ್ ಕಾನ್ಸಂಟ್ರೇಟರ್​ಗಳಲ್ಲ..  ಬದಲಿಗೆ ತನ್ನ ದೇಶದ ಸ್ಟೇಟ್ ಆಫ್ ಆರ್ಟ್ ಅಂದ್ರೆ ದೇಶದ ಗೌರವದಾಯವಾದಂಥ ಬೃಹತ್ ಆಕ್ಸಿಜೆನ್ ಪ್ಲಂಟ್​ ಅನ್ನೇ ಕಳಿಸಿದೆ. ಅದೂ ಅಂತಿಂಥ ಪ್ಲಾಂಟ್ ಅಲ್ಲ ಬದಲಿಗೆ ಒಂದು ಅಂದಾಜಿನ ಪ್ರಕಾರ ಪ್ರತಿ ದಿನ 4-20 ಲಕ್ಷ ಲೀಟರ್ ಆಕ್ಸಿಜೆನ್ ಉತ್ಪಾದಿಸುವಂಥ ಬೃಹತ್ ಫ್ಯಾಕ್ಟರಿಯನ್ನೇ ಏರ್​ಲಿಫ್ಟ್ ಮಾಡಲಾಗಿದೆ. ಜರ್ಮನಿ ಏರ್​ಫೋರ್ಸ್​ನ    ಎ-400ಎಂ ಹೆಸರಿನ ವಿಮಾನಗಳು ಎರಡು ಭಾಗಗಳಲ್ಲಿ ಅದನ್ನು ಹೊತ್ತು ತರ್ತಿವೆ. ನಿನ್ನೆ ಈಗಾಗಲೇ ಒಂದು ಭಾಗ ನವದೆಹಲಿಗೆ ಬಂದಿದ್ದು, ಇನ್ನೊಂದು ಭಾಗ ಶೀಘ್ರ ತಲುಪಲಿದೆ.

ಮುಳುಗುವವನಿಗೆ ತೆಲುವ ಕಡ್ಡಿಯೂ ಆಸರೆ ಆಗಬಹುದು ಅಂತಾರೆ. ಹಾಗಿದ್ದಾಗ ಆಕ್ಸಿಜೆನ್ಅತ್ಯಂತ ಅವಶ್ಯವಾಗಿರೋ ನಮ್ಮ ದೇಶಕ್ಕೆ ಇಂಥ ಬೃಹತ್ ಆಕ್ಸಿಜೆನ್ ಜನರೇಟಿಂಗ್ ಪ್ಲಾಂಟ್ ಬರ್ತಿದೆಯೆಂದರೆ ನಿರೀಕ್ಷೆ ಗರಿಗೆದರುತ್ತೆ. ಹಾಗಿದ್ದರೆ ಈ ಪ್ಲಾಂಟ್ ಯಾವಾಗಿನಿಂದ ಕಾರ್ಯ ನಿರ್ವಹಸುತ್ತೆ? ಈದನ್ನು ಜೋಡಿಸೋದು ಯಾರು? ಇದನ್ನು ಆಪರೇಟ್ ಮಾಡೋದು ಯಾರು? ಅನ್ನೋ ಪ್ರಶ್ನೆ ಸಹಜವಾಗಿ ಮೂಡುತ್ತೆ.. ಅದಕ್ಕೆ ಉತ್ತರ ಇಲ್ಲಿದೆ:

