1/6
ನಟಿ ಸಮಂತಾಗೆ ಬೇಡಿಕೆ ಹೆಚ್ಚಿದೆ. ಕೇವಲ ಟಾಲಿವುಡ್ ಮಾತ್ರವಲ್ಲದೆ, ಬಾಲಿವುಡ್, ಕಾಲಿವುಡ್ನಲ್ಲೂ ಅವರು ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಸಮಂತಾ ಈಗ ಲೈಫ್ಅನ್ನು ಸಂಪೂರ್ಣವಾಗಿ ಎಂಜಾಯ್ ಮಾಡೋಕೆ ಆರಂಭಿಸಿದ್ದಾರೆ. ವಿಚ್ಛೇದನದ ನಂತರದಲ್ಲಿ ಸಮಂತಾ ಸಾಕಷ್ಟು ಕಡೆಗಳಲ್ಲಿ ಪ್ರವಾಸ ತೆರಳುತ್ತಿದ್ದಾರೆ.
2/6
ಸಮಂತಾ ಅವರು ಈ ಬಾರಿ ಕೇರಳದ ಆದಿರಪ್ಪಳ್ಳಿ ಜಲಪಾತಕ್ಕೆ ಭೇಟಿ ನೀಡಿದ್ದಾರೆ. ಜಲಪಾತದ ಪಕ್ಕದಲ್ಲಿ ಕುಳಿತು ಅವರು ಪೋಸ್ ನೀಡಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿದೆ.
3/6
ಸಮಂತಾ ಅವರು ಹಂಚಿಕೊಂಡ ಫೋಟೋ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಅವರ ಫೋಟೋಗೆ ನಾನಾ ರೀತಿಯಲ್ಲಿ ಕಮೆಂಟ್ಗಳನ್ನು ಅಭಿಮಾನಿಗಳು ಹಾಕುತ್ತಿದ್ದಾರೆ. ಅವರು ಎಂಜಾಯ್ ಮಾಡುತ್ತಿರುವ ರೀತಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ.
4/6
ಸಮಂತಾ ಈ ಮೊದಲು ಸ್ವಿಜರ್ಲೆಂಡ್ಗೆ ತೆರಳಿದ್ದರು. ಚಳಿಗಾಲದಲ್ಲಿ ಸ್ವಿಜರ್ಲೆಂಡ್ನಲ್ಲಿ ಹಿಮ ಬೀಳುತ್ತದೆ. ಅಲ್ಲಿಗೆ ತೆರಳಿ ಸಮಂತಾ ಹಿಮದ ಮೇಲೆ ಸ್ಕೀಯಿಂಗ್ ಮಾಡಿದ್ದರು. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.