ನವದೆಹಲಿ: ಕೊರೊನಾ ವೈರಸ್​​ ವಿರುದ್ದದ ಹೋರಾಟವನ್ನ ಬಲಗೊಳಿಸಲು ಹಲವಾರು ದೇಶಗಳು ಭಾರತಕ್ಕೆ ಸಹಾಯಹಸ್ತ ಚಾಚಿವೆ. ಆಕ್ಸಿಜನ್ ಕಾನ್ಸಂಟ್ರೇಟರ್​ಗಳು, ಔಷಧಿಗಳು ಹಾಗೂ ವೈದ್ಯಕೀಯ ಉಪಕರಣಗಳನ್ನ ಭಾರತಕ್ಕೆ ಕಳಿಸುವ ಮೂಲಕ ಸಂಕಷ್ಟದಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಬೆನ್ನಿಗೆ ನಿಂತಿವೆ.

ಜರ್ಮನಿ 120 ವೆಂಟಿಲೇಟರ್​​​​ಗಳನ್ನ ವಿಮಾನದ ಮೂಲಕ ಭಾರತಕ್ಕೆ ರವಾನೆ ಮಾಡಿದೆ. ನಿನ್ನೆ ರಾತ್ರಿ ಸುಮಾರು 10 ಗಂಟೆಗೆ ಇವು ದೇಶಕ್ಕೆ ತಲುಪಿವೆ. ಇನ್ನು ಈ ಬಗ್ಗೆ ಟ್ವಿಟರ್​​ನಲ್ಲಿ ಮಾಹಿತಿ ಹಂಚಿಕೊಂಡಿರುವ ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಮ್​​​​​ ಭಗ್ಚಿ ಈ ಜಾಗತಿಕ ಪಿಡುಗನ್ನ ಹೋಗಲಾಡಿಸಲು ನಮ್ಮೊಂದಿಗೆ ಸಹಕರಿಸಿರುವ ಜರ್ಮನಿಯು ನಮ್ಮ ವಿಶ್ವಾಸಾರ್ಹ ಪಾಲುದಾರರಾಗಿದ್ದು, 120 ವೆಂಟಿಲೇಟರ್​​​ಗಳ ಉಡುಗೊರೆಗಾಗಿ ಜರ್ಮನಿಗೆ ಕೃತಜ್ಞರಾಗಿದ್ದೇವೆ ಅಂತಾ ತಿಳಿಸಿದ್ದಾರೆ.

ಫ್ರಾನ್ಸ್​​​ನಿಂದ ಆಕ್ಸಿಜನ್​​​ ಉತ್ಪಾದನಾ ಘಟಕಗಳ ನೆರವು
ಫ್ರಾನ್ಸ್​​​​​ ಸಹ ಭಾರತದ ನೆರವಿಗೆ ಧಾವಿಸಿದ್ದು ಎಂಟು ವಿಶ್ವ ದರ್ಜೆಯ ಆಕ್ಸಿಜನ್ ಉತ್ಪಾದನಾ ಘಟಕಗಳನ್ನ ನೀಡಿದೆ. ಇಂದು ಬೆಳಗ್ಗೆ ಫ್ರಾನ್ಸ್​ನಿಂದ ನೆರವಿನ ಸಾಮಗ್ರಿಗಳನ್ನ ಹೊತ್ತು ಬಂದ ವಿಮಾನ ದೆಹಲಿಯನ್ನ ತಲುಪಿದೆ. ನೊವೈರ್​​​ ಎಂಬ ಫ್ರೆಂಚ್​​ ಕಂಪನಿ ಉತ್ಪಾದಿತ ವೈದ್ಯಕೀಯ ಸಾಮಗ್ರಿಗಳು ಒಂದು ದಶಕಕ್ಕೂ ಹೆಚ್ಚಿನ ಕಾಲ ದೇಶದ ಎಂಟು ಆಸ್ಪತ್ರೆಗಳನ್ನ ಸ್ವಾಯತ್ತ ಉತ್ಪಾದನಾ ಘಟಕಗಳಾಗಿ ಮಾಡಲಿವೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಫ್ರಾನ್ಸ್​​​ನ ಭಾರತದ ರಾಯಭಾರಿ ಟ್ವೀಟ್ ಮಾಡಿದ್ದು ಭಾರತ ಸದಾ ಫ್ರಾನ್ಸ್​​​ನ ಪರವಾಗಿ ನಿಂತಿದ್ದು ನಾವೆಲ್ಲಾ ಒಟ್ಟಿಗೆ ಈ ಕೊರೊನಾ ವೈರಸ್​​​ನ ವಿರುದ್ದ ಹೋರಾಡಲಿದ್ದೇವೆ ಅಂತಾ ತಿಳಿಸಿದ್ದಾರೆ.

ಬೆಲ್ಸಜಿಯಂನಿಂದ 9000 ಬಾಟಲಿ ರೆಮ್ಡೆಸಿವಿರ್ ರವಾನೆ
ಬೆಲ್ಜಿಯಂ 9000 ಬಾಟಲಿ ರೆಮ್ಡೆಸಿವಿರ್ ಔಷಧಿಯನ್ನ ಭಾರತಕ್ಕೆ ಕಳಿಸಿದೆ. ಇದಲ್ಲದೆ ಅಮೆರಿಕಾ, ಉಜ್ಬೇಕಿಸ್ತಾನ  ಮುಂತಾದ ರಾಷ್ಟ್ರಗಳಿಂದ ನೆರವಿನ ಮಹಾಪೂರ ಹರಿದುಬರ್ತಿದೆ. ಈ ಹಿನ್ನೆಲೆ  ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿ ಧನ್ಯವಾದ ಹೇಳಿದ್ದಾರೆ.

The post ಜರ್ಮನಿಯಿಂದ 120 ವೆಂಟಿಲೇಟರ್ಸ್​, ಬೆಲ್ಜಿಯಂನಿಂದ 9000 ರೆಮ್ಡೆಸಿವಿರ್, ಫ್ರಾನ್ಸ್​​ನಿಂದ ವೈದ್ಯಕೀಯ ಸಾಮಗ್ರಿ ಭಾರತಕ್ಕೆ ಆಗಮನ appeared first on News First Kannada.

Source: newsfirstlive.com

Source link