ಈ ಆಕ್ಸಿಜನ್ ಪ್ಲಾಂಟ್ ಸುಮ್ಮನೇ ದೇಶಕ್ಕೆ ಬಂದಿಲ್ಲ. ಇದರ ಬಗ್ಗೆ ಸಾಕಷ್ಟು ಉನ್ನತ ಮಟ್ಟದ ಅಗ್ರೀಮೆಂಟ್​ಗೆ ಭಾರತ ಸರ್ಕಾರ ಮತ್ತು ಜರ್ಮನಿ ಸರ್ಕಾರಗಳು ಸಹಿ ಹಾಕಿವೆ. ಜೊತೆಗೆ ಮೋದಿ ಸರ್ಕಾರ ವಾರಂಟಿ ಅಗ್ರೀಮೆಂಟ್​ಗೂ ಸಹಿ ಹಾಕಿದೆ. ಅಂದ್ರೆ, ಈ ಆಕ್ಸಿಜೆನ್ ಪ್ಲಾಂಟ್​​ ಪರ್ಮನೆಂಟ್ ಆಗಿ ಭಾರತದಲ್ಲಿ ಇರಲಲ್ಲ. ಯಾವಾಗ ಭಾರತದ ಆಕ್ಸಿನ್ ಬೇಡಿಕೆ ಕುಂಠಿತವಾಗುತ್ತೆ ಮತ್ತು ನಿರ್ವಹಣೆಗೆ ಸ್ಥಳೀಯ ಪ್ಲಾಂಟ್​ಗಳು ಸಾಕು ಅನಿಸುತ್ತೋ ಅಂಥ ಸಮಯದಲ್ಲಿ ಇದನ್ನು ಜರ್ಮನ್ ಸರ್ಕಾರ ಮರಳಿ ಪಡೆಯುತ್ತೆ. ಹೀಗಾಗಿಯೇ ಇದರ ಸೇಫ್ಟ್​ ಕೂಡ ಭಾರತ ಸರ್ಕಾರದ ಹೊಣೆಯಾಗಿದೆ. ಒಂದು ವೇಳೆ ಈ ಪ್ಲಾಂಟ್​ಗೆ ಏನಾದ್ರೂ ಧಕ್ಕೆ ಯಾದರೆ, ಅದರ ವೆಚ್ಚವನ್ನೂ ಭಾರತ ಭರಿಸಬೇಕಾಗುತ್ತದೆ. ಅಷ್ಟೇ ಅಲ್ಲ, ಈ ಪ್ಲಾಂಟ್ ಜೋಡಿಸಲು ಮತ್ತು ಪ್ರಾರಂಭಿಕ ನಿರ್ವಹಣೆಗಾಗಿ ಹಾಗೂ ಭಾರತೀಯ ತಜ್ಞರಿಗೆ ಟ್ರೇನಿಂಗ್ ನೀಡುವುದಕ್ಕಾಗಿ ಈಗಾಗಲೇ ಜರ್ಮನಿ ಸೇನೆಯ 12 ವೈದ್ಯಾಧಿಕಾರಿಗಳು ಭಾರತಕ್ಕೆ ಬಂದಿಳಿದಿದ್ದಾರೆ. ಒಪ್ಪಂದದ ಅನ್ವಯ ಟ್ರೇನಿಂಗ್ ಕಂಪ್ಲೀಟ್ ಆಗುವ ತನಕ ಅವರು ಭಾರತದಲ್ಲಿ ಇರ್ತಾರೆ. ಹೀಗಾಗಿ ಎರಡೂ ಭಾಗಗಳನ್ನು ಜೋಡಿಸುವ ಮತ್ತು ಅದರಿಂದ ಆಕ್ಸಿಜನ್ ಉತ್ಪಾದಿಸುವ ಕಾರ್ಯ ಕೂಡ ಅತಿ ಶೀಘ್ರದಲ್ಲಿಯೇ ಆರಂಭವಾಗಲಿದೆ ಅಂತಾ ಹೇಳಲಾಗ್ತಿದೆ..

ಎಲ್ಲಿ ಸ್ಥಾಪನೆಯಾಗುತ್ತೆ ಆಕ್ಸಿಜೆನ್ ಜನರೇಟಿಂಗ್ ಪ್ಲಾಂಟ್?

ಆಕ್ಸಿಜೆನ್ ಜನರೇಟಿಂಗ್ ಪ್ಲಾಂಟ್ ಏನೋ ಭಾರತಕ್ಕೆ ಬಂದಿಳಿದಿದೆ. ಹೀಗಾಗಿ ಇದು ಎಲ್ಲಿ ಸ್ಥಾಪನೆಯಾಗುತ್ತೆ? ಅನ್ನೋ ಪ್ರಶ್ನೆ ಸಹಜವಾಗಿ ಮೂಡಿದೆ. ಸದ್ಯದ ಮಾಹಿತಿ ಪ್ರಕಾರ ಜರ್ಮನಿಯಿಂದ ಬಂದಿರೋ ಈ ಬೃಹತ್ ಆಕ್ಸಿಜೆನ್ ಪ್ಲಾಂಟ್​ ಅನ್ನು ನವಹದೆಹಲಿ ಸರ್ದಾರ್ ವಲ್ಲಭಾಯಿ ಪಟೇಲ್ ಸ್ಟೇಡಿಯಂನಲ್ಲಿ ಸ್ಥಾಪನೆ ಮಾಡಲಾಗುತ್ತೆ. ಈ ಸ್ಟೇಡಿಯಂನಲ್ಲಿ ಭಾರತದ ಡಿಫೆನ್ಸ್ ರೀಸರ್ಚ್ ಅಂಡ್ ಡೆವಲಪ್​ಮೆಂಟ್ ಆರ್ಗನೈಸೇಶನ್ 500 ಬೆಡ್​ಗಳ ಕೋವಿಡ್ ಆಸ್ಪತ್ರೆ ಸ್ಥಾಪಿಸಿದೆ. ಹೀಗಾಗಿ ಇಲ್ಲಿಂದಲೇ ಆಕ್ಸಿಜೆನ್ ಹಂಚಿಕೆ ಆರಂಭವಾಗಲಿದೆ.

ಒಂದು ಕಡೆ ನೋಡಿದ್ರೆ ಆಕ್ಸಿಜೆನ್ ಪ್ಲಾಂಟ್​.. ಆಕ್ಸಿಜೆನ್ ಕಾನ್ಸಂಟ್ರೇಟರ್ ಇಂಥ ಶಬ್ದಗಳು ಇತ್ತೀಚೆಗೆ ಅತಿಹೆಚ್ಚಾಗಿ ಕೇಳಿ ಬರ್ತಿವೆ. ಆದ್ರೆ ಇವುಗಳ ಉಪಯೋಗ ಏನು? ಅದ್ರಲ್ಲೂ ಇಷ್ಟು ದೊಡ್ಡ ಪ್ರಮಾಣದ ಆಕ್ಸಿಜೆನ್ ಪ್ಲಾಂಟ್​ನಿಂದ ಏನು ಉಪಯೋಗ? ಅದು ಆಕ್ಸಿಜೆನ್ ಅನ್ನು ಎಲ್ಲಿಂದ ತರುತ್ತೆ? ಅಥವಾ ಆಕ್ಸಿಜೆನ್ ಅನ್ನು ಅದೇ ಉತ್ಪಾದನೆ ಮಾಡುತ್ತಾ? ಸೋಂಕಿತರ ಮೂಗಿನಿಂದ ಉಸಿರಾಟ ಸಾಧ್ಯವಾಗದೇ ಹೀಗೆ ಕೃತಕ ಉಸಿರಾಟದ ಮೂಲಕ ಆಕ್ಸಿಜೆನ್ ಅನ್ನು ನೀಡದಾಗ ಹೇಗೆ ಜೀವ ಉಳಿಯುತ್ತೆ? ಮುಂತಾದ ಪ್ರಶ್ನೆಗಳಿಗೆ ನೀವೂ ಉತ್ತರ ತಿಳಿಯಲೇ ಬೇಕು.

ಆಕ್ಸಿಜೆನ್ ಪ್ಲಾಂಟ್​ಗಳು ಹೇಗೆ ಆಕ್ಸಿಜೆನ್ ಉತ್ಪಾದನೆ ಮಾಡುತ್ತವೆ ಅನ್ನೋದನ್ನು ತಿಳಿಯೋದಕ್ಕಿಂತ ಮುನ್ನ ಒಂದು ನಮ್ಮ ಉಸಿರಾಟದ ಪ್ರಕ್ರಿಯೆ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ನಮ್ಮ ಸುತ್ತ ಮುತ್ತಲಿನ ವಾತಾವರಣದಲ್ಲಿ ಶೇ.78ರಷ್ಟು ನೈಟ್ರೋಜನ್ ಅನ್ನೋ ಅನಿಲ ಇರುತ್ತೆ. ಅದ್ರಲ್ಲೂ ಕೇವಲ ಶೇ.21 ರಷ್ಟು ಆಕ್ಸಿಜೆನ್ ಇದ್ದರೆ ಶೇ.1 ರಷ್ಟು ಕಾರ್ಬನ್ ಡೈ ಆಕ್ಸೈಡ್, ಕಾರ್ಬನ್ ಮೊನಾಕ್ಸೈಡ್ ಸೇರಿದಂತೆ ಇತರೆ ಅನಿಲಗಳಿರುತ್ತವೆ. ಆದ್ರೆ ನಮ್ಮ ಮೂಗು ಮಾತ್ರ ನೈಟ್ರೋಜನ್ ಹೆಚ್ಚಿದೆಯಂತೆ ಅದನ್ನು ಒಳಗೆ ಎಳೆದುಕೊಳ್ಳುವುದಿಲ್ಲ.. ಬದಲಿಗೆ, ಆಕ್ಸಿಜನ್ ಅನ್ನು ಮಾತ್ರ ಒಳಗೆ ಎಳೆದುಕೊಳ್ಳುತ್ತೆ. ಹೀಗೆ ಒಳಗೆ ಬರುವ ಆಕ್ಸಿಜನ್​ನೊಂದಿಗೆ ಧೂಳಿನ ಕಣಗಳು, ಇತರೆ ಅಂಶಗಳು ಬಂದಿರುತ್ತವೆ. ಅಂಥವನ್ನು ಮೂಗಿನಲ್ಲಿನ ಕೂದಲು, ತೇವಾಂಶ, ಮೈಕ್ರೋ ಫಿಲ್ಟರ್​ಗಳು ಫಿಲ್ಟರ್ ಮಾಡುತ್ತವೆ. ಜೊತಗೆ ಶ್ವಾಸನಾಳದಲ್ಲಿಯ ಅಂಶಗಳು ಕೂಡ ಅದನ್ನು ಕ್ಲೀನ್ ಮಾಡಿ ಸಾಧ್ಯವಾದಷ್ಟು ಕ್ಲೀನ್ ಆಮ್ಲಜನಕವನ್ನು ಶ್ವಾಸಕೋಶಕ್ಕೆ ತಲುಪಿಸುತ್ತವೆ. ಹೀಗೆ ಒಳ ಹೋಗು ಆಮ್ಲಜನಕ ನಮ್ಮ ಶ್ವಾಸಕೋಶದ ಎರಡೂ ಭಾಗಗಳಿಗೆ ತಲುಪುತ್ತವೆ. ಮತ್ತು ಶ್ವಾಸಕೋಶದಲ್ಲಿರುವ ಅಸಂಖ್ಯೆ ಬಲೂನಿನಂಥ ಅಂಶಗಳು ಆಕ್ಸಿಜೆನ್​ ಅನ್ನು ಹೀರಕೊಂಡು ರಕ್ತದಲ್ಲಿರುವ ಕೆಂಪು ರಕ್ತಕಣದಕ್ಕೆ ಸೇರಿಸುತ್ತವೆ.  ಹೀಗೆ ಕೆಂಪು ರಕ್ತ ಕಣ ಸೇರುವ ಆಮ್ಲಜನಕ ಬಳಿಕ ಜೀವಕೊಶಗಳಿಗೂ ರವಾನೆಯಾಗಿ ಅವು ಸರಾಗವಾಗಿ ಕಾರ್ಯ ನಿರ್ವಹಿಸಲು ಸಹಾಯವಾಗುತ್ತದೆ.

ಆದ್ರೆ ಕೊರೊನಾ ಸೋಂಕು ಉಲ್ಬಣಗೊಂಡಾಗ ಶ್ವಾಸಕೋಶದ ಕಾರ್ಯಕ್ಷಮತೆ ಕ್ಷೀಣಿಸುವಂತೆ ಅದು ಮಾಡುತ್ತದೆ. ಹೀಗಾಗದಾಗ ದೇಹಕ್ಕೆ ಬೇಕಾದಷ್ಟು ಆಮ್ಲಜನಕ ಪೂರೈಕೆ ಆಗೋದಿಲ್ಲ. ಹೀಗಾದಾಗ ಆಮ್ಲಜನಕ ಪ್ರಮಾಣದ ಕುಸಿದು ಆಕ್ಸಿಮೀಟರ್​ನಲ್ಲಿ ಚೆಕ್ ಮಾಡಿದಾಗ ಅದು 90 ಕ್ಕಿಂತ ಕಡಿಮೆ ಹೋಗ್ತಿರೋದು ಕಂಡು ಬರುತ್ತೆ. ಇದು ಉಲ್ಬಣಗೊಂಡು ಆ ಪ್ರಮಾಣ ಇನ್ನೂ ಕನಿಷ್ಠ ಮಟ್ಟಕ್ಕೆ ಹೋದಷ್ಟು ಅದು ಜೀವಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚುತ್ತೆ. ಅದೇ ಕಾರಣದಿಂದಾಗಿ ಅಂಥ ಸೋಂಕಿತರಿಗೆ ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗುತ್ತೆ ಮತ್ತು ಆಕ್ಸಿಜೆನ್ ಅನ್ನು ಪೂರೈಕೆ ಮಾಡಬೇಕಾಗುತ್ತದೆ.

ಯಾವಾಗ ದೇಹಕ್ಕೆ ನೈಸರ್ಗಿಕವಾಗಿ ಉಸಿರಾಟ ಸಾಧ್ಯವಾಗುವುದಿಲ್ಲವೋ ಅಂಥ ವೇಳೆ ಆಕ್ಸಿಜೆನ್ ಅನ್ನು ನೀಡಬೇಕಾಗುತ್ತದೆ. ಇದಕ್ಕಾಗಿ ಸಾಮಾನ್ಯವಾಗಿ ಮೆಡಿಕಲ್ ಗ್ರೇಡ್ ಲಿಕ್ವಿಡ್ ಆಕ್ಸಿಜೆನ್ ಬೇಕಾಗುತ್ತದೆ. ಅಂಥ ಆಕ್ಸಿಜೆನ್ ಅನ್ನು ಜರ್ಮನಿಯ ಈ ಪ್ಲಾಂಟ್​ಗಳು ಉತ್ಪಾದನೆ ಮಾಡುತ್ತವೆ. ಹಾಗೆ ಉತ್ಪಾದನೆ ಮಾಡುವ ವಿಧಾನ ನಮ್ಮ ಉಸಿರಾಟದ ವಿಧಾನಕ್ಕಿಂತ ವಿಭಿನ್ನವಾಗೇನೂ ಇರೋದಿಲ್ಲ..

ಹೌದು.. ಈ ಆಕ್ಸಿಜೆನ್​ ಪ್ಲಾಂಟ್​ಗಳೂ ಆಕ್ಸಿಜೆನ್ ಅನ್ನು ಉತ್ಪಾದನೆ ಮಾಡೋದಿಲ್ಲ ಅಥವಾ ಲ್ಯಾಬ್​ನಲ್ಲಿ ತಯಾರಿಸೋದಿಲ್ಲ. ಬದಲಿಗೆ ನಮ್ಮ ಸುತ್ತಲಿನ ವಾತಾವರಣದಿಂದಲೇ ಆಕ್ಸಿಜೆನ್ ಅನ್ನು ಉತ್ಪಾದನೆ ಮಾಡುತ್ತವೆ. ಪ್ರಾರಂಭದಲ್ಲಿ ಬರುವ ಗಾಳಿಯನ್ನು ಫಿಲ್ಟರ್ ಮಾಡಲಾಗುತ್ತದೆ. ಬಳಿಕ ನೈಟ್ರೋಜನ್, ಆಕ್ಸಿಜೆನ್ ಮತ್ತು ಇತರೆ ಅಂಶಗಳನ್ನು ಬೇರ್ಪಡಿಸಲಾಗುತ್ತದೆ. ಬಳಿಕ ತೇವಾಂಶ ಮತ್ತು ಇತರೆ ಅನಿಲಗಳನ್ನು ಬೇರ್ಪಡಿಸಿ -173 ಡಿಗ್ರಿಯಲ್ಲಿ ಅದನ್ನು ಪ್ರೊಸೆಸ್ ಮಾಡಲಾಗುತ್ತದೆ. ಬಳಿಕ ಅದು ದ್ರವರೂಪ ಪಡೆದುಕೊಂಡು ಲಿಕ್ವಿಡ್ ಆಕ್ಸಿಜೆನ್ ಆಗಿ ಬದಲಾಗುತ್ತದೆ. ತನದನಂತರದಲ್ಲಿ ಅದ್ರಲ್ಲಿರುವ ಬ್ಯಾಕ್ಟಿರಿಯಾ, ವೈರಸ್ ಇವುಗಳನ್ನೆಲ್ಲ ಶುದ್ಧೀಕರಿಸಿ ಮೆಡಿಕಲ್ ಗ್ರೇಡ್ ಲಿಕ್ವಿಡ್ ಆಕ್ಸಿಜೆನ್ ಅನ್ನು ಸಿಲಿಂಡರ್​ ಅಥವಾ ಟ್ಯಾಂಕರ್ ಮೂಲಕ ಇತರೆಡೆ ಸಾಗಿಸಲಾಗುತ್ತದೆ. ಇಂಥ ಲಿಕ್ವಿಡ್ ಆಕ್ಸಿಜೆನ್ ಅನ್ನು ಫೋರ್ಸ್​ ಮೂಲಕ ಸೋಂಕಿತರ ಶ್ವಾಸಕೋಶ ತಲುಪಿಸಲಾಗುತ್ತದೆ. ಈ ಮೂಲಕ ದೇಹಕ್ಕೆ ಬೇಕಾದಷ್ಟು ಆಕ್ಸಿಜೆನ್ ಪೂರೈಕೆ ಮಾಡಬಹುದಾಗಿದೆ ಮತ್ತು ವ್ಯಕ್ತಿಗಳನ್ನು ಉಳಿಸಿಕೊಳ್ಳಲು ಇದ್ರಿಂದ ಸಾಧ್ಯವಾಗುತ್ತದೆ. ಇದೇ ಕಾರಣದಿಂದ ಜರ್ಮನಿಯಿಂದಬಂದಿರುವ ಆಕ್ಸಿಜೆನ್ ಪ್ಲಾಂಟ್​ಗಳು ಇಂದು ಇಷ್ಟು ಮಹತ್ವವನ್ನು ಪಡೆದುಕೊಂಡಿವೆ.

ಒಟ್ಟಿನಲ್ಲಿ  Freind in need is a Freind indeed ಅಂತಾರೆ.. ಅಂದ್ರೆ ಕಷ್ಟದಲ್ಲಿ ಆದವನೇ ಸ್ನೇಹಿತ ಅನ್ನೋದು ಇದರ ಅರ್ಥ. ಈ ಮಾತು ಇಂದಿನ ದಿನಗಳಲ್ಲಿ ಅತ್ಯಂತ ಹೆಚ್ಚು ಉಪಯುಕ್ತವಾಗ್ತಿದೆ. ಯಾಕಂದ್ರೆ ಕೇವಲ ವ್ಯಕ್ತಿಗಳಿಗೆ ಮಾತ್ರವಲ್ಲ ದೇಶಗಳಿಗೂ ಇಂದು ಸ್ನೇಹಿತರ ಅವಶ್ಯಕತೆ ಅತಿ ಹೆಚ್ಚಿದೆ. ಅದ್ರಲ್ಲೂ ಕೊರೊನಾ ಸುನಾಮಿಗೆ ಸಿಕ್ಕು ಮಾನವ ಕುಲವೇ ವಿಲ ವಿಲ ಅಂತಿರೋ ಇಂದಿನ ಸಂದರ್ಭದಲ್ಲಿ ಅಂಥ ಸ್ನೇಹಿತರ ಅವಶ್ಯಕತೆ ಹಿಂದೆಂದಿಗಿಂತ ಹೆಚ್ಚಿದೆ..

 ವಿಶೇಷ ವರದಿ: ರಾಘವೇಂದ್ರ ಗುಡಿ

The post ಜರ್ಮನಿಯಿಂದ ಭಾರತಕ್ಕೆ ಬಂದಿರೋ ಆಕ್ಸಜನ್ ಜನರೇಟಿಂಗ್ ಪ್ಲಾಂಟ್ ಎಲ್ಲಿ ಸ್ಥಾಪನೆಯಾಗುತ್ತೆ? appeared first on News First Kannada.

Source: newsfirstlive.com

Source link